ಬಿಟ್ಟವರು ಒಟ್ಟಾಗಬಾರದೇಕೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಕೆನ್ನೆಗಳು ಕೆನ್ನೆ ಜೇನ ಮೆತ್ತಿಯಾಯ್ತು
ತುಟಿಗಳು ಒಟ್ಟಾಗಿ ಪಟ್ಟು ಹಾಕಾಯ್ತು
ನಾಸಿಕಗಳ ಉಸಿರೆಳೆದು ಬೆರೆತಾಯ್ತು
ಬಾಹುಗಳು ಆಲಿಂಗನದಿ ಬಿಗಿದಾಯ್ತು
ಅಂಗಗಳೂ ಸಂಗದಲಿ ಮೆರೆದಾಯ್ತು
ಬೆವರು ಧಾರೆ ಸುರಿದು ಬೆರೆತಾಯ್ತು
ಇಬ್ಬರ ಧಮನಿ ಸಮನೆ ಹರಿದಾಯ್ತು
ಆದರೇತಕೆ ಬಲು ದೂರದಿ ಹೊರತಾಯ್ತು?
ಒಟ್ಟಾದವರು ಬಿಟ್ಟು ಎಲ್ಲೆಲ್ಲೋ ಹೊರಟಾಯ್ತು
ದೂರದಲಿದ್ದರೂ ಆದರದ ಹಂಬಲ ಬಲವಾಯ್ತು
ಬರಬಾರದೇಕೆ ಬೆಸೆಯಬಾರದೇಕೆ ಮತ್ತೆ ಬೆರೆತು?
No comments:
Post a Comment