ಸರಿಯೆಂದರೇನು?
ಡಾಕ್ಟರ್ ಕೆ. ಆರ್. ಎಸ. ಮೂರ್ತಿ
ಇರುವುದೊಂದೇ ಸರಿ ಇರಬಹುದೇ? ಇಲ್ಲಪ್ಪ ಇಲ್ಲವೇ ಇಲ್ಲ
ಬರೀ ಒಂದೇ ತರಹದ ಸರಿ ಮಾತ್ರ ಹುಟ್ಟಲೇ ಇಲ್ಲ, ಗೊತ್ತೇ?
ಪರಿಪರಿ ಸರಿಗಳು ಬೇರೆ ಬೇರೆಯೇ ಕಡೆ ಧಿಡೀರನೆ ಹುಟ್ಟಿತೆ?
ಇದಕ್ಕೆ, ಅದು ಯಾರೆಂದು ಗೊತ್ತಿಲ್ಲ; ಇದು ಇರುವುದೂ ಪತ್ತೆಯಿಲ್ಲ
ಅದಾಗೇ ಆ ಸರಿಯು, ಈ ಸರಿಯನ್ನು "ಅಪ್ಪಣೆಯೇ ಸಾರ್" ಎಂದಿಲ್ಲ
ನಾನೇ ಸರಿ, ಅವರೇ ಸರಿ, ಒಬ್ಬರು ಮಾತ್ರವೇ ಸರಿ ಖರೆ ಎಂದರೆ
ಅನ್ನಿ ನೀವು: ಎಲ್ಲರೂ ಸರಿಯೇ; ಯಾರೂ ಸರಿಯಂತೂ ಆಗಿಹೋದರೆ
ಮಿಕ್ಕವರೂ ತಾವೇ ಸರಿಯೆಂದಾರು; ಅದಕ್ಕೆಯೇ ಸುಮ್ಮನೆ ತಲೆಯಾಡಿಸಿ
ರೊಕ್ಕ ಕೊಟ್ಟರೆ ಸರಿಯಲ್ಲದ್ದೂ ಸರಿಯೇ ಖರೆ; ಕಾಸು ಕೈಗೆ ಬಿಸಿಮಾಡಿಸಿ
ಮಿಕ್ಕ ಬೇರೆ ಬೇರೆ ಸರಿಯಲ್ಲದ್ದು ಸರಿ ಮಾಡುವ ತಂತ್ರ ಸರೀ ಅರಿತುಕೊಳ್ಳಿ
ಹಕ್ಕು ಯಾರಿಗಿದೆ ಗೊತ್ತೇ? ಚೂರಿ, ಪಿಸ್ತೂಲು, ದೊಡ್ಡ ಬಾಂಬು ಪಡೆದುಕೊಳ್ಳಿ
ಲಂಚ, ಮಂಚ ಇವೆಲ್ಲಾ ಗೊತ್ತಿರಬೇಕು; ಗುರೂ, ಬಾಬಾಗಳ ಕಾಲು ಹಿಡಿದು
ಕಾಂಚನ ಸೇವೆ ಮಾಡಲು ಕಲಿಯಬೇಕು; ಸರಿಯೇ ಬಾಯಿಯಿಂದ ಬಂದದ್ದು
ಸರಿಯ ಸೂತ್ರವಿದು; ಖರೆಯ ಸ್ವಾರಸ್ಸ್ಯವಿದು; ದಿಟದ ಗುಟ್ಟಿದು; ಮರೆಯದಿರಿ
ಹರೆಸುವೆ, ಹಾರೈಸುವೆ ನಿಜ ಬೀಜ ಮಂತ್ರ ನಿಮ್ಮ ವಶ; ಮುಂದೆ ಮೆರೆಯುತಿರಿ
No comments:
Post a Comment