ಮೂರ್ತಿಯ ಅಮೆರಿಕಾನುಭವ
ನನಗೆ ನೇರವಾಗಿ ಪ್ರಾಧ್ಯಾಪಕ ವೃತ್ತಿಯ ಹಿರಿಮೆಯಲ್ಲಿ ಅಮೇರಿಕಾದ ನೆಲದಲ್ಲಿ ಕಾಲಿಡುವ ಲಭ್ಯವೆಂದರೆ ಕೇಳಿದವರು ಬಾಯಿ ಬಿಡುತ್ತಿದ್ದರು. ಹಲವರು ನಂಬಲೇ ಇಲ್ಲ.
ಬಂದದ್ದಾಯಿತು. ವಿಮಾನದಿಂದ ಇಳಿದ ಮಾರನೆಯ ದಿನವೇ ಪರದೇಶದ ಪ್ರಸಿಧ್ಧ ವಿಶ್ವ ವಿದ್ಯಾಲಯದಲ್ಲಿ ರಂಗ ಪ್ರವೇಶವೂ ಆಗಿಹೋಯಿತು. ನಾನು ಇತರ ಪ್ರಾಧ್ಯಾಪಕರಂತೆ ಕಾಣುತ್ತಿರಲಿಲ್ಲ. ಯಾರೋ ವಿದ್ಯಾರ್ಥಿಯೇ ಎಂದೇ ತಿಳಿದು ಕೊಂಡಿದ್ದವರೇ ಎಲ್ಲರೂ.
ಕಾಗದದ ಮೇಲೆ ಬರೆಯುವುದಕ್ಕಿಂತ, ತಲೆಯಲ್ಲಿ ಬರೆದುಕೊಳ್ಳುವುದೂ, ವಿಜ್ಞಾನ ಮತ್ತು ತಂತ್ರ ಜ್ಞಾನದ ಕ್ಲಿಷ್ಟ ಗಣಿತಗಳನ್ನೂ, ವಿದ್ಯುತ್ ಮಂಡಲಗಳನ್ನೂ ಮಿದುಳಿನಲ್ಲಿಯೇ ಗುಣುಗುಣಿಸುವುದು ಅತಿಶಯದ ಹವ್ಯಾಸ. ಪಾಠ ಮಾಡುವಾಗ ಇತರ ಪ್ರಾಧ್ಯಾಪಕರೆಲ್ಲಾ ಪುಸ್ತಕದ ಮೊರೆಹೋಗಿ, ಕೈಬರಹದಲ್ಲಿ ಬರೆದುಕೊಂಡು ಬಂದದ್ದನ್ನು ಶಿಸ್ತಿನಲ್ಲಿ ವೈಟ್ ಬೋರ್ಡಿನ ಮೇಲೆ ಕಾಪಿ ಮಾಡಿಕೊಂಡು ಮಾತನಾಡುವುದು ಸಾಮಾನ್ಯವಾದ ಮತ್ತು ಒಪ್ಪಿಗೆಯ ಸಂಪ್ರದಾಯ. ನಾನು ಬರಿಯ ಕೈಯಲ್ಲಿ ರಂಗ ಪ್ರವೇಶವನ್ನು ಮಾಡಿ, ಗಂಟೆಗಟ್ಟಲೆ ಕ್ಲಿಷ್ಟ ತಂತ್ರಜ್ಞಾನ ಮಂಡನೆ ಮಾಡುತ್ತಿದ್ದೆ. ನನಗೆ ಇದೇನೂ ವಿಶೇಷ ವ್ರತವೆನ್ನಿಸುತ್ತಿರಲಿಲ್ಲ. ಜೊತೆಗೆ, ವಿಜ್ಞಾನ ಮತ್ತು ತಂತ್ರ ಜ್ಞಾನದ ಮೂಲ ತತ್ವಗಳನ್ನೂ, ಆಳವಾದ ವಾದಗಳನ್ನೂ ಬಾಳೆಯ ಹಣ್ಣು ಸುಲಿಯುವಂತೆ ವಿದ್ಯಾರ್ಥಿಗಳ ತಲೆಗೆ ತಿನ್ನಿಸುತ್ತಿದ್ದೆ.
ಸುಮಾರು ಒಂದು ತಿಂಗಳು ಕಳೆದಿರಬಹುದು. ಒಂದು ದಿನ ಯಥಾ ಪ್ರಕಾರದಲ್ಲಿ ಪಾಠ ಮಾಡುತ್ತಿದ್ದೆ. ವೈಟ್ ಬೋರ್ಡಿನ ಕಡೆಗೆ ತಿರುಗಿ ಕೆಲವು ಸಾಲುಗಳನ್ನು ಬರೆದ ಮೇಲೆ, ತಿರುಗಿ ನೋಡಿದಾಗ ವಿದ್ಯಾರ್ಥಿಗಳ ಜೊತೆಗೆ ಹಲವು ಪ್ರಾಧ್ಯಾಪಕರೂ ಕುಳಿತಿರುವುದು ಕಂಡಿತು.
ಬಾಲ್ಯದಲ್ಲೇ ಮತ್ತು ಹದಿಹರೆಯದಲ್ಲೇ ಕನ್ನಡ ಸಾಹಿತ್ಯದ ದಿಗ್ಗಜಗಳ ಜೊತೆ ಜೊತೆಯೇ ಪ್ರೌಢ ವಿಷಯಗಳಲ್ಲಿ ಭಾಷಣಗಳನ್ನು ಮಾಡಿ ಪಳಗಿದ ನನಗೆ ದಳು ಸಭೆಯಲ್ಲಿ ಯಾರು ಯಾರು ಕುಳಿತಿದ್ದಾರೆ ಎನ್ನುವುದು ಕಣ್ಣು ಒಂದೇ ಸಾರಿ ಮಿಟುಕುವುದರಲ್ಲೇ ಗೊತ್ತಾಗಿ ಬಿಡುತ್ತಿತ್ತು.
ನನಗೆ ಅರಿವಿಲ್ಲದಂತೆಯೇ ನನ್ನ ಬಹಳ ಹಿರಿಯ ಪ್ರಾಧ್ಯಾಪಕ ಸಹಪಾಟಿಗಳೆಲ್ಲಾ ನನ್ನ ಸಭೆಯಲ್ಲಿ ಕೂತು ನನ್ನ ಬಗ್ಗೆ ನನ್ನೆಲ್ಲಾ ವಿದ್ಯಾರ್ಥಿಗಳೂ ಹೇಳಿದ್ದು ನಿಜವೇ ಎಂದು ತಾವೇ ಪರೀಕ್ಷಿಸಿ ನಮ್ಮ ಡೀನ್ಗೆ ವರದಿ ಒಪ್ಪಿಸಲು ಬಂದಿದ್ದರೆಂದು ಪಾಠವೆಲ್ಲಾ ಮುಗಿದ ಮೇಲೆ ನನಗೆ ಹೇಳಿದರು.
ಮುಂದೆ ನನ್ನ ವಿದ್ಯಾರ್ಥಿಗಳ ಜೊತೆ ಹಲವು ಸಹಪಾಟಿ ಪ್ರಾಧ್ಯಾಪಕರೂ ಪಾಠ ಕೇಳುವುದು ಸಾಮಾನ್ಯವಾಗಿ ಬಿಟ್ಟಿತು. ನನಗೆ ವಿದ್ಯುತ್ ತಂತ್ರಜ್ಞಾನವೇ ಅಲ್ಲದೆ, ಉದ್ಯಮ ಜ್ಞಾನ, ಕಂಪ್ಯೂಟರ್, ಖಗೋಳ ಶಾಸ್ತ್ರ, ಮತ್ತಿದರ ಜೊತೆಗೆ ಅಂತರ ರಾಷ್ಟ್ರೀಯ ಸಂಗೀತ ತುಲನವನ್ನೂ ಪಾಠ ಮಾಡಲು ಕರೆ ಬಂದಿತು.
ಮುಂದುವರಿಯುತ್ತದೆ.
A look at the most popular casino site - LuckyClub
ReplyDeleteCheck out our guide to the most popular casinos for slots machines and live dealer games. We have a luckyclub quick breakdown of all the popular casino site games.