ಸಂಸ್ಕೃತಿಗೆ ಪವಮಾನ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಬೀರು ಬಾಟಲು ಕೈಲಿ ಗಟ ಗಟಿಸುವರಾಗಿ ಬಿಟ್ಟಿದ್ದಾರಪ್ಪ
ಊದಿನ ಕಡ್ಡಿಯ ಹೊಗೆಯು ಇವರಿಗೆ ಸ್ವಲ್ಪ ಅಲರ್ಜಿಯಂತೆ
ಬೀಡಿಯುದ್ದದ್ದು ಸಿಗಾರೆಂಬುದು, ಸಿಗರೇಟು ಸೇವನೆಯಂತೆ
ಬಾಯಿ ತುಂಬಾ ಮಂತ್ರ, ಜನಿವಾರ, ಲಿಂಗಗಳಿಗೆ ಭಕ್ತಿಯಿತ್ತು
ನಾಯಿ ಜಾತಿಯಿವರದು ಈಗ ಬರೀ ಪೋಲಿ ಪದಗಳು ಬರುತ್ತೆ
ಆಡಂಬರದ ಆ ಮಠ, ಈ ಮಠ ಅಂತ ಕಂಠ ಪೂರ್ತಿ ಬೊಕಳೆಯು
ಮಡಿಯಲ್ಲಿ ಸೂಟು ಟೈ ಧರಿಸಿ ತಿನ್ನುವರು ದನ, ಹಂದಿ, ಕೋಳಿಯ
ಅವಮಾನವೇ ಇಲ್ಲದವರ ಬಗ್ಗೆ ಏನು ಹೇಳಿದರೂ ನಾವೇ ಕೆಟ್ಟವರು
ಪವಮಾನ ಹಾಡಿ ಬಿಡೋಣವೇ ಅವನತಿಯಾಯ್ತು ಸಂಸ್ಕೃತಿಯ ಹೆಸರು
No comments:
Post a Comment