Wednesday, January 4, 2012

ಹರುಷ ಹೊಸದಾದರೆ ವರುಷವೂ ಹೊಸತೇ


ಹರುಷ ಹೊಸದಾದರೆ ವರುಷವೂ ಹೊಸತೇ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಭುವಿಗುಂಟು ನವ ವರುಷ; ಋತು ಆರು; ಸುತ್ತುವುದದರ ಯಾಗ
ರವಿಗಿಲ್ಲ ಯುಗ ಕೋಟಿ ಉರುಳಿದರೂ ಉರಿವುದೊಂದೇ ಯೋಗ

ವಸುಧೆಯ ಕೂಸಲ್ಲವೆ ಆನು! ಹೊಸ ರವಿಯ ಕಾಣುವೆನು ಅನುದಿನ
ಹೊಸದು ದಿನ, ವಾರ; ಹೊಸ ಮಾಸ, ಹೊಸ ಹರುಷದ ಋತುಮಾನ

ಹೊಸತ ಅಪ್ಪಿ, ಹಳೆಯದನೆಲ್ಲಾ ಕಳೆಯುವ ಚಾಳಿಯು ಬಲು ಹೆಮ್ಮೆಯದು
ಜಸ ತಮದೆಂದು ಮನುಶರೆಲ್ಲ ಉಷೆಯಲ್ಲಿ ಏರುವ ಭಾಸ್ಕರನೂ ಹೊಸದು

ಬರಮಾಡಿ ಕೈಜೋಡಿ, ಬೆರಗಾಗುತ ಯುಗವು ಮತ್ತೊಂದು ಹುಟ್ಟಿತೆಂದು
ತ್ವರೆ ಮಾಡಿ ಬನ್ನಿರೆಲ್ಲಾ; ಕುಣಿದಾಡಿ ಕೇಕೆ ಹಾಕಿರೆಲ್ಲಾ ವರವಿದೆಮ್ಮದೆಂದೂ

No comments:

Post a Comment