ಪೀಚು ಭರದಲಿ ಹಣ್ಣಾದರೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಏನಾಯಿತು ನಿನಗೆ?
ಪೀಚಾದರೆ ಕಾಣದೆಯೇ ಇರುವುದೇ ಅಲ್ಲ;
ಹಣ್ಣಿನ ಘಮವಿರದೆ ಮಂಗವೂ ಮುಟ್ಟದು
ಬೇಗ ಬೇಗ ಬೆಳೆಯುವ ಗಮನ ಇರಲಿ
ಎಲೆಗಿಂತಾ ದೊಡ್ಡದಾಗಿ ಬೆಳೆಯ ಬೇಕು
ಎಲೆ ಹಸಿರಾದರೆ, ನೀ ಕೆಂಪು ಹಣ್ಣು
ಎಲ್ಲೆಲ್ಲೂ ಬೀರಬೇಕು ಕಂಪು ಪಸರಿಸಿ
ಎಲೆಲೆ ಹೆಣ್ಣೇ! ನಾ ತಿನ್ನ ಬೇಕಾದರೆ,
ದೊಡ್ಡ, ಕಂಪು ಬೀರುವ, ಕೆಂಪು ಹಣ್ಣು
ಕೇಳು! ಹೀಗಾಗ ಬೇಕು; ನಾವಿಬ್ಬರೂ ಹೀಗಾಡುತಿರಬೇಕು:
ತುಟಿ ಇಟ್ಟ ಒಡನೆಯೇ ಭರಸದಿ ರಸವನ್ನು ಸೂಸಬೇಕು
ಕಟಿಯನು ಕೈಲಿ ಹಿಡಿದರೆ ಬಿಗಿಯಲಿ, ಸೆಟೆದ ಬಿಲ್ಲಾಗಬೇಕು
ಮುಟ್ಟಿದೊಡೆ ಜಿಂಕೆಯಂತೆ ಚಕ್ಕನೆ ಚಿಮ್ಮಿ ಎಗರುತಿರಬೇಕು
ಮುತ್ತಿಟ್ಟ ಒಡನೆಯೇ ಬಿಸಿ ರಕ್ತ ಮೈಯೆಲ್ಲಾ ಹರಿಯಲೇ ಬೇಕು
ಒತ್ತಿ, ಒತ್ತಿದ ಎಡೆಯಲೆಲ್ಲಾ ಎದೆಯ ಡವಡವ ಕೇಳುತಿರಬೇಕು
ಹೊತ್ತು ಮೂಡಿದರೂ,
ನೆತ್ತಿಗೇರಿದರೂ,
ಎತ್ತೆತ್ತಲೂ ಕತ್ತಲಾದರೂ,
ಹತ್ತಿರ - ಹತ್ತಿರ ಒತ್ತುತಾ ಇರಬೇಕು
ದೊಡ್ಡ
ಗುಂಡನೆಯ
ಹಣ್ಣಾದ ಹೆಣ್ಣೇ
ಉಣ್ಣುತಿರಬೇಕು
ಗೇಣು ಮೊಳವಾಗಿ
ಅಲೆಯುತಿರಬೇಕು, ಅಳೆಯುತಿರಬೇಕು, ಸುಳಿಯುತಿರಬೇಕು,
ಗೇಲಿ ಮಾಡುತ್ತಾ, ಧಾಳಿ ಮಾಡುತ್ತಾ,ಹೇರಳ ಹಾವಳಿ ಮಾಡುತ್ತಾ
ಗೂಳಿಯಾ ಅಬ್ಬರದಲಿ ತಬ್ಬುತಿರಬೇಕು; ಕೇಳಿಯಾಡುತಿರಬೇಕು
ಸಿಡಿಲು ಬಡಿಯುತಿರಬೇಕು;
ಇಳೆಯೆಲ್ಲಾ ಥರ ಥರ ನಡುಗಿ ಕಂಪಿಸುತಿರಬೇಕು.