ಮುಚ್ಚು ಮರೆಯೇಕೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಮೆಚ್ಚಿ ನಿನ್ನ ಬೆತ್ತಲೆಯಲಿ ನೋಡಲೇ ಬೇಕೀಗ
ಮುಚ್ಚಿಕೊಂಡು ಕಚ್ಚೆಯೊಳು ಮರೆಮಾಚುವುದೇಕೆ?
ಸಾಚಾ ಕಿಂಚಿತ್ತಾದರೂ ಬಚ್ಚಿಟ್ಟು ನೀನಿರಬೇಕೆ!
ಬೆಚ್ಚಿ ಬೀಳುವುದಿಲ್ಲ ಖಂಡಿತ ನಾನಂತೂ ಕಂಡಾಗ
ನೆಚ್ಚಿಕೊ ನನ್ನ ಈ ಆಣೆಯ ಪ್ರಮಾಣದ ಮಾತಿನಲೀಗ
ಗಾಂಚಾಲಿ ಮಾತ್ರ ಮಾಡ ಬೇಡ ಕಾದಿಹರು ಎಲ್ಲಾ
ಕಿಂಚಿತ್ತಾದರೂ ಬಿಚ್ಚಿ ತೋರಿಸು ಪೂರ್ತಿ ನಿನ್ನದೆಲ್ಲಾ
ಅಚ್ಯುತ, ಅನಂತ, ಆನಂದಮಯ ಇತ್ಯಾದಿ ಕೇಳಿರುವೆ
ಸಚ್ಚಿದಾನಂದ ನೀನು ಎಂತೆಲ್ಲಾ ಕಂತೆ ಪುರಾಣವ ಓದಿರುವೆ
ಮುಚ್ಚಿರುವ ಕತ್ತಲೆಯ ಧಿಟ್ಟಾಗಿ ತೊಲಗಿಸಿ ಬೇಗ ಮಹರಾಯ
ಮೆಚ್ಚಿಸು, ಅಚ್ಚರಿಯ ಹೆಚ್ಚಿಸು, ಪ್ರದರ್ಶಿಸು ಇದ್ದರೆ ನಿಜ ಕಾಯ
No comments:
Post a Comment