ರಚನೆ ರಸಿಕರ ಅನುಯಾಯಿ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಭರದಿ ಭುರ್ರೆಂದು ರೆಕ್ಕೆಗಳ ಎರಡೂ ಬಡಿಯುತ್ತ ಸೇರುವುದು
ಕರೆವ ಮನಗಳ ಮನುಜ ಕುಲಕೆಲ್ಲರಿಗೂ ತಾನೇ ಒಲಿಯುವುದು
ಕರವ ಬಿಡಿಸಿದ ರಸಿಕರು ಆರಾದರೂ ನಲಿಸುತ ಉಲಿಯುವುದು
ಬರೆದ ಭಾವಗಳ, ಧಾರೆಯೆರೆದ ಅನುಭವವನೆಲ್ಲಾ ತೋರುವುದು
ಪರರ ತೆರೆದ ಮನಗಳು ಅರಿತಂತೆ ಪರಿಪರಿಯಲಿ ಅವತರಿಸುವುದು
ಧಾರೆಯ ಮಾತ್ರ ಎರೆವ ನನ್ನ ಪ್ರೇಮದ ಕಾಯವು ಮುಗಿಯುವುದು
ಮೆರೆವುದು ಸಾವಿರ ರಾಗಾನುಭಾವದಲಿ ರಸಿಕರಂಗದ ರಂಗಾಗುವುದು
No comments:
Post a Comment