ಅಂತಿಮದೆಡೆಗೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಎತ್ತಲೂ, ಕತ್ತೆತ್ತಿದಾಗಲೂ ಸುತ್ತಿಕೊಂಡಿದೆ ಕಪ್ಪಾಗಿ ಕಾಳ ಕತ್ತಲೇ ಆವರಿಸಿಕೊಂಡಿದೆ
ಮತ್ತೆ, ಮತ್ತೆ ಭೀತಿಯ ಭೂತ ನೆತ್ತಿ ಹತ್ತಿ ಅಣಕಿಸುತಾ ಕಿಸಿಕಿಸಿ ನಗುತಾ ಕುಣಿಯುತಿದೆ
ಜಗ್ಗಿಸಿ ಝಾಂಗ ಬಲವನೇ ಕುಗ್ಗಿಸಿ, ಮೊಣಕಾಲುಗಳ ವಿಕಾರ ತಾಳದಿ ಅಲಾಡಿಉತಿದೆ
ಮೊಗದ ದವಡೆಯ ನಡುಗಿಸಿ, ಹಲ್ಲಿನ ಸಾಲುಗಳ ಚಿಟಿಕೆಯಂತೆ ಚಟ ಚಟ ಬಾರಿಸುತಿದೆ
ಲಗಾಮು ಕಳಚಿ ಕಾಲ ರಥದ ಕುದುರೆಗಳು ಹೇಸರಗತ್ತೆಗಳೋ ಎಂಬಂತೆ ಪರಾರಿಯಾಗಿವೆ
ಹಗುರಗೊಂಡು ಚಕ್ರಗಳೆರಡೂ ಬೇರೆ ಬೇರೆ ದಿಕ್ಕುಗಳ ಕಡೆಗೆ ಗುಡುಗಿಕೊಂಡು ಹೋಗಿಯಾಗಿದೆ
ಈಗ ಗತಿಯೇ ನಾಪತ್ತೆಯಾಗಿ, ತಲೆಯ ಮೇಲೆ ಕೈಹೊತ್ತುಕೊಂಡು ಅತ್ತು ಅತ್ತು ಕಣ್ಣು ಬತ್ತಾಗಿದೆ
ಸಾಗುವುದಾದರೂ ಎಂತು? ಕುಗ್ಗಿ ನೆಲಕೆ ಕುಸಿಯುವುದೇ ಖಾತರಿ ಸರಿಯೇ ಎನ್ನುವಂತಾಗಿದೆ
No comments:
Post a Comment