ಕಹಿಯ ಜಗಿದು ಜಗವ ನಗಿಸು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಮುಖವನ್ನು ನೋಡಿದವರಿಗೆ ಗಂಟಲೊಳು ನುಂಗಿದ್ದು
ದುಂಬಿಯ ಮಧುವಿನ ಪಾಯಸ ಕುಡಿದವರಂತಿರಬೇಕು
ನಂಬಿಸಿ ಎಲ್ಲರನೂ ನಾವೆಲ್ಲರೂ ಹೀಗೆ ಇರಬೇಕೆನ್ನಬೇಕು
ಗುಂಡಿಗೆಯು ಗಂಬೀರವಾಗಿ ಗುಟ್ಟಿನಲ್ಲೇ ಕಣ್ಣೀರು ಬಿಡಲು
ಕಂಡವರೆಲ್ಲಾ ಇಂತೆಯೇ ಸಂತಸದ ಸಾಗರವ ಆಶಿಸಲು
ಬೇವಿನ ಎಳೆಗಳ ಜಗಿಯುವಾಗ ಸವಿಮೊಗವ ತೊಟ್ಟಿರಬೇಕು
ನೋವಿನ ಗಳಿಗೆಯ ಗುಳಿಗೆ ಉಂಡು ಜಗವ ನಗಿಸುತಿರಬೇಕು

No comments:
Post a Comment