ನಿನ್ನಾಲಿಂಗದ ಸಂಗವೇ ಸಗ್ಗ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಮರೆತಿಲ್ಲವೇ ಬರಹದ ಸುವ್ರತ ಪ್ರಮಾಣವ
ಭಾರವಾಗಿದೆ ನೊಗವ ತಗ್ಗಿಸಿ ಭವವ ಹಿಂಗಿಸಿ
ಭರದಲಿಯಾದರೂ ಬರೆದು ವ್ರತವ ನಿನಗೊಪ್ಪಿಸಿ
ಪೊರೆದು ತ್ವರೆಯಲಿ ಶಿರದ ಮಂಚದಿ ನೀ ನರ್ತಿಸಿ
ಕರೆದು ಕೊಂಡೊಯ್ಯೇ ಸರಸರನೇ ಪರಕೆ ಧಾವಿಸಿ
ಹೊರೆಯು ಅತೀ ಆಗಿಬಿಟ್ಟಿದೆ ಆಗದು ಕಣ್ಣ ಮಿಟುಕು
ಮೆರೆಯುವ ಹಂಬಲ ನಿನ್ನಾಲಿಂಗದಿ ಬೇಕೇ ಬೇಕು
No comments:
Post a Comment