ಶಾಪ ಗ್ರಸ್ತನು ನಾನು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಬುಧ್ಧಿಯಿಲ್ಲದ ಜೀವಿ
ಗುದ್ದಿ, ಗುದ್ದಿ ಹೊಡೆದರೆ,
ಬುರುಡೆ ಟೊಳ್, ಟೊಳ್ ಎಂದು
ನನ್ನ ಪೆದ್ದತನ ಡಂಗುರ ಮಾಡಿ ಬಿಟ್ಟೀತು
ನಾನು ಅತಿ ಸಾಮಾನ್ಯ ಮಾನವ
ಬಾಯಿ ಬಿಟ್ಟರೆ ಸಾಕು,
ಕಾಗೆಗಳೆಲ್ಲಾ ದನಿ ಕೂಡಿಸಿ
ಕರ್ಕಶ ಕಛೇರಿ ಆರಂಬಿಸಿ
ನಿಮ್ಮಂತಹ ಕೋಗಿಲೆಗಳಿಗೆ
ಕಿವಿ ನೋವು ಕೊಟ್ಟಿ ಬಿಟ್ಟೀತು
ಆಗಲೇ ಹೇಳಿದ ಶ್ರೀಮದ್ ಸಾಮಾನ್ಯ ನಾನು
ಕನ್ನಡಿಯ ಮುಂದೆ ಹಿಗ್ಗಿ ನಿಂತರೆ
ಗೂಬೆಗಳೂ ಅಣಗಿಸಿ ಛೀಮಾರಿ
ಮಾರಮ್ಮನ ಕೆತ್ತಿದ ಅಲ್ಪ ಶಿಲ್ಪಿಗೆ
ನಾನೇ ಸ್ಫೂರ್ತಿಯಂತೆ ನನ್ನ ನಂಬಿ
ಕುರೂಪ ರಾಜ್ಯ ಚಕ್ರಾಧಿಪತಿಯು ನಾನು
ಅದೇಕೆ ಎಂತೆಂಥಾ ರೂಪಸಿಯರೆಲ್ಲಾ
ತದೇಕ ಚಿತ್ತದಿಂದ ನನ್ನ ಹಿಂಬಾಲಿಸಿ
ನನ್ನ ಬಾಲದ ಮೇಲೆ ಅತಿ ಆಸೆಯಿಂದ
ಕೈಹಾಕುವರು ಎನ್ನುವುದು ನಿಮಗೆ ಗೊತ್ತೇ?
ಕಾಮ ಕೋಟಿಗೆ ಹೆಸರಾದವ ನಾನು ಎಂದೇ ಇರಬೇಕು