ಕಲಿಯ ತಾಳವು ಮೊಳಗುತಿರುವ ಕಾಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ದಿಟ ಪಣ ತೊಟ್ಟವರಿಗೆ ಊಟವಿಲ್ಲದ ಬರಗಾಲ
ಬಡ ರೈತರನು ಕತ್ತೆ ಭಡವರು ಕೊಳ್ಳೆ ಹೊಡೆದು
ಮಹಡಿಯರಮನೆಗಳಲಿ ಮೆರೆಯುವ ಕಾಲವಿದು
ಕೊರಳಿಗೆ ಹಾರ ತುರಾಯಿ ಹೇರಿಕೊಳ್ಳುತ ಬಿರುದು
ತೋಳುಗಳ ಚಾಚಿ ಅಪ್ಪುವ ಕಳ್ಳ ನಾಟಕವಿವರದು
ಭೂದೇವಿಯನೇ ಅಗೆದು ದೋಚುವ ಧೂರ್ತರಿವರು
ಆದಾಯ ಮಾಡಲು ನೀತಿಯನೆಲ್ಲಾ ಅಡವಿಡುವವರು
ಹೆತ್ತ ತಾಯಿಯನೇ ಅಡವಿಟ್ಟು ಕೋಟಿ ಲೆಕ್ಕವ ಗೈಯುವರು
ಸತ್ತ ಮೇಲೆ, ಮೇಲೆ ಹಾರಿಹೊಗುವಾಗ ಏನ ತೆಗೆದೊಯ್ಯುವರು!
No comments:
Post a Comment