ನಮಗೇಕೆ ಬೇಕು ಚಿನ್ನ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಅಮೆರಿಕಾಗೆ ಹೋಗಲಿ, ಬ್ರಿಟಿಷರಿಗೆ ಕೊಡಲಿ
ಚೈನಾಗೆ ಎಲ್ಲರಿಗಿಂತಾ ಅತಿ ಹೆಚ್ಚು ಚಿನ್ನ
ನಮಗೆ ಸಾಕಷ್ಟು ಇದೆಯಲ್ಲಾ ತೆಂಗಿನ ಚಿಪ್ಪು
ನಮಗಿಂತಾ ಮೀರಿದವರು ಕೊಬ್ಬಿನಲಿ ಯಾರೂ
ಒಲಂಪಿಕ್ಸ್ ಪಂದ್ಯಗಳಲ್ಲಿ ಸರಿಯಾವುದೂ ಇಲ್ಲಪ್ಪ
ನಮಗೋಸ್ಕರವೇ ಬೇಕು ಇನ್ನೊಂದು ರೀತಿಯ ಪಂದ್ಯ
ವೇದಾಂತದ ಹೆಸರಿನಲ್ಲಿ ಕಾಡು ಹರಟೆ; ಬೆಳಿಗ್ಗೆ, ರಾತ್ರಿ
ವೇದಾಂತ ಎಂದುಕೊಂಡು ಬರೀ ಬೊಕಳೆಯ ಟೊಳ್ಳು
ನಮ್ಮ ಪೋಲಿ ರಾಜಕೀಯರನು ಲಂಚದಲಿ ಮೀರಿಸುವರಿಲ್ಲ
ಜಾತಿ ಬೇಧಕ್ಕೆ, ಎಲ್ಲಾ ಜಾತಿಯವರ ದರಿದ್ರಕ್ಕೆ ಕಾರಣ ದಾರ
ಮಂತ್ರಿಯ ಕೆಲಸಕ್ಕೆ ನಮ್ಮ ಜಾತಿಯೇ ಆಗಬೇಕ್ಕು ಸ್ವಾಮಿ
ಬೇರೆಯವರು ಗೆದ್ದಾಗ ಅವರವರ ಜಾತಿಗೆ ಮಂತ್ರಿ ಆಸನ
ಲೂಟಿ ಮಾಡುವುದಕ್ಕೆ ಗಣಿಯ ಕನ್ನ ನಮ್ಮ ಅಮ್ಮನಿಗೆ ಹಾಕಿ
ಕೋಟಿ ಲೆಕ್ಕದಲಿ ನಮಗೆ, ನಮ್ಮ ಜಾತಿಯವರಿಗೆ ಹುಟ್ಟಿನ ಹಕ್ಕು
ನಮ್ಮ ದೇಶದ ಎಲ್ಲಾ ಬಡತನಕ್ಕೆ ಲೋಕವನ್ನೇ ಬಯ್ಯುವ ಧಿಕ್ಕು; ಹೆಮ್ಮೆಗೇ ತ್ಯಾಗ
ಬಾರಿನ ತೀರ್ಥಕ್ಕೆ ಬಾಯಾರಿಕೆ; ಸೋಮಾರಿ ವೀರರು ನಾವು; ಯಾರಿಗೂ ಕಡಿಮೆಯಲ್ಲ
No comments:
Post a Comment