Tuesday, February 7, 2012

ಹುಡುಗುತನ

ಹುಡುಗುತನ
ಕೆ. ಆರ್. ಎಸ್ ಮೂರ್ತಿ 


ಅಕ್ಕ ತಂಗಿಯರು ಕೆಂಪು ನೀಲಿ ಹಚ್ಚ ಹಸಿರು ಝರಿ ಲಂಗ
ಜಂಪರನು ಹೆಮ್ಮೆಯಲಿ ತೊಟ್ಟು, ಎಳ್ಳು, ಬೆಲ್ಲ, ಕಬ್ಬು

ಬೆಳ್ಳಿ ತಟ್ಟೆಯಲಿ ಮುಚ್ಚಿ  ಆಚೆ, ಈಚೆ ಮನೆಗಳಿಗೆಲ್ಲ
ಅಜ್ಜಿ ಎರೆದು ಹಾಕಿದ್ದ ನಮ್ಮೆಲ್ಲರ ಅಚ್ಚು ಮೆಚ್ಚಿನ

ವೃಂದಾವನದ ಸಕ್ಕರೆಯ ಅಚ್ಚು, ಬಣ್ಣ ಬಣ್ಣದ ಕುಸುರಿಕಾಳು
ಹಂಚಿ ಬಿಟ್ಟಾಗ ನನಗಾದ ಕೋಪ ನೆನೆಸಿಕೊಂಡರೆ ಈಗ ನನ್ನ ನಗು

ನನ್ನನೇ ಅಣಕಿಸಿ ನಕ್ಕಂತೆ, ಮನ ಮುದುರಿ ಮೂಲೆಯಲಿ ಕುಳಿತಂತೆ
ನಿನ್ನೆಯ ಹುಡುಗುತನಕೆ ಇಂದು ಅಳಲೋ, ನಗಲೋ ನೀವೇ ಹೇಳಿ

No comments:

Post a Comment