ಶತಕ ಶಾಪ ವಿಮುಕ್ತ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಒಂದು ಕಡಿಮೆಯಾದರೂ ಚಿಂತೆ
ಒಂದು ನೂರು ಹೊಡೆದರೂ ಅಂತೇ
ತೆಂಡೂಲ್ಕರ ಬಾಲ್ಯದಿಂದಲೇ ಭಲೇ
ದಾಂಡು ವೀರ ಗೆದ್ದರೆ ನಮಗೆ ಸೋಲೇ?
ಐದು ದಿನಗಳೂ ಯಾಗ ಹೊಡೆಯಲಿಕ್ಕೆ
ಐವತ್ತು ಓವರುಗಳೇ ಸಾಕು ಬಡಿಯಲಿಕ್ಕೆ
ನೂರು ನೂರು ಮಾತ್ರ ನಮ್ಮಗೆ ಸಾಲದಯ್ಯಾ
ನೂರೆಂಟು ನೂರು ಮಾಡಿದರೆ ಅರ್ಚನೆಯಯ್ಯಾ
ಭಾರತ ರತ್ನನು ಅಷ್ಟೋತ್ತರ ಶತಾವಳಿ ಮಾಡಿ
ಹೊರಟು ಹೋಗಲಿ ಕ್ರಿಕೆಟ್ಟು ವಾನಪ್ರಸ್ತಾಶ್ರಮಕ್ಕೆ
No comments:
Post a Comment