ನಿನ್ನೆಯು ಅಪ್ಪಟ ಚಿನ್ನ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಕಾಲನ ಚಾಚು ನಾಲಿಗೆಗೆ ಆಗಲೇ ಆಗಿಹೋಯಿತು ಊಟ!
ಲೋಲಾಕು, ಝುಮುಕಿ, ರಿಂಗು; ಟೇಪುಗಳು ಬಣ್ಣ, ಬಣ್ಣದ್ದು
ಓಲಾಡುವ ಒಪ್ಪದಿ ಹೆಣೆದ ಉದ್ದದ ಜಡೆ; ಝರಿ ಲಂಗ, ಉದ್ದದ್ದು
ಹಿಗ್ಗಿದ ಹೊಸದಾಗಿ ಹರೆದ ಹೆಣ್ಣು ಮಕ್ಕಳ ಹೆಮ್ಮೆಯಾ ಅಪ್ಪಿ
ಹಗುರವಾಗಿ ಹೊದ್ದ ದಾವಣಿ, ಜರತಾರಿ ರವಿಕೆ ಅದಕೆ ಒಪ್ಪಿ
ಮುಂಗೈಯುದ್ದ ಗಾಜಿನ ಬಳೆಗಳು ಕಿವಿಗೆ ಝುಂ ಎನ್ನುವ ನಿನಾದ
ಮಂಗ ಉದ್ದುದ್ದಾಗಿ ನನ್ನೊಳಗೆ ಅದಕೆ ಕುಣಿದು ಕುಪ್ಪಳಿಸುವ ಅಂದ
ಕಳೆದು ಹೋದುದು ಚೆಂದ; ನಿನ್ನೆ ಯಾವಾಗಲೂ ಬಲು ಸವಿಯಪ್ಪ
ಹಳೆಯದು ಹೊಸಕಿಂತ ಬಲು ಆನಂದ; ಎಂದೂ ಮರೆಯಲಾಗದಪ್ಪ
No comments:
Post a Comment