ವರವೂ, ಶಾಪಗಳೂ ಜೊತೆಗೆ ಕೊಡುವುದೇಕೆ?ಡಾಕ್ಟರ್ ಕೆ. ಆರ್. ಎಸ್. ಮೂರ್ತಿನೂರು ನಾಲಿಗೆಯವನು; ಹಾರಿ ಕುಣಿವುವು ಬಹು ತಾಳದಲಿನರ ಮಂಡಲವೆಲ್ಲಾ ವಿಪರೀತ ವಿದುತ್ಮಯಬಾನಿನ ಮೂಲೆಗಳಲೆಲ್ಲಾ ಒಮ್ಮೆಯೇಚಲಿಸೆ ಹಾತೊರೆಯುವ ಚಂಚಲ ಹಕ್ಕಿಯು ಮನಸ್ವರಗಳು ಸಾವಿರ; ಅಕ್ಷರಗಳು ಐವತ್ತೆರಡೂ ಉಲಿಯುವುವುಎಪ್ಪತೆರಡೂ ರಾಗಗಳು ಕೂಗುವುವು ಮಂದ್ರದಿಂದ ತಾರದಲಿಮಂಡೆಯಲಿ ಅಡಗಿವೆ ಇಡೀ ಆದಿ ಬ್ರಹ್ಮಾಂಡಕಣ್ಣಿನಲಿ ಬೆಳಗುತಿವೆ ಒಂದೇ ಗಳಿಗೆಯಲಿ ಕೋಟಿ ಚಿತ್ರಗಳುಕೈಗಳು ಎರಡೇ; ಬೆರಳುಗಳು ಮಾತ್ರ ಹತ್ತುಕವಿಯ ಬೊಗಸೆಗಳು ಸಪ್ತ ಸಾಗರಗಳ ಹಿಡಿಯಲಾರದ ಜಿಗುಪ್ಸೆವ್ಯಾಸ ಪ್ರಚಂಡರ ಅದೃಷ್ಟ ಜನುಮದಲೇ ದಿವ್ಯ ಜ್ಞಾನಹಾಡಿದ್ದು ಮಹಾ ಋಷಿ, ಲೇಖನಿ ವಕ್ರತುಂಡನ ಕೈಗೆಹಿಂದೆ ಯಾರಗೂ ಕೊಡದ ವರ ಕೊಟ್ಟಿರುವ ಬೊಮ್ಮಶಾಪಗ್ರಸ್ತನು ಅಲ್ಲವೇ ಬರೆಯುವ ಭಾರ ಮಾತ್ರ ನನ್ನದೇ!
Wednesday, January 4, 2012
ವರವೂ, ಶಾಪಗಳೂ ಜೊತೆಗೆ ಕೊಡುವುದೇಕೆ?
Subscribe to:
Post Comments (Atom)
No comments:
Post a Comment