ಮಡಿಯಲ್ಲಿ ಮ್ಯಾನುಫಾಕ್ಚರ್ರು!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಹೋಮ, ಸಹಸ್ರ ನಾಮ, ಅಭಿಷೇಕ, ನೈವೇದ್ಯ ಎಲ್ಲಾ ಈಗ ತಾನೇ ಮಾಡಿರುವ ಹಾಗಿದೆ?
ಮರೆತೇ ಹೋಯ್ತು! ನಿಮ್ಮ ಉಪಾಕರ್ಮ ಚೆನ್ನಾಗಾಯ್ತೇನು? ಋಗ್ವೇದವೋ ಯಜುರ್ವೆದವೋ?
ಸರಿಗಮ ಕೂಡ ನಿಮ್ಮ ಬಾಯಿಂದ ಹೊರಡಲ್ಲ! ಅದಕ್ಕೆ ನಾನು ಕೇಳಲಿಲ್ಲ ಸಾಮವೇದವೋ?
ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಹ್ಯಾಗೂ ಯಾವ ವೇದಾನೂ ಬರಲ್ಲಾಂತ ನನಗೂ ಗೊತ್ತು
ಹೊಸ ಜನಿವಾರ ಹಾಕಿ ಕೊಂಡಿರಿ ತಾನೇ? ಮಡಿಯಲ್ಲಿ ಉಪಾಕರ್ಮ ಮಾಡಿದ್ರೀ ಅಂತ ಮಾತು
ಉಪಾಕರ್ಮದ ಫೋಟೋನೂ, ವೀಡಿಯೋನೂ ಫೇಸ್ ಬುಕ್ಕಿನಲ್ಲಿ ನೋಡಿದೆ; ಚೆನ್ನಾಗಿ ಕಾಣ್ತೀರಿ
ಆಪೋಶನ ತೆಗೆದು ಕೊಳ್ಳುತ್ತಿರುವಾಗಲೂ ಕ್ಯಾಮರಾ ಕಡೆ ಫಿಲಂ ಸ್ಟಾರ್ ತರಹ ಪೋಸ್ ಕೊಟ್ರಿ
ಈ ವರ್ಷದ ಹೊಸತನ ಏನು ಗೊತ್ತಾ? ನಿಮ್ಮ ಯಜ್ಞೋಪವೀತ, ಎಲ್ಲಾ ಪೂಜಾ ಸಾಮಗ್ರಿನ
ಇಂಡಿಯಾಗೆಲ್ಲಾ ಉತ್ಪಾದನೆ ಮಾಡಿ, ರಫ್ತು ಮಾಡಿದ್ದು ಎಲ್ಲಿಂದಾಂತ ಗೊತ್ತಿರಬೇಕಲ್ಲಾ: ಚೈನಾ!
No comments:
Post a Comment