ಕಲೆಯೆಲ್ಲಾ ನಿನಗಿತ್ತ ಸಾಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಬಿಡಿಸಿ ಕವಿತೆಯ ಹಾಡುವಾ ಕವಿಗಳೇ ಇರಲಿಲ್ಲವಲ್ಲವೇ?
ಕಡೆದು ಕಲ್ಲಲಿ ಚಿತ್ತಿರವೇ ಬಿತ್ತರಿಸುವಂತೆ ಸಾರಿದರಲ್ಲವೇ
ನಡೆದ, ಓಡಿದ, ಜಿಗಿದಾ ಜಂತು ಮ್ರುಗಗಳನು ಕೆತ್ತಿದರಲ್ಲವೇ?
ಮಂಡೆ ಬಲಿತು ಮಂಗ ಮಾನವನಾಗುವ ಮೊದಲು ಹೇಗಿತ್ತು
ಚಂಡೆ, ಮದ್ದಳೆ ಬದಲು ಕೋತಿ ಕೇಕೆ ಹಾಕಿ ಕುಪ್ಪಳಿಸಿ ಕುಣಿದಿತ್ತು
ನಾಡಿಗನು ನೀನಿರಬಹುದು ಇಂದು; ಕಲೆ ತಲೆಮಾರಿನ ಆಸ್ತಿಯಷ್ಟೆ
ಹಡೆದವಳು ಇಳೆಯಲಿ ಕಲೆಯ ಸಂಪತ್ತೂ ಬದಲಿಸಿದಳು ಅವಳಷ್ಟೇ!
No comments:
Post a Comment