ನಾವು ಬೇರೆ; ನಮ್ಮ ಇರುವಿಕೆಯೇ ಬೇರೆ.
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಭೂತದ ಕಸದ ನಾತ ಎಸೆಯದೆಯೇ ಅದರ ಮಲವನ್ನೇ ವರುಷಗಳೆಲ್ಲಾ ಸೇವಿಸುವರ ಸಹವಾಸವೇ ಬೇಡ. ಅವರಿಗೆ ನಿನ್ನೆಯೂ, ಇಂದೂ, ನಾಳೆಯೂ ಒಂದೇ! ಹೊಸತಿಗೆ ಹಸಿವಿಲ್ಲ; ಹೊಸತರ ಘಾಸಿಯಂತೂ ಇಲ್ಲವೇ ಇಲ್ಲ; ಮೀಸೆ ನರೆತರೂ ಮಾಸಿದ ಮನಸು.
ನನ್ನ, ನನ್ನಂತಹವರ ವರ್ಣವೆ ಬೇರೆ; ನಾವು, ನೀವೂ ಅಂತಹವರೇ ಅಹುದಲ್ಲವೇ? ಬೆಸ ಹೇಳಬೇಡಿ. ನಮಗೆ ವಿಶ್ರಾಂತಿ ಬೇಡ. ವಿಕ್ರಾಂತ ನಾಕ ನಮ್ಮ ನಾಡಿನ ಸಿರಿ ನಾಮ.
No comments:
Post a Comment