ಕಾಪಿ ಮಯಂ ಜಗತ್
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಬರೀ ಕಾಪಿ: ಕರೀ ಕಾಪಿ, ಬಿಳೀ ಕಾಪಿ, ಕಂದು ಕಾಪಿ, ಹಳದಿ ಬಣ್ಣದ ಕಾಪಿ
ಸರಿಯಾಗಿ ಕುಡಿಸ್ತಾರೆ, ಕದ್ದೂ, ಕದ್ದೂ ಕುಡಿಸ್ತಾರೆ. ಅವರಲ್ಲ ನೀವೇ ಪಾಪಿ
ಬರೆಯುವಾಗ ಕಾಪೀನೆ ಬರೆಯೋದು; ಜರೆಯೋಕ್ಕೆ ಮಾತ್ರ ಚೂರೂ ಮಿತಿಯಿಲ್ಲ
ಮಾರುವಾಗ ಕಾಪಿ ಮಾಡಿದ್ದೆಲ್ಲಾ ಆರ್ಕಿಮಿಡೀಸನ್ನು ಕಾಪಿ ಮಾಡಿದ ಗತ್ತಿನಲ್ಲೇ
ಬಚ್ಚಲ ಮನೆಯಿಂದ ಬೆತ್ತಲೆ ಓಡಿಬಂದು ಆರ್ಕಿಮಿಡೀಸಿನ ನಾಟಕ ಮಾಡುತ್ತಾ
ಕಚ್ಚೆ ಲಂಗೋಟಿ ಕೂಡ ಇಲ್ಲದೆ ಇವರ ಕಾಪಿಯ ಪಾಪಕರ್ಮದ ಬೆತ್ತಲು ಗೊತ್ತಾ?
ಸತ್ತು ಸ್ವರ್ಗಕ್ಕೋ, ನರಕಕ್ಕೋ ಹೋದಾಗ ಚಿತ್ರ ಗುಪ್ತರಿಗೂ ಬೊಕಳೆ ಕಲಾವಂತಿಕೆ
ಎತ್ತಿ ಇವರನ್ನು ಯಮ ದರ್ಮರಾಯ ಕುಡಿಯುವ ಎಣ್ಣೆಗೆ ಹಾಕಿದರೂ ನಿಜವಿಲ್ಲವೇಕೆ?
ಪಾಪಿಗಳು ಎಲ್ಲಾ ಬಣ್ಣದಲ್ಲೂ ಹುಟ್ಟುತ್ತಾರೆ: ಕಪ್ಪು, ಬಿಳುಪು, ಕಂದು, ಹಳದಿ, ಕೆಂಪು
ಕೋಪಿಸಿಕೊಂಡು ಅವರ ಮುಖದ ಮೇಲೆ ಉಗಿದರೆ, ರೆಡಿಯಾಗಿರುತ್ತೆ ಕಿಸೆಯಲ್ಲಿ ಕರ್ಚೀಪು
ಯಾವಾಗಲಾದಾರೂ ನೀವು ಮಾಡಿದ್ದೀರೇನು ಕಾಪಿ? ನಿಜವೇನ್ರೀ ನೀವು ಸುಳ್ಳೇ ಹೇಳಲ್ವಾ?
ಯಾವತ್ತಾದರೂ ಅಪ್ಪಟ ಐಡಿಯಾ ಬಂದಿದೆಯೇನ್ರೀ ನಿಮ್ಮ ತಲೆಗೆ? ನೀವಂದಿದ್ದು ನಂಬಲಾ?
No comments:
Post a Comment