Friday, February 3, 2012

ಹುಟ್ಟಿನಿಂದ ಸಾಯುವ ತನಕ


ಹುಟ್ಟಿನಿಂದ ಸಾಯುವ ತನಕ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬನ್ನಿ, ಬನ್ನಿ ಬ್ರಾಹ್ಮಣರೆಲ್ಲಾ ನಿಮಗೆ ಪ್ರತ್ಯೇಕವಾದ ಸಾಲು
ತನ್ನಿ ನಿಮ್ಮ ಪಂಚಪಾತ್ರೆ, ಉಧ್ಧರಣೆ ಕಾಶ್ಮೀರದ ಶಾಲು

ಪಂಕ್ತಿ ಬೇರೆ, ಆಗ್ರದ ಬಾಳೆಯ ಎಲೆ; ದೊನ್ನೆ ದೊಡ್ಡದಿದೆ 
ಭುಕ್ತಿ ಕೂಡ ನಿಮಗೆಂದೇ ತುಪ್ಪ ಹಾಕಿ ಒಪ್ಪವಾಗಿ ಮಾಡಿದೆ 

ಒಳಗೆ ಬರುವಾಗ ನಿಮ್ಮ ಜನಿವಾರ ಭದ್ರವಿರಲಿ; ಮಡಿ, ಮಡಿ
ಮೆಲ್ಲಗೆ, ಭಕ್ತಿಯಿರುವಂತೆ ನಾಟಕ ಮಾಡಿಕೊಂಡು ಹೆಜ್ಜೆ ಇಡಿ

ಗೊತ್ತಪ್ಪಾ ನಮಗೆಲ್ಲಾ!: ನೀವು ಹಣ್ಣಿನ ತೀರ್ಥ ಕುಡಿತೀರೀಂತ
ಬಿತ್ತಪ್ಪ ನಮ್ಮ ಕಣ್ಣಿಗೆ!: ನೀವು ತಲೆ ಮರೆಸಿಕೊಂಡು ತಿಂತೀರಂತ

ಕಾಲ ಬಹಳ ಬದಲಾಗಿದೆ ಸ್ವಾಮಿ; Just in Time ಜನಿವಾರ
ಸಾಲ ಮಾಡಿಕೊಂಡಾದ್ರೂ ರೆಡಿಯಾಗಿ ದ್ರಾಕ್ಷಿ ಹಣ್ಣು ಅಂತೀರಾ?

ಪರವಾಗಿಲ್ಲಪ್ಪಾ! ನಾವೇನು ನಿಮ್ಮನ್ನ ಈಗಲೂ ಬ್ರಾಹ್ಮಣ ಅಂತೀವಿ
ಖಾರವಾಗಿ ನಾವು ನಿಮ್ಮನ್ನ ಬೀದಿಗೆಳೆಯೋದೇ ಇಲ್ಲದೆ ಕೈಮುಗೀತೀವಿ

ಮರೆತೇ ಹೋಯಿತು: ಯಾರೋ ಹೇಳಿದರು ಕೋಳಿ ಬಲು ರುಚಿಯೇ?
ನಿರತ ಬ್ರಾಹ್ಮಣರಾಗಿ ಹುಟ್ಟಿರುವ ನೀವೀಗಲೂ ಬ್ರಾಹ್ಮಣರೇನೇವೇಯೇ!

No comments:

Post a Comment