Tuesday, March 27, 2012

ಸಾಹಿತ್ಯ ಪ್ರಕಾರಗಳ ಬಗ್ಗೆ - ಕಿರು ಹರಟೆ

ಸಾಹಿತ್ಯ ಪ್ರಕಾರಗಳ ಬಗ್ಗೆ - ಕಿರು ಹರಟೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಕಥೆಯನ್ನೋ, ಕವನವನ್ನೋ, ಕಾದಂಬರಿಯನ್ನೋ, ನಾಟಕವನ್ನೋ ಸುಮ್ಮನೆ ಓದುವ ಸದ್ಪ್ರವ್ರುತ್ತಿಯೇ ನನಗೆ ಇಲ್ಲ. ನನ್ನ ಅಜ್ಜಿ ಆಗಿನ ಕಾಲದಲ್ಲಿ ದಿನಸಿ ಅಂಗಡಿಯಿಂದ ತಂದ  ಅಕ್ಕಿಯನ್ನು ಒಂದು ಮೊರದೊಳಗೆ ಹಾಕಿಕೊಂಡು, ಮತ್ತೆ, ಮತ್ತೆ ಕೇರುತ್ತಾ, ಕಣ್ಣಲ್ಲಿ ಕಣ್ಣಿಟ್ಟು ಕಲ್ಲು, ಮಣ್ಣು ಹೆಂಟೆ, ಹುಲ್ಲು ಬೀಜಗಳನ್ನು ಹುಡುಕಿ, ಹೆಕ್ಕಿ, ಬಿಸಾಡುತ್ತಿದ್ದರ ಸ್ವಭಾವ ನನಗೂ ಸಾಹಿತ್ಯ ಕ್ಷೇತ್ರದಲ್ಲಿ ಬಂದು ಬಿಟ್ಟಿರಬೇಕು. ಅದು ನನ್ನ ತಪ್ಪಲ್ಲ; ಜನ್ಮ ಬುಧ್ಧಿಯೇ ಇರಬೇಕು.

ಯಾವುದೇ ಸಾಹಿತ್ಯ ಪ್ರಕಾರವನ್ನು ರಚಿಸ ಬೇಕಾದರೂ, ಅದರಲ್ಲಿ ಕಲೆಯಿರಬೇಕು; ಕಲೆಯಿದ್ದರೆ ಮಾತ್ರ ಅದಕ್ಕೆ ಕಳೆಯು ತುಂಬಿಕೊಳ್ಳುತ್ತದೆ; ಇಲ್ಲದಿದ್ದರೆ, ಜೀವಾಳವೇ ಇಲ್ಲವೇನೋ ಎಂಬಂತೆ ಸತ್ತ ಹೆಣವಾಗಿ ಬಿಟ್ಟಿರುತ್ತದೆ. ಓ ! ನಾನೇಕೆ "ಸತ್ತ"  ಹೆಣ ಎಂದು ಬಿಟ್ಟೆ? ಅಂತಹ  ಸಾಹಿತ್ಯಕ್ಕೆ ಏನು ಮಾಡಿದರೂ ಜೀವವನ್ನು ತುಂಬಲಾಗದು ಎಂದು ಹೇಳಿ ತಪ್ಪಿಸಿಕೊಳ್ಳುತ್ತೇನೆ!

ಮಾತ್ರೆ, ಗುಣ, ಅನೇಕ ತರಹದ  ಪ್ರಾಸದ ತ್ರಾಸ  ಇತ್ಯಾದಿಗಳನ್ನು ತುರುಕೀ, ತುರುಕೀ ಕವನ ಬರೆಯುವವರು ನಿಮಗೆ ಗೊತ್ತಿರಬೇಕು. ಅವರ ಕವನಗಳು ಸುಲಭವಾಗಿ ಹರಿಯುವುದಿಲ್ಲ. ಅಂತಹವರ  ಕವನಗಳನ್ನು ಓದ ಬೇಕಾದರೆ, ಹೊಸಗನ್ನಡ, ಹಳೆಗನ್ನಡ, ಹಳೆಸಿ ವಾಸನೆ ಸೂಸುತ್ತಿರುವ ಕನ್ನಡಗಳ  ಶಬ್ದಕೋಶವನ್ನು ನಿಮ್ಮ ಪಕ್ಕದಲ್ಲಿಟ್ಟು ಕೊಳ್ಳಬೇಕು. ಯಾಕೆ ಗೊತ್ತೇ? ಇಂತಹ ಕವಿಗಳು ತಮ್ಮ  ಕವನವನ್ನು ರಚಿಸುವಾಗ (ಅಥವಾ "ಬರೆಯುವಾಗ" ಎನ್ನೋಣವೇ?) ತಮ್ಮ ಪಕ್ಕದಲ್ಲಿ ಒಂದು ಶಬ್ದಕೋಶವನ್ನು ಇಟ್ಟುಕೊಂಡೇ ಬರೆದಿರಬೇಕು. ಇವರು ಬರೆಯುವಾಗ, ಇವರು ಬಲವಂತವಾಗಿ ಹಿಡಿದು ಆ ಪದಗಳನ್ನು ತಮ್ಮ ಪದ್ಯಗಳಲ್ಲಿ ತುರುಕುವಾಗ, ಆ ಪದಗಳು ಗೊಳೋ ಎಂದು ಕಣ್ಣೀರು ಬಿಟ್ಟಿರಬೇಕು.  ಆ ಕಣ್ಣೀರಿನ ಕರೆಯು ಕಾಗದದ ಮೇಲೆಲ್ಲಾ ನಿಮಗೆ ಕಂಡು ಬಂದೇ ಬರುತ್ತದೆ. ಕೆಲವರ ಪದ್ಯಗಳಲ್ಲಿ ಅರ್ಥವಿಲ್ಲ  - ಪರ್ಥವಿಲ್ಲ. ಮತ್ತೆ ಕೆಲವರು, ಬೇರೆಯವರ ಕವನವನ್ನು ಕಾಪಿ ಹೊಡೆದು, ತಮ್ಮ ಹೆಸರಿನಲ್ಲಿ ಪ್ರಕಟಿಸಿ ಬಿಡುತ್ತಾರೆ. 

ಸಣ್ಣ ಕಥೆಗಾರರೂ ಅಂತೆಯೇ. ಕೆಲವರ ಕಥೆಗಳು ಎಲ್ಲೋ, ಹೇಗೋ, ಪ್ರಾರಂಭವಾಗಿ, ಎಲ್ಲೆಲ್ಲಿಯೋ ಗೊತ್ತು ಗುರಿಯಿಲ್ಲದ ಅಲೆಮಾರಿಯಂತೆ ಕೆಲವೊಮ್ಮೆ ಕುಂಟಿ, ಇದ್ದಕ್ಕಿದಂತೆ ದೌಡಾಯಿಸಿ, ಎಲ್ಲೆಲ್ಲೋ ಡಿಕ್ಕಿ ಹೊಡೆದು, ಗಬಕ್ಕನೆ ಮುಗಿದು ಬಿಡುತ್ತದೆ. ಪಾತ್ರಗಳೆಲ್ಲಾ ಅನಾಥರಾಗಿ, ಓದುಗರನ್ನು ಸೇರಿದಾಗ ಭಿಕ್ಷೆ ಬೇಡಬೇಕು. ಲಂಚವನ್ನು ಕೊಟ್ಟರೂ ಓದುಗರು ಓದಲು ಆಗುವುದಿಲ್ಲ. 

ಕಾದಂಬರಿಯನ್ನು ಸಣ್ಣ ಕಥೆಗಳ ದೊಡ್ಡ ಅಕ್ಕ ಎಂದೇ ತಿಳಿದಿರುವವರು ಅನೇಕ ಸಾಹಿತಿಗಳು, ವಿಮರ್ಷಕಾರರು ನನಗೇ ಗೊತ್ತು. ಕಥೆಯನ್ನು ಬೆಳೆಸಿಕೊಂಡು ಹೋದರೆ ಅದೇ ಕಾದಂಬರಿಯಾಗುತ್ತದೆ ಎಂಬ ಕುರುಡು ನಂಬಿಕೆ ಹಲವರದು. ಪತ್ತೇದಾರಿ ಕಾದಂಬರಿಗಳನ್ನು ನೀವೂ ಓದಿರಬೇಕು. ಪೋಲಿ ಕಾದಂಬರಿಗಳನ್ನು ನಿಮ್ಮಂತಹ ಸಭ್ಯಸ್ತರು ಓದಿದ್ದೀರಿ ಎಂದು ಯಾರಿಗೂ ಹೇಳಬೇಡಿ; ಅದು, ನನ್ನ - ನಿಮ್ಮ ಗುಟ್ಟು. ಪೋಲಿ ಕಾದಂಬರಿಗಳಲ್ಲಿ ಆಗಾಗ, ಅಂದರೆ ಹತ್ತು ಪುಟದೊಳಗೆ ಐದಾದರೂ "ಸ್ವಾರಸ್ಯ ಪ್ರಸಂಗಗಳು" ಇಲ್ಲದಿದ್ದರೆ, ಅಂತಹ ಕಾದಂಬರಿಗಳನ್ನು ಯಾರೂ ಓದುವುದಿಲ್ಲ. ಪೋಲಿಯ ವಿವರಗಳು ಇಲ್ಲದ ಪುಟಗಳನ್ನು ಅತಿ ಬೇಗ ತಿರುವು ಹಾಕಿಬಿಡುತ್ತಾರೆ.

ನಾಟಕಗಳನ್ನು ನೀವು ನೋಡಿರಬೇಕು. ಅವನ್ನು ಓದುವವರು ಬಹಳ ಕಡಿಮೆ. ನಾಟಕವನ್ನು ಬರೆಯುವುದೇ ಅವನ್ನು ಆಡಿದಾಗ ನೋಡಲಿಕ್ಕೆಂದೇ ಬರೆಯುವುದು ಎಂಬ ಗಟ್ಟಿ ನಂಬಿಕೆ ಬಹಳ ಜನಗಳಿಗೆ ಅಲ್ಲವೇ? ನಾಟಕವನ್ನು ಓದಿದರೆ ನಿಮ್ಮ ಕಲ್ಪನಾ ಶಕ್ತಿಗೆ ತಕ್ಕಂತೆ ನಿಮ್ಮ ತಲೆಯ ರಂಗದಲ್ಲಿ ಪಾತ್ರಗಳೂ, ಸಂದರ್ಭಗಳೂ ಆಡುತ್ತವೆ. ಆದರೆ, ರಂಗದ ಮೇಲೆ ಆಡಿದ ನಾಟಕದಲ್ಲಿ, ನಾಟಕ ತಂಡದವರು ನಿಮಗೆ ತೋರಿಸಿದಂತೆಯೇ ಕಾಣುವುದು ಸಹಜ. ನಾಟಕಗಳ ಬಗ್ಗೆಯೇ ಒಂದು ಪ್ರತ್ಯೇಕ ಲೇಖನವನ್ನು ಬರೆಯೋಣ ಎಂದು ಕೊಂಡಿದ್ದೇನೆ.

ಸಾಹಿತ್ಯ ಪ್ರಕಾರಗಳು ಅನೇಕವಾದ್ದರಿಂದ, ಒಂದೊದ್ದಕ್ಕೂ ಪ್ರತ್ಯೇಕವಾಗಿ ಬರೆಯುವ ಆಸೆಯಿದೆ. ಆದರೆ, ವಿಮರ್ಶೆಯನ್ನು ಮಾಡುವವರು ಎಲ್ಲಾ ಓದುಗರೂ ಅಲ್ಲವೇ!

Wednesday, March 21, 2012

ಯುಗಾದಿಯ ಹಂಸ ಸಂದೇಶ


ಯುಗಾದಿಯ ಹಂಸ ಸಂದೇಶ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಹೊಸ ನಿಮಿಷಕೆ ರಸ ನಿಮಿಷಕೆ ಕಾತುರದಿ ಕಾಯುವೆವು
ರಭಸದಲಿ ಬಂದು ಆತುರದಿ ಜಾರಿ ಮಾಯವಾಗುವುವು

ಬೆಳಗು ಇಳೆಯ ದಿಗಂತದಿ ಪ್ರತಿ ನಿಮಿಷ ಹರಿವುದು
ಬೆಳಕು ಹರಿಯುವ ದಿನ ನಿತ್ಯದ ವ್ರತಕೆ ಬೆರಗುವೆವು

ಹೊಸತು ಹಳೆಯದಾದ ಮೇಲೂ ಹಳಸಿ ಹೋಗದು
ಬೆಸೆದು ಮಾಸಿ ಹೋಗದಂತೆ ಬುರುಡೆಯಲಿ ಅಡಗಿದ್ದು

ಹೊಸತೆಂದರೇನು? ವರುಷ ಮತ್ತೆ ಮತ್ತೆ ಬರುವುದೇನು?
ಹೊಸತೆಲ್ಲಾ ನವ ಹರುಷ ಮಾತ್ರವೇ ಅಲ್ಲದೆ ಬೇರೇನು?

ಈಗ ತಾನೇ ಹುಟ್ಟಿದ ಕಂದನ ಸಂತಸದಂತೆಯೇ ಚೇತನವು
ಯುಗಾದಿ ಮತ್ತೊಮ್ಮೆ ಬಂದರೂ ಅಲ್ಲವೇನು ನವ ಹರುಷವು

ಹುರುಪು ಚಿಗುರುವ ಮೊಳಕೆಯಲ್ಲಿದೆ; ಆಗಸದ ಮೋಡದಲ್ಲಿದೆ 
ಮಾರುತನು ಬೀಸುವಾಗ ತರುವ ಮಲ್ಲಿಗೆಯ ಸುವಾಸನೆಯಲ್ಲಿದೆ

ಹೋದ ವರುಷದ ಯುಗಾದಿಯು ತಂದ ಆಶಯಗಳೆಲ್ಲ ನಿಜವಾಗಿದೆ
ಇದೋ ಹೊಸ ವರುಷವು ಇನ್ನೊಂದು ಹಂಸ ಸಂದೇಶವ ತಂದಿದೆ

Friday, March 16, 2012

ವೀಕು ಹಾರ್ಟು ರೀ ನನಗೆ


ವೀಕು ಹಾರ್ಟು ರೀ ನನಗೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನನಗ್ಯಾಕೋ ಸ್ವಲ್ಪಾ ಹಾರ್ಟು ವೀಕುಂತಾ ಆಗಾಗ ಅನ್ನಿಸುತ್ತೆ
ಚೆಂದವಾಗಿರೋ ಹುಡ್ಗೀರ್ನ ನೋಡಿದ್ರೆ ಗುಂಡಿಗೆ ಹೊಡಕೊಳ್ಳುತ್ತೆ 

ಡಬ ಡಬಾ ಅಂತ ತಾಳವಾಗಿ ತಾಳವಾದ್ಯ ಕಛೇರಿ ನಡೆಸುತ್ತೆ
ಅಬಲೆ ಅನ್ನೋ ಪದ ಅನ್ನುವುದರ ಬದಲು ತಬಲೇ ಅನ್ನುತ್ತೆ

ಯಾರು ಯಾರೋ ಡಾಕ್ಟ್ರುಗಳನ್ನೂ ಕೇಳೋಣ ಅಂತ ಹೋಗಿದ್ದೆ
ಅವರು ನನ್ನ ಹತ್ತಿರ ಬಂದು ನನ್ನ ಎದೆಯ ಮೇಲೆ ಕೈಯಿಟ್ಟಿದ್ದೇ

ತಕ್ಷಣ ಮತ್ತೆ ಸಂಗೀತ ಕಛೇರಿ ಪ್ರಾರಂಭ ಆಗಿ ಮೈಯೆಲ್ಲಾ ಝುಂ
ಸೂಕ್ಹ್ಮವಾಗಿ ಹೇಳಿದರು: ಹೆಂಗಸರು ಡಾಕ್ಟ್ರು ನಾನಲ್ವಾಂತ ಮೇಡಂ

ಒಬ್ಬರಿಂದ ಶುರೂ ಆಗಿ, ಊರಲ್ಲಿರೋ ಸುಂದರ ವೈದರನ್ನೆಲ್ಲ ನೋಡಿ
ಹಬ್ಬ ನನ್ನ ಎದೆಗೆ; ಅಬ್ಬಬ್ಬ! ಈಗಾಗ್ಲೇ ಎಲ್ಲಾ ತಾಳಗಳಲ್ಲೂ ಕುಣಿದಾಡಿ

ತುಂಬಾ ವೀಕಾಗಿ ಬಿಟ್ಟಿದೆ; ಬಹಳಾ ಸೂಕ್ಷ್ಮವಾಗಿ ಬಿಟ್ಟಿದೆ; ಗುಡಗುಟ್ಟುತ್ತೆ
ನಂಬಿದರೆ ನಂಬಿ, ಬಿಟ್ಟರೆ ಬಿಡಿ; ವೀಕು ಹಾರ್ಟು ಭಾಳ ಒಳ್ಳೇದು ಅನ್ನಿಸುತ್ತೆ

TBD ತತ್ವ ಬೋಧೆ = TBD ಮೂರಕ್ಷರದ ಬೀಜ ಮಂತ್ರ

TBD ತತ್ವ ಬೋಧೆ
ಡಾಕ್ಟರ್  ಕೆ ಆರ್ ಎಸ್ ಮೂರ್ತಿ

TBD ಮೂರಕ್ಷರದ ಬೀಜ ಮಂತ್ರ 
    • Krs Murthy TBD = ತಾನು ಬಡವರಿಗೆ ದಾನ ಮಾಡಬೇಕು
      11 minutes ago · 
    • Krs Murthy TBD = ತನ್ನ ಬಂಧುಗಳಿಗೆ ದಾರಿ ತೋರಬೇಕು
      10 minutes ago · 
    • Krs Murthy TBD = ತಾಯಿಗಿಂತ ಬೇರೆ ದೇವರಿಲ್ಲ ಎಂದು ಅರಿಯಬೇಕು 
      4 minutes ago · 
    • Krs Murthy TBD = ತಾನೇ ಬ್ರಹ್ಮನೆಂಬ ದಾರ್ಶನಿಕನಾಗಬೇಕು
    • Krs Murthy TBD = ತಲೆ ಬೋಳರಿಗೆ (ಮಾತ್ರ) (ಸುಂದರ ಹುಡುಗಿಯರು) ದಕ್ಕುವುದು 
    • Krs Murthy ತಲೆಹರಟೆ ಬಿಟ್ಟು ಧ್ಯಾನಿಯಾಗಬೇಕು

ಶತಕ ಶಾಪ ವಿಮುಕ್ತ

ಶತಕ ಶಾಪ ವಿಮುಕ್ತ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಒಂದು ಕಡಿಮೆಯಾದರೂ ಚಿಂತೆ
ಒಂದು ನೂರು ಹೊಡೆದರೂ ಅಂತೇ

ತೆಂಡೂಲ್ಕರ ಬಾಲ್ಯದಿಂದಲೇ ಭಲೇ
ದಾಂಡು ವೀರ ಗೆದ್ದರೆ ನಮಗೆ ಸೋಲೇ?

ಐದು ದಿನಗಳೂ ಯಾಗ ಹೊಡೆಯಲಿಕ್ಕೆ
ಐವತ್ತು ಓವರುಗಳೇ ಸಾಕು ಬಡಿಯಲಿಕ್ಕೆ

ನೂರು ನೂರು ಮಾತ್ರ ನಮ್ಮಗೆ ಸಾಲದಯ್ಯಾ
ನೂರೆಂಟು ನೂರು ಮಾಡಿದರೆ ಅರ್ಚನೆಯಯ್ಯಾ 

ಭಾರತ ರತ್ನನು ಅಷ್ಟೋತ್ತರ ಶತಾವಳಿ ಮಾಡಿ
ಹೊರಟು ಹೋಗಲಿ ಕ್ರಿಕೆಟ್ಟು ವಾನಪ್ರಸ್ತಾಶ್ರಮಕ್ಕೆ 

Tuesday, March 13, 2012

ಅವತರಿಸು ಬೇಗ ಕಂದಾ!


ಅವತರಿಸು ಬೇಗ ಕಂದಾ!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಕಂದ ಒಂದೇ ಒಂದು,
ಅಂದದ, ಚೆಂದದ, ಮುದ್ದಿನ,
ನಂದ ನಂದನನೆಯೇನೋ ಎಂಬುವಂತಹದು

ಹಡೆವುದು ಇನ್ನೂ ಮುಂದೆ ಎಂದೋ.
ಅಂಡದಲಿ ಕೂಡ ಮೂಡಿ ಬಂದಿಲ್ಲ

ಚಿಕ್ಕಪ್ಪ, ಚಿಕ್ಕಮ್ಮಂದಿರ ಕಣ್ಣಲ್ಲಿ ಕನಸಾಗಲೇ
ಚಿತ್ತಾರವಾಗಿ ಬಿತ್ತಿ ಬಿಟ್ಟಿದೆ.

ಸಾವಿರ ಸಾವಿರ ನಾವಿಕರು
ಒಕ್ಕೊರಳಲ್ಲಿ ಪೊಗಳಿ
ನುಡಿದು, ಪಾಡಿ, ಹಡೆವ
ಮುಂದೆಯೇ ಕಂದನಿಗೆ ಚೆಂದದ
ಪೆಸರುಗಳ ಮಲ್ಲಿಗೆಯ ಮಾಲೆಯನೇ
ಹೆಣೆದಿದ್ದಾರೆ, ಕುಣಿಯುತ ತಣಿದಿದ್ದಾರೆ.

ಕಂದಾ! ನೀ ಎಂತಹಾ ಚೆಂದಾ!
ಮುಕುಂದನಿಗೂ ಮೀರಿದ ಕಂದನಲ್ಲವೇ
ಒಂದೇ ಕಂದನಿಗೆ ನೂರೆಂಟು ನಾಮ
"ಕಂದ ಒಂದೇ ನಾಮ ಹಲವು"

ಕನ್ನಡವನಾಡುವ, ಕಸ್ತೂರಿಯ ಬೀರುವ ಬಾರೋ!
ನಿನಗೆ ಬಾರೋ ಎನ್ನಲೋ?
ನಿನ್ನ ಬಾರೇ ಚದುರೆ, ಸುಂದರಿ ಎಂದೆಲ್ಲಾ ಕರೆಯಲೋ?

ಕವಿಯ ಹೃದಯದಾಳದಿಂದ ಹೊರ ಬಂದು
ನುಡಿ, ಕುಣಿದಾಡು, ಮೆರೆದಾಡು
ಬಾ ಬೇಗ ನಮ್ಮೆಲ್ಲರ ಮುದ್ದು ಕಂದ!

ಮೂರ್ತಿಯ ಸಾರು ಸಂಭಂದಿಸಿದ Idea


ಮೂರ್ತಿಯ ಸಾರು ಸಂಭಂದಿಸಿದ Idea

ಈಗ ಕನ್ನಡ ಬಾಂಧವರೆಲ್ಲಾ ನಿಮ್ಮ, ನಿಮ್ಮ ಸೃಷ್ಟಿ ಶೀಲ ಬಹುರೂಪಿ ಸಾರುಗಳ ನಳಪಾಕದ ವಿವರಗಳನ್ನು ಬರೆಯಿರಿ, ನಮ್ಮೆಲ್ಲರಲ್ಲೂ ಹಂಚಿಕೊಳ್ಳಿರಿ: ಉದಾಹರಣೆಗೆ, ಹುರಳಿಯ ಸಾರು, ಅವರೆಕಾಳಿನ ಸಾರು, ಮೆಣಸಿನ ಸಾರು, ಹುಣಿಸೆಯ ಸಾರು ಇತ್ಯಾದಿ, ಇತ್ಯಾದಿ. ಹೊಸತನ, ಹೊಸ ಕೈಚಳಕಗಳನ್ನೂ ಪ್ರದರ್ಶಿಸಬಹುದು. ಅವುಗಳನ್ನು ಮಾಡಿದ ಮೇಲೆ, ಅವುಗಳ ಛಾಯಾ ಚಿತ್ರಗಳನ್ನೂ, ಚಲನ ಚಿತ್ರಗಳನ್ನೂ ನಮ್ಮೆಲ್ಲರಲ್ಲೂ ಹೆಮ್ಮೆಯಿಂದ ಹಂಚಿಕೊಳ್ಳಬಹುದು. ನಿಮ್ಮೆಲ್ಲರ ಕನ್ನಡದ ಅಡುಗೆಯ ಹೆಮ್ಮೆ.

ಸಾರಿನ ಬಗ್ಗೆ ಹಾಡುಗಳನ್ನೂ, ಚುಟುಕಗಳನ್ನೂ ಬರೆಯಬಹುದು

  • ಏನ್ರೀ? ಏನು ಮಾಡ್ತಾ ಇದ್ದೀರಾ? ಬೇಗ ಅಡುಗೆಯ ಮನೆಗೆ ಹೋಗ್ರೀ.
  • ಗಂಡನು ಹೆಂಡತಿಯನ್ನು ಮೀರಿಸಬಹುದು
  • ಹೆಂಡತಿಯು ಗಂಡನಿಗಿಂತ ಮಿಂಚಿಸಬಹುದು
  • ಸಾರು ಬೆಳ್ಳಿಯ ಬಟ್ಟಲಲ್ಲಿ "cheers" ಹೇಳಿಕೊಂಡು ಪರಸ್ಪರ ಪ್ರೇಮಾಲಾಪ  ಮಾಡುತ್ತಾ  ಪರಸ್ಪರ ಪ್ರಚೋದಿಸಿ ಕೊಳ್ಳಬಹುದು.
  • ಆ ಸಮಯದ ಚಿತ್ರಗಳನ್ನು ಸೂಕ್ತವಾಗಿ ಎಲ್ಲರಲ್ಲೂ ಪ್ರದರ್ಶಿಸಬಹುದು.

Sunday, March 4, 2012

ಅವರವರು ಅವರವರಿಗೆ ಹೊಡೆವರಯ್ಯಾ ಚಾಟಿ

ಅವರವರು ಅವರವರಿಗೆ ಹೊಡೆವರಯ್ಯಾ ಚಾಟಿ
ಡಾಕ್ಟರ್. ಕೆ ಆರ್. ಎಸ್. ಮೂರ್ತಿ

ಜುಟ್ಟಿಲ್ಲ, ಜನಿವಾರವಂತೂ ಇಲ್ಲವೇ ಇಲ್ಲ;
ಕೆಟ್ಟ ಹುಟ್ಟಿನ ಚಾಂಡಾಲರೇ ಇವರೆಲ್ಲಾ.

ಮುಖದ ಮೇಲೆ ವಿಭೂತಿ, ಕುಂಕುಮ, ನಾಮ
ದಾಖಲೆಗೆ ಮಾತ್ರ ಇಂತಹದೆಲ್ಲಾ ನಖಲಿ ನೇಮ

ಸ್ವಾಮಿಗಳ, ಶರಣರ ಕಾಲು ಮುಟ್ಟುವಾಗ ಕೊರಮರು
ಕಾಮ ಪಿಶಾಚಿತನದ ರಾತ್ರಿಯನ್ನೇ ನೆನೆಯುವರಿವರು

ಛಲ ವ್ರತದ ಚಾಣಕ್ಯ ಮಹಾನುಭಾವನ ವಾರಿಗೆಯಿಲ್ಲ
ಕಳ್ಳರು ಈ ಜನ್ಮದಲ್ಲಿ; ಹಿಂದೆ, ಮುಂದೆಯೂ ಬೇರೆಯಿಲ್ಲ

ಡ, ಡಿ, ಇತ್ಯಾದಿ ಪ್ರಾಸದ ಮನೆತನದ ಹೆಸರು ಇವರಿಗೆ
ಬಡವರು ಕಣ್ಣೀರು ಸುರಿಸಿದರೇನಂತೆ, ಏನೂ ಇಲ್ಲದವರಿಗೆ?

ಬಡ ರೈತರಿಂದ ನೆಲ ಕಸಿದು ಕೊಂಡಾಗ, ಬಾಯಿಗೆ ಹಾಕಿದರೆ
ಪೇಢ, ಮಿಠಾಯಿ; ರೈತನಿಗೆ ಗೊತ್ತಿಲ್ಲದ ಹಾಗೆ ಪಂಗನಾಮವೇ

ದರೋಡೆ ಮಾಡುವವರು ಹುಡುಕುವುದು ಒಡ ಒಕ್ಕಲಿನವರಲ್ಲವೇ
ಸರಿಯಾಗಿ ಸೊನ್ನೆ ಹಾಕಿದರೂ, ಅವರವರು ಅವರವರಿಗೆಯೇ

ಮಾಡಿದವರ ಪಾಪ ಆಡಿದವರ ಬಾಯಲ್ಲಿ!

ಮಾಡಿದವರ ಪಾಪ ಆಡಿದವರ ಬಾಯಲ್ಲಿ!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ


ಮಾಡಿದವರ ಪಾಪ ಆಡಿದವರ ಬಾಯಲ್ಲಿ! ಕಾಡಿದವರು ಬೇರೆ ಎಲ್ಲರೂ!
ಮಲಿನದ ಮನಸ್ಸಿನಲ್ಲಿ ಮಂಗಳ ಕಾರ್ಯ ಮಾಡಿದಂತಾಗಬಾರದು, ಅಷ್ಟೇ
ಆಡಿದವರಿಗೆ ಚಾಟಿ ಏಟು; ಮಾಡಿದವರಿಗೆ ಮತ್ತೆ, ಮತ್ತೆ ಮರ್ಯಾದೆಯೇ?
"ಕುಂಬಳ ಕಾಯಿ ಕಳ್ಳರು" ಎಂದರೆ ಹೆಗಲು ಮುಟ್ಟಿ ಕೊಂಡವರು ಸಭ್ಯರೇ?

ಸಭ್ಯತೆಯ ಶಾಲಿನಲ್ಲಿ ಮುಖ ಮುಚ್ಚಿ ಕೊಂಡರೆ ದುರ್ನಾತವು ಹರಡುವುದಿಲ್ಲವೇ?
ಪಾಪ ಮಾಡಿದವರಿಗೆ ಕೋಪದ ಮುಖವಾಡ; ಬಾಯಿಲ್ಲದವರು ಬಾಯಿ ಮುಚ್ಚುವುದೇಕೆ?

ರಾಹು ಕೇತುಗಳ ಬಂಧುಗಳು ಮನೆಗೆ ಬರುತ್ತಿದ್ದಾರೆಂದು ಗೊತ್ತಿದೆಯಲ್ಲವೇ?
ಅದಕ್ಕೆ ಮುಂಚೆಯೇ ಮಂತ್ರೋಚ್ಚಾಟನೆ ಮಾಡಿದರೆ ನಮಗೆ ಕ್ಷೇಮವಲ್ಲವೆ?