ಒಗಟು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಅಲ್ಲಿ; ಎಲ್ಲಿ ಬಿಡಿಸಿದರಲ್ಲಿ; ಎಲ್ಲೆಲ್ಲಿ ಹುಡುಕಿದರಲ್ಲಿ, ಕಾಣುವುದು ಕಣೋ!
ಒಳಗೆ, ಅದರೊಳಗೆ, ಮತ್ತದರೊಳಗೆ; ಮುಗಿಯದಂತೆ ಆಗಿದರೆ ನಾನೋ
ಕೆಳಗೆ, ತಲಾತಲದಲ್ಲಿ; ತಲೆ ಕೆಳಗೆ, ಕಾಲು ಮೇಲೆ, ಮನದಲ್ಲಿ ಇರುವೆನೋ!
ದೂರ ಹಾರಿ, ರಭಸಕ್ಕೆ ಮಿತಿಯಿಲ್ಲವೇನೋ ಎನ್ನುವಂತೆ ಹೋಗುವೆಯೇನೋ?
ಮೇರೆಯನ್ನು ಸೇರಿ ಬಿಡುವಂತೆ ಹಾರಿದರೂ ಮೇರೆ ಮೀರಿ ಜಾರುವುದೇನೋ?
ಜೂಟಾಟದಲ್ಲಿ ಮೂಲೆ, ಮೂಲೆಯಲ್ಲಿ ಮೆಲ್ಲಗೆ ಮನಹಾಯಿಸಿದರೂ ಸಿಗದಾ ಗೂಢ
ಆಟಾಟೋಪದ ತಡಕಾಟಕ್ಕೆ ಒಡೆಯದಾ ಒಗಟು ಬೋಮ್ಮನಾನೋ ಮಹಾ ಮೂಢ
No comments:
Post a Comment