ಮೂರ್ತಿಯ ಅನುಭವದ ಕಿವಿಗುಟ್ಟು
ಬಿಟ್ಟಿ ಕೊಟ್ಟರೆ ತಟ್ಟದು, ಅಟ್ಟು, ಹಿಟ್ಟಿಗೆ ಬೆಲೆಯಿಲ್ಲ
ಕಟ್ಟು ನಿಟ್ಟು ಇದ್ದರೇನೇಯೇ ಗಟ್ಟಿ ರಟ್ಟೆ, ಸೊಂಟ,
ಬೆಟ್ಟದಂತಹ ದೇಹ ನೆಲ ಮೆಟ್ಟಿ ಗತ್ತಿನಲ್ಲಿ ನಿಂತೀತು
ತಂಟೆ ಮಾಡದೆ ಮೈ ಮನ ಮುರಿದು ನೀಗಿದರೆ ಮಾತ್ರ
ಚಟ್ಟ ಹತ್ತಿ ಸುಮ್ಮನೆ ಮಲಗುವ ಮುನ್ನ ನಿನಗೆ ನೆಮ್ಮದಿ
No comments:
Post a Comment