Wednesday, January 4, 2012

If you had the power to create another universe or multiverse?

If you had the power to create another universe or multiverse?

What would you do differently and uniquely?

Let me explain my thoughts. Your ideas could be different and unique in your own way.

KRS Murthy's Universes or Multiverse Options and Axioms:

NOTE: You have to realize that my creation will not be bound by the rules and laws of the current universe.
  • I will not have any particles of any kind that we are all familiar now. In the particle based universes, every particle has to thought of divisible or indivisible. If the option is divisibility, then the particles are made of other particles and so on to infinite extent. In the other option, the particles being indivisible, can not be explained in terms of their internal structure. In the current universe, the electron or photo is believed or understood to be indivisible. The nucleus of the atom is divisible down to protons and neutrons and further the quarks. The string theory further has its own explanations.
  • I will not have any limit to the speed of energy, if I include energy into my creation
  • I will incorporate many more dimensions
  • I will try if the inhabitants of my creation could have the complete liberty to traverse freely in multiple time or time-like dimensions at their own will.
  • The inhabitants will have the liberty to move across the different universes of the multiverse creation. 
I am only starting to make the initial list at this time. I will write more in the future emails.

You are all welcome to create your own universes or multi-verses as you wish. Let us freely brain storm, so that we can discuss each other's creations at a later date and not curb creativity and free flowing thinking at this time.

Wish you good and free brainstorming.

You may look at my brainstorming technique in the following link if you prefer:


--
KRS Murthy
CEO, I Cubed
Santa Clara, CA 95014

ಎಂಥ ಸುಂದರಿಯಪ್ಪಾ ಸಾಹಿತ್ಯ ದೇವಿ?


ಪ್ರಿಯ ಸಾಹಿತ್ಯ ರಸಿಕರೇ ಮತ್ತು ಸಾಹಿತಿಗಳೇ ಹಾಗೂ ವಿಮರ್ಶಕರೇ:

ಕೆಲವು ಸಾಹಿತಿಗಳು, ಸಾಹಿತ್ಯ ಹ್ಯಾಗಿರಬೇಕು, ಒಳ್ಳೆಯ ಸಾಹಿತ್ಯ ಎಂದರೇನು ಎಂದೆಲ್ಲಾ ಭಾಷಣಗಳನ್ನೂ ಕೊಟ್ಟು, ಬರಹಗಳಲ್ಲೂ ಚೌಕಟ್ಟು ಹಾಕಿರುವುದು ನಮಗೆಲ್ಲಾ ಗೊತ್ತಿರುವ ವಿಷಯವೇ.

ಈ ಮುಖ್ಯ ಪ್ರಶ್ನೆಗೆ ಒಂದಲ್ಲ, ಸಾವಿರಾರು ಉತ್ತರಗಳಿವೆ; ಎಲ್ಲವೂ ಸರಿಯಾದ ಉತ್ತರಗಳೇ. ಆನೆಯೆಂದರೆ ದೊಡ್ಡ ಬೀಸಣಿಗೆಯಂತೆ ತೋರುವ ಕಿವಿಯೂ ಹೌದು; ಕಂಬಗಳಂತೆ ಇರುವ ಕಾಲುಗಳೂ ಹೌದು; ಇತ್ಯಾದಿ, ಇತ್ಯಾದಿಗಳೆಲ್ಲವೂ ಸರಿಯಾದ ಉತ್ತರಗಳಾದರೂ, ಸಾಹಿತಿಗಳೂ ಒಂದು ರೀತಿಯ ಕುರುಡರೇ!

ನನ್ನ ಉತ್ತರ: ಸರಿ; ಆದರೆ ತಪ್ಪು!

ಎಂಥ ಸುಂದರಿಯಪ್ಪಾ ಸಾಹಿತ್ಯ ದೇವಿ?
ಡಾಕ್ಟರ್ ಕೆ. ಆರ್. ಎಸ್ ಮೂರ್ತಿ


ಸೌಂದರ್ಯ ಎಂದರೇನು? ಜೀವನ ಎಂದರೇನು? ನ್ಯಾಯ ಎಂದರೇನು? ಉತ್ತರ ಸಾವಿರಾರು
ನಿಮ್ಮದೊಂದು ಉತ್ತರ; ನನ್ನದೇ ಬೇರೆ; ಅವರದೇ ಮತ್ತೊಂದು ಬೇರೆ. ಸರಿಯೇ, ಅವರವರಿಗವರು

ಕೋಟಿ ಹದಿನಾಲ್ಕು ಕಣ್ಣುಗಳು ಜಗತ್ತಿನಲ್ಲಿ; ಕುರುಡರಿಗೂ ಇದೆಯಪ್ಪಾ ಕಣ್ಣುಗಳು! ಆದರೆ ಕಿವುಡರು
ಈ ಪಾಟಿ ಕಣ್ಣುಗಳು ಇದೆಯೆಂದು ಗೊತ್ತಪ್ಪಾ ನಮ್ಮ ಸಾಹಿತಿಗಳಿಗೂ, ಆದರೆ ಮಾತ್ರ ಸ್ವಲ್ಪ ಕುರುಡರು

ದೊಡ್ಡ ಸಾಹಿತಿಗಳಿಗೆ ಕುರುಡು ದೊಡ್ಡದು. ಅವರ ಮೂಗಿನ ನೇರ; ಅತ್ತಿತ್ತ ಇಲ್ಲ, ಕಾಣುವುದು ಅವರಿಗೆ
"ಸಾಹಿತ್ಯ ಅಂದ್ರೆ ಏನ್ರೀ?" ಅಂತ ನೀವು ಕೇಳ ಬೇಕಾಗಿಯೇ ಇಲ್ಲ; ತಮ್ಮ ಮೂಗಿನ ನೇರಕ್ಕೆ ನಾಲಿಗೆ

ಸಾಹಿತ್ಯ ರಾಣಿಗೆ ಸಾವಿರಾರು ರೂಪ; ಅವಳ ಬಣ್ಣದ ಸಿರಿ ಸಂಪತ್ತು ನಮ್ನಿಮ್ಮ ಕಣ್ಣಿಗೆ ಕಾಣದು ಪೂರ
ನಾಟ್ಯ ಅವಳದು ಕೋಟಿ; ರಾಗ ತಾಳ ವೈವಿಧ್ಯತೆಯನ್ನು ಅಳೆಯುವರಾರೂ ಇಲ್ಲ; ಹೊಸ ಹೊಸ ಅವತಾರ

ನಾನೀಗ ಬರೆಯುವ ಮುನ್ನ ಅವಳ ಬೇಡಿ ಬೇಡಿ ಕೈಮುಗಿದು ಕರೆದೆ. ಕಾವ್ಯ ಮೋಹಿನಿ ನನಗೆ ಮುತ್ತಿಟ್ಟಳು
"ಯಾಕಮ್ಮಾ ಇಷ್ಟೊಂದು ಒಲವು ಇಂದು ಮಾತ್ರ?" ಎಂದೆ. ನಕ್ಕು ಪ್ರಾಸದ ರೆಕ್ಕೆ ಕಚಕ್ ಮಾಡಿಬಿಟ್ಟಳು!

ಈ ಚೆಲುವೆಗೆ ಬೇಕಪ್ಪಾ ಬೇರೆ ಬೇರೆ ರೂಪ; ಹತ್ತೋ, ಇಪ್ಪತ್ತೋ ವರುಷಕ್ಕೆ ಅವಳ ಗುರುತೇ ಬೇರೆ ಆದೀತು
ಈಚೆ ನಾಡಿನಲೊಂದು; ಹೊರನಾಡಿನಲ್ಲಿ ಎಂತೋ ಆ ಬೀಡಿನವರಿಗೆ ಮಾತ್ರ ಗೊತ್ತಂತೆ. ಆಡಿದಂತೆ ಮಾತು

ಕಂಡಂತೆಯೇ ಕಾಣು; ಮಾಡಬೇಡ ಸುಂದರಿಯ ರೂಪಕ್ಕೆ ಕಾನೂನು. ತಾಳದ ಲಾಳ ಬ್ಯಾಡಪ್ಪ ಬ್ಯಾಡ;
ಕುಣಿಯಲಿ ಅವಳ ಮನ ಬಂದಂತೆಯೇ; ಹೆಜ್ಜೆ ಹಾಕುವುದು ಅವಳಿಗೇ ಬಿಟ್ಟು ಬಿಡಿ, ಕಟ್ಟುವುದಂತೂ ಬ್ಯಾಡ

ನಿನ್ನೆಯು ಅಪ್ಪಟ ಚಿನ್ನ


ನಿನ್ನೆಯು ಅಪ್ಪಟ ಚಿನ್ನ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಎಲ್ಲಿ ಹೋಯಿತು ಎಲ್ಲಾ ನಿನ್ನೆಯ ಸುಂದರ ನೋಟ?
ಕಾಲನ ಚಾಚು ನಾಲಿಗೆಗೆ ಆಗಲೇ ಆಗಿಹೋಯಿತು ಊಟ!

ಲೋಲಾಕು, ಝುಮುಕಿ, ರಿಂಗು; ಟೇಪುಗಳು ಬಣ್ಣ, ಬಣ್ಣದ್ದು
ಓಲಾಡುವ ಒಪ್ಪದಿ ಹೆಣೆದ ಉದ್ದದ ಜಡೆ; ಝರಿ ಲಂಗ, ಉದ್ದದ್ದು

ಹಿಗ್ಗಿದ ಹೊಸದಾಗಿ ಹರೆದ ಹೆಣ್ಣು ಮಕ್ಕಳ ಹೆಮ್ಮೆಯಾ ಅಪ್ಪಿ
ಹಗುರವಾಗಿ ಹೊದ್ದ ದಾವಣಿ, ಜರತಾರಿ ರವಿಕೆ ಅದಕೆ ಒಪ್ಪಿ

ಮುಂಗೈಯುದ್ದ ಗಾಜಿನ ಬಳೆಗಳು ಕಿವಿಗೆ ಝುಂ ಎನ್ನುವ ನಿನಾದ
ಮಂಗ ಉದ್ದುದ್ದಾಗಿ ನನ್ನೊಳಗೆ ಅದಕೆ ಕುಣಿದು ಕುಪ್ಪಳಿಸುವ ಅಂದ

ಕಳೆದು ಹೋದುದು ಚೆಂದ; ನಿನ್ನೆ ಯಾವಾಗಲೂ ಬಲು ಸವಿಯಪ್ಪ
ಹಳೆಯದು ಹೊಸಕಿಂತ ಬಲು ಆನಂದ; ಎಂದೂ ಮರೆಯಲಾಗದಪ್ಪ

ನಾಯಕನೋ? ನಾಯಿಯೋ? - Always follow the leader: Follow me: GeniusTweets (@GeniusTweets1)!


ನಾಯಕನೋ? ನಾಯಿಯೋ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

Always follow the leader: Follow me:

GeniusTweets (@GeniusTweets1)!

ನಾಯಕನ ನೆರಳು ಅಲ್ಲವೇ ನೀನು?
ನಾಯಿಯಾಗಿ ಹಿಂದಲಿಯುವೆಯೇನು?

ಕಾಯಕವ ಬೆಳಗೂ ಇರುಳೂ ಗೈಯುವನು
ನ್ಯಾಯವನ್ನು ಆರಾದಿಸುವ ನರನಾದರೇನು

ರಾಯನಾಗುವ ರಕ್ತ ಹನಿಯಾದರೂ ಮಾತ್ರವೇ
ಜಾಯಮಾನವಿದ್ದರೆ ಜಗವೇ ನಿನಗೆ ಆಲಿಸುವುದೈ

ರಚನೆ ರಸಿಕರ ಅನುಯಾಯಿ


ರಚನೆ ರಸಿಕರ ಅನುಯಾಯಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬರಹ ಮುಗಿದ ಅದೇ ಗಳಿಗೆಯೇ ಏರಿ ಹಾರಿ ಹೋಗುವುದು
ಭರದಿ ಭುರ್ರೆಂದು ರೆಕ್ಕೆಗಳ ಎರಡೂ ಬಡಿಯುತ್ತ ಸೇರುವುದು

ಕರೆವ ಮನಗಳ ಮನುಜ ಕುಲಕೆಲ್ಲರಿಗೂ ತಾನೇ ಒಲಿಯುವುದು
ಕರವ ಬಿಡಿಸಿದ ರಸಿಕರು ಆರಾದರೂ ನಲಿಸುತ ಉಲಿಯುವುದು

ಬರೆದ ಭಾವಗಳ, ಧಾರೆಯೆರೆದ ಅನುಭವವನೆಲ್ಲಾ ತೋರುವುದು
ಪರರ ತೆರೆದ ಮನಗಳು ಅರಿತಂತೆ ಪರಿಪರಿಯಲಿ ಅವತರಿಸುವುದು

ಧಾರೆಯ ಮಾತ್ರ ಎರೆವ ನನ್ನ ಪ್ರೇಮದ ಕಾಯವು ಮುಗಿಯುವುದು
ಮೆರೆವುದು ಸಾವಿರ ರಾಗಾನುಭಾವದಲಿ ರಸಿಕರಂಗದ ರಂಗಾಗುವುದು

ಲಗಾಮಿಲ್ಲದ ಲಂಗೋಟಿ ರಾಜರು ಬೇಕೇಕೆ?


ಲಗಾಮಿಲ್ಲದ ಲಂಗೋಟಿ ರಾಜರು ಬೇಕೇಕೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಲಂಗೋಟಿ ಧಾರಿಗೆ ಅರಮನೆಯಂಥ ಆಶ್ರಮ ಬೇಕೇ?
ಸಂಗಾತಿಯರು ಕಾಲು ಮೈಯೆಲ್ಲಾ ನೀಯುವುದೇಕೆ?

ಅಂಗೈಯೆಲ್ಲಾ ತುಪ್ಪ ಸುರಿಯುವಂತೆ ಭೋಜನ ಬೇಕೇ?
ಅಂಗನೆಯರ ಬಿಗಿದಪ್ಪಿಕೊಂಡು ಲಾಲಿ ಲೀಲೆಯದೇಕೆ?

ಸಿಂಗಾರದ ಚಿನ್ನ ವಜ್ರಗಳ ಕೀರೀಟ, ಅಂಬಾರಿ ಏರಬೇಕೆ?
ಡಂಗುರದ ಬಾಜಾ ಬಜಂತ್ರಿ, ಪರಾಕು ಹೊಗಳಿಕೆಯೇಕೆ?

ಮಂಗಳಾರತಿ, ಧೂಪದಾರತಿ, ಗಂಟೆ, ಜಾಗಟೆಗಳೆಲ್ಲವೇಕೆ?
ರಂಗು ರಂಗಿನ ಹೂಗಳನಿಟ್ಟು ಪಾದ ಪೂಜೆ ವೈಭವವೇಕೆ?

ಮಂಗಗಳಲ್ಲದೆ ಇನ್ನೇನು ಪೆಂಗ ಕುರುಡು ನಂಬಿಕೆಯೇಕೆ?
ದಂಗಾಗಿ ನಾವಿದೆಲ್ಲ ಆಟಗಳನು ನೋಡಿ ಸುಮ್ಮನಿರಬೇಕೆ?

ಅರ್ಹಂತತೆಯ ಗುಹ್ಯ ಮಂತ್ರ


ಅರ್ಹಂತತೆಯ ಗುಹ್ಯ ಮಂತ್ರ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬೇವಿನೆಲೆಯಲ್ಲಿ ಸವಿ ರಸದ ಪಾಕ ಸುರಿಸುವ ಕುಸುರಿ ಕಲಾಕಾರನಾಗು
ಕಾವೇರಿದ ಉಜ್ವಲ ಅನಲನಲಿ ಕೊರೆವ ಶೀತಲತೆಯ ಅನುಭವಿಯಾಗು

ನೋವಿನಲಿ ನಲಿವು ಹೊಮ್ಮಿಸುವ ಅಸಮಾನ ಯೋಗ ಅಭ್ಯಾಸಿಯಾಗು
ಸಾವಿನಲ್ಲಿ ಅಮರತ್ವದ ಜ್ಯೋತಿಯ ಶೋಭೆಯನು ಹೊತ್ತಿಸುವವನಾಗು

ದೇವ, ದಾನವ, ಮಾನವ, ಖಗ, ಮೃಗಗಳಲೆಲ್ಲಾ ಸಮಾನತೆ ಕಲಿತವನಾಗು
ಭವದ ಸಕಲತೆಗಳಲಿ ಏಕತೆಯ ಬಹುರೂಪವನು ಅರಿತ ಅರ್ಹಂತ ಜಿನನಾಗು

ಬಡತನವು ಬೇಡಿ ಹುಟ್ಟಿದ ವರ


ಬಡತನವು ಬೇಡಿ ಹುಟ್ಟಿದ ವರ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬೆವರಿನಲಿ ಅಕ್ಕಿಯನು ನೆನೆಸಿಟ್ಟು ಬೇಯಿಸಿದ ಅನ್ನವು ಅರಳಿಗಿಂತ ಅತಿ ಹಗುರ
ಕಾವೇರಿ ಡಬ ಡಬಾಂತ ಗುಂಡಿಗೆಯು ಕುಣಿಯುತಿರೆ ಪ್ರಣಯಾದಾಟ ನಾಕದ ವರ 

ಕಡು ಬಡತನದ ಅಂಗಳದಲ್ಲಿ ಬೆಳೆದ ಬಾಲ್ಯದ ವರುಷಗಳು ಬೊಮ್ಮನ ಹರಕೆಯು
ಬೇಡಿ ಒಕ್ಕಲ ಮನೆಗಳಿಂದ ಬಿಕ್ಷ ಪಾತ್ರೆಯ ಉಂಡವರಿಗೆ ಒಲಿವಳು ಅನ್ನಪೂರ್ಣೆಯು

ಸೋರುವಾ ತಾರಸಿಯ ಗುಡಿಸಿಲಲಿ ನೆನೆದವರಿಗೆ ಸಾಕ್ಷಾತ್ ವರುಣ ದೇವನೇ ಒಲಿದಂತೆ
ಉರಿವ ಬಿಸಿಲಿನಲ್ಲಿ ಕಾದ ಪಾದಯಾತ್ರೆಯು ತಂದೆ ಭಾಸ್ಕರನ ಕರುಣೆಯನು ಅರಿತಂತೆ

ಗೋಳು ಬಾಲ್ಯದ ಬಾಳು ಅನುಭವಿಸಿದಾ ನಮಗೆಲ್ಲರಿಗೂ ಅದೃಷ್ಟ ದಶಕ ಹಲವು ಖಂಡಿತವಾಗೆ
ಮುಳ್ಳು ಹಾದಿಯಲಿ ಬರಿಗಾಲು ಚುಚ್ಚಿಸಿಕೊಂಡರೆ ಮಿಕ್ಕೆಲ್ಲ ಜೀವನ ಯಾತ್ರೆ ಹೂವಿನ ಹಾಸಿಗೆ

ಒಂದೇ ಯಾರಿಗೆ ಸಾಕು!


ಒಂದೇ ಯಾರಿಗೆ ಸಾಕು!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಸಿಹಿಗಿಂತ ಹುಳಿ ಹದವಾಗಿ ಬೆರೆಸಿದ ಸಿಹಿ ರುಚಿ ಬಲು ಅಂದ
ಸಿಹಿಗಿಂತ ಕಹಿಯನ್ನು ಒಪ್ಪದಲಿ ಬೆರೆಸಿದರೆ ನಾಲಿಗೆಗೆ ಚೆಂದ

ಬಣ್ಣ ಒಂದೇ, ದನಿ, ವಾದ್ಯ ಒಂದಕ್ಕಿಂತ ಹಲವು ಹಿತಗಳಾಸೆ
ಕಣ್ಣು, ಕಿವಿ, ಮೂಗು, ನಾಲಗೆ, ಇಂದ್ರಿಯಗಳಿಗೆ ಅನೇಕತೆಯಾಸೆ

ಸರಿಯಾದ ಅಂಶದಲಿ ಬೆರೆಸಿಕೊ ಸುಖ, ದುಃಖ, ಸಕಲ ರಾಗ
ಪರಿಪರಿ ಅನುಭವಗಳು ಮೇಳೈವಿಸಿದರೆ ನಾಕವು ನಿನ್ನದಾಗ

ಸತ್ಯವೆಂದರೇನು? ಅದು ಇರುವುದೇನು?


ಸತ್ಯವೆಂದರೇನು? ಅದು ಇರುವುದೇನು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಇತ್ತು, ಇದೆ, ಇರುವುದು
ಅದು, ಆನು, ತಾನು, ತಾವು
ಎಂದೆಂದೂ ಒಂದೇ

ಕಾಣುವುದೆಲ್ಲಾ ಕಣ್ಣೊಳಗೆ ಇವೆ
ಕಾಣುವುದು ನಿನ್ನದು; ಬೇರೆಯೇ ಇರುವುದು
ಕಂಡಿದ್ದೆಲ್ಲಾ ಮಂಡೆಯಲ್ಲಿ ಅಡಗಿವೆ
ಕಂಡಿದ್ದೇ ಬೇರೆ; ಇದ್ದುದೇ ಬಹು ಬೇರೆ

ನಾಲಗೆ ಕುಣಿದು ಆಡಿದ್ದೇ, ಪಾಡಿದ್ದೇ ಬೇರೆ.
ಕಿವಿ ಕೇಳಿದ್ದೆ ಮತ್ತೆ ಬೇರೆಯೇ; ಬೇರೆ ಅರಿತಿದ್ದೇ
ನಾಲಿಗೆಗೆ ಕಿವಿಯಿಲ್ಲ; ಕಿವಿಗೆ ಆಡಲು ಬಾರದು

ಅಸಂಭವ ಸಾಧ್ಯ


ಅಸಂಭವ ಸಾಧ್ಯ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಯನಕ್ಕೆ ಉಕ್ತಿಯ ಯುಕ್ತಿ
ನಾಲಿಗೆಗೆ ಶ್ರವಣದ ಗ್ರಾಹ್ಯ
ಕರ್ಣಕ್ಕೆ ಉಲಿಯುವಾಸಕ್ತಿ
ನಾಸಿಕಕೆ ಕಾಣುವ ಶಕ್ತಿ
ಮನಕೆ ಆಸೆಯಿರೆ ಭುಕ್ತಿ

ಮೂಕ ಆದಾನು ವಾಚಾಳಿ
ಕುರುಡ ಕಂಡಾನು ಜಗವೆಲ್ಲ
ಕಿವುಡ ಹಾಡುವನು ರಾಗವೆಲ್ಲ
ಮೂಢ ಅದೇನು ಪಂಡಿತ
ಇಂದಲ್ಲ ಮುಂದಿನ ಜನುಮದಲಿ

ವರವೂ, ಶಾಪಗಳೂ ಜೊತೆಗೆ ಕೊಡುವುದೇಕೆ?


ವರವೂ, ಶಾಪಗಳೂ ಜೊತೆಗೆ ಕೊಡುವುದೇಕೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನೂರು ನಾಲಿಗೆಯವನು; ಹಾರಿ ಕುಣಿವುವು ಬಹು ತಾಳದಲಿ
ನರ ಮಂಡಲವೆಲ್ಲಾ ವಿಪರೀತ ವಿದುತ್ಮಯ

ಬಾನಿನ ಮೂಲೆಗಳಲೆಲ್ಲಾ ಒಮ್ಮೆಯೇ
ಚಲಿಸೆ ಹಾತೊರೆಯುವ ಚಂಚಲ ಹಕ್ಕಿಯು ಮನ

ಸ್ವರಗಳು ಸಾವಿರ; ಅಕ್ಷರಗಳು ಐವತ್ತೆರಡೂ ಉಲಿಯುವುವು
ಎಪ್ಪತೆರಡೂ ರಾಗಗಳು ಕೂಗುವುವು ಮಂದ್ರದಿಂದ ತಾರದಲಿ

ಮಂಡೆಯಲಿ ಅಡಗಿವೆ ಇಡೀ ಆದಿ ಬ್ರಹ್ಮಾಂಡ
ಕಣ್ಣಿನಲಿ ಬೆಳಗುತಿವೆ ಒಂದೇ ಗಳಿಗೆಯಲಿ ಕೋಟಿ ಚಿತ್ರಗಳು

ಕೈಗಳು ಎರಡೇ; ಬೆರಳುಗಳು ಮಾತ್ರ ಹತ್ತು
ಕವಿಯ ಬೊಗಸೆಗಳು ಸಪ್ತ ಸಾಗರಗಳ ಹಿಡಿಯಲಾರದ ಜಿಗುಪ್ಸೆ

ವ್ಯಾಸ ಪ್ರಚಂಡರ ಅದೃಷ್ಟ ಜನುಮದಲೇ ದಿವ್ಯ ಜ್ಞಾನ
ಹಾಡಿದ್ದು ಮಹಾ ಋಷಿ, ಲೇಖನಿ ವಕ್ರತುಂಡನ ಕೈಗೆ

ಹಿಂದೆ ಯಾರಗೂ ಕೊಡದ ವರ ಕೊಟ್ಟಿರುವ ಬೊಮ್ಮ
ಶಾಪಗ್ರಸ್ತನು ಅಲ್ಲವೇ ಬರೆಯುವ ಭಾರ ಮಾತ್ರ ನನ್ನದೇ!

ಒಗಟು


ಒಗಟು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಆನೆಲ್ಲಿ? ಅನೆಲ್ಲಿಯಿಲ್ಲ? ಎನಲ್ಲಿ ಇಲ್ಲ? ಎಲ್ಲವೂ ನಾನೇ ಅಲ್ಲವೇನೋ!
ಅಲ್ಲಿ; ಎಲ್ಲಿ ಬಿಡಿಸಿದರಲ್ಲಿ; ಎಲ್ಲೆಲ್ಲಿ ಹುಡುಕಿದರಲ್ಲಿ, ಕಾಣುವುದು ಕಣೋ!

ಒಳಗೆ, ಅದರೊಳಗೆ, ಮತ್ತದರೊಳಗೆ; ಮುಗಿಯದಂತೆ ಆಗಿದರೆ ನಾನೋ
ಕೆಳಗೆ, ತಲಾತಲದಲ್ಲಿ; ತಲೆ ಕೆಳಗೆ, ಕಾಲು ಮೇಲೆ, ಮನದಲ್ಲಿ ಇರುವೆನೋ!

ದೂರ ಹಾರಿ, ರಭಸಕ್ಕೆ ಮಿತಿಯಿಲ್ಲವೇನೋ ಎನ್ನುವಂತೆ ಹೋಗುವೆಯೇನೋ?
ಮೇರೆಯನ್ನು ಸೇರಿ ಬಿಡುವಂತೆ ಹಾರಿದರೂ ಮೇರೆ ಮೀರಿ ಜಾರುವುದೇನೋ?

ಜೂಟಾಟದಲ್ಲಿ ಮೂಲೆ, ಮೂಲೆಯಲ್ಲಿ ಮೆಲ್ಲಗೆ ಮನಹಾಯಿಸಿದರೂ ಸಿಗದಾ ಗೂಢ
ಆಟಾಟೋಪದ ತಡಕಾಟಕ್ಕೆ ಒಡೆಯದಾ ಒಗಟು ಬೋಮ್ಮನಾನೋ ಮಹಾ ಮೂಢ

ಎಲ್ಲ ಪೂಜೆಗಿಂತ ಅತಿ ಮುಖ್ಯ


ಎಲ್ಲ ಪೂಜೆಗಿಂತ ಅತಿ ಮುಖ್ಯ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಲೆದಾಡೋ ಮನವೇ, ಮೂಲೆ, ಮೂಲೆಯಾವುದೂ ಬೇಕಾದರೂ
ಆಲಸ ಬೇಡ, ಬೇಸರ ಬೇಡ; ಸಲೀಸಾಗಿ ಅಲೆದು ಮೆರೆವುದಾದರೂ

ಆಸೆ ತುಸೂ ಬೆಸವಾಗದ ಹಾಗೆ ನಲಿದಾಡು ಮಾನವ ತುಂಬಿದೆದೆಯಲಿ
ನಶಿಸಿ ಹೋಗುವ ಕಾಲವೆಲ್ಲ ಕಳೆದ ಮೇಲೆ ಉಳಿವುದಿಲ್ಲ; ಮನದಟ್ಟಾಗಲಿ

ಇರುವುದು ಐದೇ ಅಲ್ಲವೇನೋ ಇಂದ್ರಿಯಗಳು; ಹಸಿವಿದ್ದಾಗ ಮೆರೆದಾಡೋ
ಇರುವುದಿಲ್ಲ ಉಬ್ಬಳಿಸುವಾಸೆಗಳು ಮುಪ್ಪಿಗೆ ಮುಂಚೆಯೇ ಕುಣಿದಾಡೋ

ಜೊಲ್ಲು ಸುರಿಸಿದ ಎಲ್ಲ ಭೋಗಗಳಲಿ ಭಾಗಿಯಾಗಿ ಬಿಡುವುದು ಶಿವನ ಸೇವೆ
ಇಲ್ಲ, ಮತ್ತೇನಿಲ್ಲ ಈ ಜನುಮದಲಿ; ಎಲ್ಲ ಪೂಜೆಗಿಂತ ಮುಖ್ಯವೋ ದೇಹ ಸೇವೆ