Thursday, February 16, 2012

ನಿನ್ನ ಹೆಸರೇನು?

ನಿನ್ನ ಹೆಸರೇನು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಿನ್ನ ಹೆಸರೇನು ಚೆಲುವೆ?
ಉತ್ತರಿಸ ಬೇಡ; ನಾನೇ ಹೇಳುವೆ!

ಜಕಣನು ನಿನ್ನನು ಅಮೃತ ಶಿಲೆಯಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ಕಡೆದಿರಲೇ ಬೇಕು
ನಿಜ ಹೇಳು; ನಿನ್ನ ಹೆಸರು ಶಿಲ್ಪ ಅಲ್ಲವೇ?

ನೀ ನುಡಿದರೆ, ಸರಸತಿಯ ಬೆರಳು ಮಿಡಿದಂತೆ
ಝೇಂಕಾರ ನನ್ನ ಗುಂಡಿಗೆಗೆ ಹಾಡು
ಸರಿಯೇ ನಿನ್ನ ಸವಿ ಹೆಸರು ವೀಣಾ?

ಚಂದಿರೆಯ ನಗೆಗಿಂತ ಸುಂದರವು ತುಟಿ ಬಿರಿದರೆ
ಇಂದಿರನ ಸಖಿಗಿಂತ ಮೊಗ ಚೆಂದ ಅರಳಿದ ಕೆಂದಾವರೆ
ಕೊಮಲೆಯೇ! ನಿನ್ನ ನಾಮವು ಇರಬೇಕಲ್ಲವೇ ಕಮಲ?

ನಿನ್ನ ನೆನೆದಾಗಲೆಲ್ಲ ಅಲೆ ಅಲೆಯಾಗಿ ಬರುವುದು
ಮನಸಿನಾಳದಿಂದ ಹೊರಡುವುದು ಧಾರೆ
ನೀನೆ ಅಲ್ಲವೇನೆ ಭವ್ಯ ಕಾವ್ಯ ಸುಂದರಿ?

ಕೋರೈಸುವ ಕಣ್ಣು; ಬೆಳದಿಂಗಳು ಚೆಲ್ಲುವಳು
ಕತ್ತಲೆಯಿದ್ದರೇನು ಹೊರಗೂ, ಒಳಗೂ
ಶೋಭಿಸುವಳು ನಿನ್ನ ಕರೆಯಲೇ ಜ್ಯೋತಿ?

ದುಂಬಿ ಸೈನ್ಯವೇ ಸೇರಿ, ಎಂಜಲು ಸುರಿದು
ರೂಪಸಿಯ ಸಕ್ಕರೆಯ ಗೊಂಬೆಯನೇ ಮೀರಿಸಿ
ಮೈಯೆಲ್ಲಾ ಸಿಹಿಯ ತುಂಬಿರುವ ನೀನು ಮಧು ಅಲ್ಲವೇ

ಬಡವ ನಾನು, ತಿರುಕ ವೃತ್ತಿಗೆ ನಾಚುವನಲ್ಲ
ಕೈನೀಡಿ ಬೇಡುವೆ ನೀನಿನ್ನದ್ದರೆ ಲಕುಮಿಯೇ ಇದ್ದಂತೆ
ಸುವರ್ಣ ದೇಹಿ ಆದವಳು ನೀನಿರಬೇಕಲ್ಲವೇ ಬಂಗಾರಿ?

ನಡೆದರೂ, ಕುಣಿದರೂ, ಬಳುಕುವಳು ಲತೆಯಂತೆ
ನರ್ತಿಸಿದರೆ ಆಗಸದಲ್ಲಿ ತೇಲುವ ರಂಭೆ, ಅಪ್ಸರೆಯರಂತೆ
ಶಾಂತಲ ಕೂತು ದಿಟ್ಟಿಸಿ ಅಚ್ಚರಿಸೆ ಇರಬೇಕು ನೀ ಮೇನಕಾ!

ನಾನೇಕೆ ತತ್ತರಿಸಿ, ಉತ್ತರವೇ ಅರಿಯದವನಂತೆ
ಅಸಂಬಧ್ಧ ಪ್ರಲಾಪ ಭೂಪನಂತೆ ವಟವಟ ಗುಟ್ಟುತಿಹೆ
ಊಹಿಸು; ಉತ್ತರಿಸು, ಬಿತ್ತರಿಸು ನೀನ್ಯಾರೆಂದು!

ನನ್ನ ಮನದಲ್ಲಿ ಕುಣಿಯುತಿಹರು ಕಣೆ 
ಸುಮ್ಮ ಸುಮ್ಮನೆಯೇ ಅಷ್ಟೊತ್ತರವ ಉಚ್ಚರಿಸುವ
ಬೊಮ್ಮ, ತಿಮ್ಮನಂತೂ ನಾನಲ್ಲ ತಿಳಿ ಬೇಗ

ನಿನ್ನೆಯೋ, ಮೊನ್ನೆಯೋ, ಹಳೆಯ ದಿನಗಳ
ಒಲವಿನಾ ಕಲರವವೋ; ಕಳೆದದ್ದು ಅಳಿಸಿಯಾಯ್ತು
ನಿನ್ನ ಮೀರಿಸಿದವರಿಲ್ಲ ನಿನ್ನ ನಾಮ "ಅನಾಮಿಕ" ಅಲ್ಲವೇ?

Wednesday, February 8, 2012

ಬಿಟ್ಟವರು ಒಟ್ಟಾಗಬಾರದೇಕೆ?


ಬಿಟ್ಟವರು ಒಟ್ಟಾಗಬಾರದೇಕೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಕಣ್ಣೊಳಗೆ ಕಣ್ಣಿಟ್ಟು ದಿಟ್ಟಿಸಿಯಾಯ್ತು
ಕೆನ್ನೆಗಳು ಕೆನ್ನೆ ಜೇನ ಮೆತ್ತಿಯಾಯ್ತು

ತುಟಿಗಳು ಒಟ್ಟಾಗಿ ಪಟ್ಟು ಹಾಕಾಯ್ತು
ನಾಸಿಕಗಳ ಉಸಿರೆಳೆದು ಬೆರೆತಾಯ್ತು

ಬಾಹುಗಳು ಆಲಿಂಗನದಿ ಬಿಗಿದಾಯ್ತು
ಅಂಗಗಳೂ ಸಂಗದಲಿ ಮೆರೆದಾಯ್ತು

ಬೆವರು ಧಾರೆ ಸುರಿದು ಬೆರೆತಾಯ್ತು
ಇಬ್ಬರ ಧಮನಿ ಸಮನೆ ಹರಿದಾಯ್ತು

ಆದರೇತಕೆ ಬಲು ದೂರದಿ ಹೊರತಾಯ್ತು?
ಒಟ್ಟಾದವರು ಬಿಟ್ಟು ಎಲ್ಲೆಲ್ಲೋ ಹೊರಟಾಯ್ತು

ದೂರದಲಿದ್ದರೂ ಆದರದ ಹಂಬಲ ಬಲವಾಯ್ತು
ಬರಬಾರದೇಕೆ ಬೆಸೆಯಬಾರದೇಕೆ ಮತ್ತೆ ಬೆರೆತು?

Tuesday, February 7, 2012

Ancestral Assets

Ancestral AssetsKRS Murthy
 
Dad’s, Dad’s Dad’s, Dad’s Dad’s Dad’s,
Mom’s, Mom’s Mom’s, Mom’s Mom’s Mom’s,
 
Dad’s Mom’s, Mom’s Dad’s,
Dad’s Mom’s Dad’s, Mom’s Dad’s Mom’s,
Many grandma’s, many Grandpa’s
 
Eyes: wide, squint, short sighted.
Eye’s colors: brown, blue, black.
 
Cheeks: plump, flat, bony
Moles on cheeks: small, large, ugly
 
Ears:  shapes of ears and noses:
Large, small, crooked, flat, long, sharp
 
Hair: Black, brown, blond, dirty blond, ash
Shapes of hair: straight, brushy, curly, kinky
Hair growth: Lot of thick hair, long and short, Bald.
 
Brain: dull, smart, sharp, intelligent, genius
Behavior: calm, abrasive, sweet, big mouth.
 
Body: short, tall, skinny, athletic, muscular, plump
Personality: kind, cruel, scrupulous, sweet, generous
 
Yes! We all got one, or two, three or more of them
All of us many of my siblings: brothers and sisters
 
We are all different, with different assets.
Lucky in some, fair or unlucky in some others
 
We are really all different, but with same assets
Shared, inherited our own way, born with it
Gift from our ancestors; to cherish, a curse sometime
 
Some even look and behave like apes and animals
Luckily not naked, but wear some clothes, most of the times!
Probably, they went too many thousands or millions of years
Back in time to pick up their ancestral assets, really wild!
 
We are all made in their combined image, diverse combinations
Many times I feel that they have never really died, just are reliving in us.
What do you call it: genes, born again and again, and again?

ಅನ್ಯತೆಗೆ ಅಂತರ?

ಅನ್ಯತೆಗೆ ಅಂತರ?
ಕೆ. ಅರ್. ಎಸ್. ಮೂರ್ತಿ
 
ಅನ್ಯ ಲೋಕಗಳ ಇರುಹು ಅರಿವಾಗಿದೆ
ಅನ್ಯ ಲೋಕದ ಅನ್ಯ ಜೀವದ ಇರುಹು?
 
ಅದೇಕೆ ಕಾಣದೆ, ಈ ಹುಲು ಮಾನವಗೆ
ಅರಿಯದೆ ಕಣ್ಣು ಮುಚ್ಚಾಲೆ ಆಟವನಾಡುತಿದೆ?
 
ಇದ್ದರೆ ಇರಬಹುದು, ಇಲ್ಲದೆಯೂ ಬಹುದು
ನನ್ನಿರುವಿನ ಅರಿವು ಅನ್ಯ ಜೀವಕ್ಕೆ ಅರಿವುಂಟೇ?
 
ಕೋಟಿ, ಕೋಟಿ ಕಿರಣ ಜವ ವರುಷ ದೂರದ
ತಾರೆಯನು ಸುತ್ತುವ ಗ್ರಹದಲ್ಲಿ ಗೃಹ ಮಾಡಿದ್ದರೆ?
 
ಅನ್ಯ ಜೀವ ಅನನ್ಯ ಆಗುವುದೇ?
ನಾನು ಅನ್ಯ ಜೀವಕ್ಕೆ ಅನ್ಯ!
 
ಜೀವ-ಜೀವಕ್ಕೆ ಅನ್ಯತೆಯ ನ್ಯೂನತೆ
ಹೊಸದೇನಲ್ಲ ನಮ್ಮ ಗ್ರಹದ ಗೃಹದೊಳಗೆ!
 
ಅನ್ಯತೆಗೆ ದೂರ ಹತ್ತಿರಗಳಿಲ್ಲ!
ಅವಳಿ-ಜವಳಿಗೇ ಜಗಳ ಅಂತರ ಆದರೂ
ಕಿಂಚಿತ್ತೂ ಅಚ್ಚರಿಯಿಲ್ಲ!

ಅದೂ ನಾನೇ; ಇದೂ ನಾನೇ

ಅದೂ ನಾನೇ; ಇದೂ ನಾನೇ
ಕೆ. ಆರ್. ಎಸ್. ಮೂರ್ತಿ
 
ಮುಖ ಎರಡು:
ಇತ್ತ, ಅತ್ತ
 
ಕಣ್ಣು ಎರಡು:
ಪೂರ್ವ, ಪಶ್ಚಿಮ
 
ಭಾವವೂ ಎರಡೇ:
ಸುಖ, ದುಃಖ
 
ಗುಣ ವ್ಯತಿರಿಕ್ತ:
ಇನ್ ಮತ್ತೆ ಯಾಂಗ್
 
ಬಣ್ಣ ಬೇರೆ-ಬೇರೆ:
ಕಪ್ಪು, ಬಿಳುಪು
 
ನಾಲಗೆಯದು ಎರಡು ರಸ:
ಖಾರ, ಸಿಹಿ
 
ಕಿವಿಗೆ ಬಡಿಯುವುದು:
ಕೆಟ್ಟದು, ಒಳ್ಳೆಯದು
 
ಮೂಗಿಗೆ ಆಘ್ರಾಣ:
ಗಬ್ಬು ಗಂಧ, ಸುಗಂಧ
 
ಬಾಯಿ ಒಂದೇ. ಆದರೆ!:
ಬಚ್ಚಲು ಬೈಗುಳ, ಸಕ್ಕರೆಯ ನುಡಿ
 
ಕೆನ್ನೆಗಳು ಎರಡು:
ಒಂದು ಮುದ್ದು, ಇನ್ನೊಂದು ಪೆದ್ದು
 
ಕೈಗಳೂ ಎರಡು:
ಒಂದರಲ್ಲಿ ನಮನ, ಇನ್ನೊಂದರಲ್ಲಿ ಚಾಕು
 
ಎರಡು ಕಾಲುಗಳು:
ಒಂದರಲ್ಲಿ ನೃತ್ಯ, ಇನ್ನೊಂದಿರುವುದು ಒದೆಯಲು
 
ಪಾದಗಳೂ ಎರಡು:
ಒಂದು ಗಂಗೆಯಲ್ಲಿ, ಮತ್ತೊಂದು ವಿಷ್ಣುವಿನ ಎದೆಯನ್ನೇ ಮೆಟ್ಟಲು
 
ಬೆಳಗ್ಗೆಯೆಲ್ಲಾ ಡಾಕ್ಟರ್ ಜೆಕಿಲ್,
ರಾತ್ರಿಯ ಹೊತ್ತಿಗೆ ಮಿಸ್ಟರ್ ಹೈಡ್
 
ಮೊಲೆಗಳು:
ಅನುಸೂಯ ಒಂದಾದರೆ, ಪೂತನಿಯ ಬೆಟ್ಟದಂಥ ಮೊಲೆ
 
ಮಿದುಳಿನಲ್ಲಿನ ಸುಂದರಿಯರು:
ಲಕ್ಷ್ಮಿ, ಸರಸ್ವತಿ
 
ದೇವನೂ ನಾನೇ, ದಾನವನೂ ನಾನೇ
ರಾಮ-ರಾವಣ, ಕೌರವ-ಪಾಂಡವ,
ಬ್ರಹ್ಮ-ಹರ, ವಾಮನ-ಬಲಿ
 
ವಿವಾಹ-ವಿಚ್ಛೇದನ:
ವಿವಾಹವೇ ಆಗದೇ ಹೋದರೆ,
ವಿಚ್ಛೇದನೆ ಆಗಬಲ್ಲುದೆ?
 
ಆಸೆ-ನಿರಾಸೆ:
ಆಸೆಯಿಲ್ಲದೇ ಹೋದರೆ,
ನಿರಾಸೆ ಯಾವುದರ ಮೇಲೆ?
 
ಬುಧ್ಧನಿಗೆ, ಸ್ಥಿತ ಪ್ರಜ್ಞನಿಗೆ
ಅದೂ ಇಲ್ಲ, ಇದಂತೂ ಇಲ್ಲವೇ ಇಲ್ಲ.
 
ಹುಲು ಮಾನವ ನನಗೆ:
ಸಾವಿರಾರು ಮುಖ

ಇಲ್ಲಿ-ಅಲ್ಲಿ ಒಂದೊಂದು ಕಾಲು

ಇಲ್ಲಿ-ಅಲ್ಲಿ ಒಂದೊಂದು ಕಾಲು
ಕೆ. ಆರ್. ಎಸ್. ಮೂರ್ತಿ
 
ಪ್ರಜಾ ಪೌರತ್ವದ ಹೆಮ್ಮೆ, ಒಂದಲ್ಲ, ಎರ‍ಡು ದೇಶದ್ದು
ದೇಶ ಬಿಟ್ಟು, ಹಾರಿಬಂದು ಪರದೇಶ ತಲುಪಿದ್ದಾಯ್ತು
ನೆಲೆಸಿದ್ದೂ ಆಯ್ತು, ಮನೆ, ಮಠ ಕಟ್ಟೂ ಆಗಿಹೋಯ್ತು
 
ಮತ್ತೇನೋ ಕೊರತೆ:
ಆಲ್ಲಿ ಇಲ್ಲ, ಇಲ್ಲಿಯೇ ಎಲ್ಲ, ಇದೆಲ್ಲ ಸಲ್ಲದು.
 
ಇದೂ ಇರಲಿ, ಅದೂ ಇರಲಿ, ಒಂದೊಂದು ಕಾಲು ಅಲಿ, ಇಲ್ಲಿ.
ಇಲ್ಲಿದ್ದಾಗ ಅಲ್ಲಿ ಮನ, ಅಲ್ಲಿದ್ದಾಗ ಮನವೆಲ್ಲ ಇಲ್ಲಿ
ಕಟ್ಟಿಯೂ ಆಯ್ತು ಇಲ್ಲೊಂದು ಬಂಗಲೆ, ಅಲ್ಲೂ ಇರೆಲೆಂದು ಮನೆ
ಇಲ್ಲಿಂದ ಅಲ್ಲಿಗೆ ಹೋಗುವಾಗ, ಬೇಕು ತೆರೆದ ಬಾಗಿಲು
ಇಲ್ಲಿಗೆ ಮರಳಿ ಬಂದಾಗ ಕೂಡ, ತೆರೆದಿರಲಿ ಬಾಗಿಲು.
 
ಆಗ ಬಂದಾಗ ಅಪ್ಪ-ಅಮ್ಮ ಅಲ್ಲೇ; ಬಾಳು ಮಾತ್ರ ಇಲ್ಲೇ.
ಮಕ್ಕಳು ಇಲ್ಲೇ; ಮುದಿತನ ಬಂದಾಗ ಗಂಡ-ಹೆಂಡತಿ ಅಲ್ಲೇ.
 
ಇಲ್ಲೂ ಬೇಕು, ಅಲ್ಲೂ ಬೇಕು, ಬೆಲ್ಲದ ಬಾಳು ಅಲ್ಲಿ-ಇಲ್ಲಿರಬೇಕು
ಅಲ್ಲಿದ್ದಾಗ ಇಲ್ಲಿನ ಮಕ್ಕಳ ಚಿಂತೆ; ಮಕ್ಕಳು ನಿಮ್ಮ ಮರೆತಿರಬೇಕು!
 
ಕಾಲೆತ್ತುವ ಕಾಲಕ್ಕೆ, ಅಲ್ಲಿಗೆ ನಿಮ್ಮ ಎಳೆದೊಯ್ಯುವ ಕಾಲನೂ ಬಂದಾನು
ಇಂದಲ್ಲ, ನಾಳೆ; ತಳ್ಳಿದರೆ, ಮುಂದಿನ ವಾರ, ತಿಂಗಳು ಎಳೆವರು ನಿಮ್ಮನು
 
ವರುಷ-ವರುಷಕೂ ತಿಂಗಳುಗಳು ವಾರಗಳು, ವಾರಗಳು ದಿನಗಳು, ನಿಮಿಷಗಳು
ರೆಡಿಯಾಯಿತೇ ನಿಮ್ಮ ಸೂಟ್ಕೇಸು? ನಿಮಗೆ ಬೇಕಿಲ್ಲ ಟಿಕೆಟ್ಟು, ಎಲ್ಲ ಪುಕ್ಕಟ್ಟು!
 
ನಾಕವೋ, ನರಕವೋ ಸೇರುವುದು ಖಾತರಿ; ಎಲ್ಲಿಗೆ ಹೋಗುವಿರಿ ಯಾರಿಗೆ ಗೊತ್ತು!
ಹೊರಡಿ ಒಂದು ಕಾಲಿಲ್ಲಿ, ಇನ್ನೊಂದು ಕಾಲಲ್ಲಿ ಊರುವ ಹಂಬಲವನೆಲ್ಲ ಇಲ್ಲೇ ಬಿಟ್ಟು
 
ಇದು ಮಾತ್ರ ಒನ್ ವೇ ಟಿಕೆಟ್ಟು, ನಿಮಗೆಂದೇ ಬಿಟ್ಟಿ ಸ್ಪೆಷಲ್ ಚಾರ್ಟರ್ ಪ್ರಯಾಣ
ಮಾಡಿ ಸವಾರಿ, ಮುಖ ಹಿಂದಗೆ ಮಾಡಿ, ಕಣ್ಮುಚ್ಚಿ ಭಯಂಕರ ಎಮ್ಮೆ ಕೋಣನ

ಅಕ್ಷರ ಕೈಚಳಕ


ಅಕ್ಷರ ಕೈಚಳಕ
ಕೆ. ಆರ್. ಎಸ್. ಮೂರ್ತಿ

ಅಂಗೈಯಲ್ಲಿರುವುದು ಐವತ್ತೆರಡು
ಅಂದಅಂದ ಹಾಗೇ,
ನಿಮ್ಮ ಕಣ್ಣ ಮುಂದೆಯೇ,
ಮಾಡುವೆನು ಕೈಚಳಕ

ಮಿಂಚಿನ ವೇಗದ ಕೈಚಳಕ
ತನುಮನಕೆಲ್ಲ ಮಾಡಿಸುವೆ ಜಳಕ
ನೀರುಸೋಪಿಲ್ಲದ ಸೊಗಸಿನ ಜಳಕ
ತಲೆಯೊಳಗೆಮೈಯೊಳಗೆ,
ಮೇಲೆಕೆಳಗೆತಳದ ಒಳಗೆಲ್ಲ
ಆವಾಹನೆನಿಮಗೆಲ್ಲ ಪರಿಪರಿ ಪುಳಕ

ನೆತ್ತಿಗೆ ಏರಿಸುವೆಮೆತ್ತಗೆ ಮೈನರೆಸುವೆ,
ಎತ್ತರಎತ್ತರಕೆ ಹಾರಿಸುವೆ,
ಮತ್ತೆಮತ್ತೆ ಮೈಮರೆಸುವೆ,
ಮನದ ಮೈಲಿಗೆ ಕಳೆಸುವೆ.

ಚಳಕ ನನ್ನದು ಬೆಳಕಿನ ವೇಗ
ಬೇಕಾಗಿದ್ದಾರೆ ಲೇಖನಿಗಾರರು ಇಂದೇ
ಬೆರಳಚ್ಚುಗಾರ ಪ್ರವೀಣೆಯರು.

ಆನೆ ತಲೆಯಿದ್ದವರು ಅರ್ಜಿ ಹಾಕುವ ಅವಶ್ಯಕತೆ ಇಲ್ಲ,
ಗುಂಡೂರಾಯನು ಬಲು ನಿಧಾನಿ.
ನನಗೆ ಬೇಕು ಸರಸತಿಪರಸತಿ
ಬಾಬೇಗ ವಾಗ್ದೇವಿ,
ಬಿಡುಬೇಗ ಮುದುಕ ಬೊಮ್ಮನ
ಉಟ್ಟ ಬಟ್ಟೆಯಲೇ ಬಂದರೂ ಸಾಕು
ಹುಟ್ಟ ಬಟ್ಟೆಯಲೇ ನಿಂದರೆ ಬೇಕು
ಬಾಬೇಗ ಮೀಟು ನನ್ನ ವೀಣೆಯ
ಕೊಡುವೆನು ಕೈಚಳಕದ ಆಣೆಯ
ಕೈಕುಣಿತದ ಕೈಚಳಕವು
ದಣಿವಿಲ್ಲದೆ ತಣಿಸುವುದು
ನಿನ್ನ ಮೇಲೆಒಳಗೆಕೆಳಗೆ ಎಲ್ಲೆಲ್ಲೂ.
ಕೇಸರಿಯ ಕೆನ್ನೆ ನಿನ್ನದು ಕೆಂಪೇರಿ
ಸೂಕ್ಷ್ಮಾಂಗಿ ಮೃದಂಗಗಳು ಕಂಪಿಸಿ
ನಾಟ್ಯ ಕಟಿಯು ಚಿಮ್ಮುತಲಿರಲು
ಹೊಮ್ಮುವುದು ಅತಿ ಆನಂದದ ಕೇಕೆಯು
ಮಧುರ ವಾಣಿಯಲ್ಲವೇ ನೀನು
ನಾನಾಗ ನಿನ್ನ ಅಕ್ಷರ ಬ್ರಹ್ಮ.

ಅಕ್ಷರದ ಭಕ್ಷ್ಯದ ಮೃಷ್ಟಾನ್ನ,
ರಸಿಕರಿಗೆ ನವರಸದ ರಸದೌತಣ,
ಸಹೃದಯಿಗಳಿಗೆ ಸಿಹಿ ಕ್ಷೀರದ ಪಾಯಸ,
ಉಂಡಷ್ಟೂ ಉಣಬೇಕು ಇನ್ನೊಮ್ಮೆಮತ್ತೊಮ್ಮೆ,
ಓದುಗರಿಗೆ ಔತಣವ ಬಡಿಸುವೆನು
ನನ್ನ ತುಟಿಯಿಂದ ನಿಮ್ಮ ತುಟಿಗೆ
ಮುದ್ದು ಮಾಡಿಮುತ್ತು ಕೊಟ್ಟು
ತಿನ್ನಿಸುವೆ ಬನ್ನಿ ತೊಡೆಯ ಮೇಲೆ
ಆಗಸದಲಿ ಅಕ್ಷರದ ತಾರಾ ನಕ್ಷೆ,
ಪಕ್ಷ ಪಾತವೇ ಇಲ್ಲದೆ ವೀಕ್ಷಿಸಿರಿ
ಅಂತರಂಗದ ಅಕ್ಷಿಯಲಿ ಸಾಕ್ಷಿ