Wednesday, January 4, 2012

ನನ್ನ ಹೆಸರೇನು?


ನನ್ನ ಹೆಸರೇನು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಕಠಿಣ ವಜ್ರದೊಳಡಗಿತ್ತು ಒಂದು ಕೋಮಲ ಕುಸುಮ
ಹೆಣವಾಗಿ ಹೂತಿದ್ದರೂ ಅಡಗಿತ್ತು ಒಳಗೊಂದು ಆತ್ಮ

ಸುಟ್ಟು ಬೂದಿಯಾದ ಮೇಲೂ ಅದರ ಗುಟ್ಟು ಉಳಿದಿತ್ತು
ಗಟ್ಟಿ ಮೊಸರಾಗಿ ಹೆತ್ತಾಗಿದ್ದರೂ ಬಸಿರಿಲ್ಲದ ಹಾಲಾಗಿತ್ತು

ಮಂಜುಗಡ್ಡೆಯಾ ಗುಂಡಿಗೆಯಲಿ ಅಗ್ನಿಜ್ವಾಲೆಯು ಉರಿದಿತ್ತು
ಬಂಜೆ ಬೆಡಗಿಯ ಅಂಡ ಕೋಶದಲಿ ಜೀವವೊಂದು ಬೆಳೆದಿತ್ತು

ಬಿಡಿಸಿ ಒಂದೂ ಸ್ವರ ಹೊರಡದ ನನ್ನ ನಾಲಿಗೆ ಉಲಿದಿತ್ತು
ಕುಡಿಯೊಂದು ಚಿಗುರಿ ಕನ್ನಡ ಕವಿತೆಯು ಹೊರಮೊಮ್ಮಿತ್ತು

No comments:

Post a Comment