Friday, February 3, 2012

ಏಕಲವ್ಯನಾಗುವ ಸಾಧಕನಾಗು


ಏಕಲವ್ಯನಾಗುವ ಸಾಧಕನಾಗು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬಿಲ್ಲು ಬಾಣವ ಧರಿಸುವ ಹಂಬಲ ಇದೆಯೇ? ಬತ್ತಳಿಕೆ ಆಗಿರಬೇಕು ಅಕ್ಷಯ ಪಾತ್ರೆ
ಎಲ್ಲಿ ಇದೆ? ಎದೆಯಲ್ಲೇ ಇದೆ. ಹೇಗಿದೆ? ಹೇಗಾದರೂ ಇರಿಸುವುದು ನಿನ್ನದೇ ಪಾತ್ರ

ಹದದಿ ಹೆದೆಯೇರಿಸಿ ಬಿಗಿ ಮಾಡಿ ಝೇಂಕರಿಸು ಧನಸ್ಸನು; ಧ್ಯಾನವೇ ಶರವಾಗಿಸಿ
ಮುದದಿ ಮುತ್ತಿಟ್ಟು ಬಾಣವನು, ಗುರಿ ಮಾಡಿ, ತದೇಕ ಚಿತ್ತದಿ ಗುರಿಯನೇ ಕೇಂದ್ರಿಸಿ

ಧ್ಯೇಯವೇನೇ ಇರಲಿ ಧ್ಯಾನ ಮುಖ್ಯ; ಜೀವನವೇ ಒಂದು ಧ್ಯೇಯ; ಶರ ನಿನ್ನದು ಮಾತ್ರ
ಕಾಯಕವು ಯಾವುದೇ ಇರಲಿ ಅವೆಲ್ಲಕೂ ನಿಷ್ಠೆ ಅತ್ಯಗತ್ಯ; ಜೀವನದಿ ಎಲ್ಲ ಗಳಿಗೆ ಪವಿತ್ರ

ಸಾಧಕರಲಿ ಏಕಲವ್ಯನೇ ನಮಗೆಲ್ಲ ಮಾದರಿ; ಹುಲುಮಾನವರು ಹಲವರು; ನಮ್ಮಂಥವರು
ಭೋದಕರು ನೆಪ ಮಾತ್ರ ಏಕಲವ್ಯನ ಶ್ರೇಷ್ಠ ಜಾತಿಯವರಿಗೆ; ಮಿಕ್ಕ ನಾವೆಲ್ಲಾ ಅರ್ಜುನರು

ಬೇಡ ಮಹಾ ಕುಲದಿ ಹುಟ್ಟುವುದು ಪೂರ್ವ ಜನ್ಮದ ಪುಣ್ಯ ಫಲ; ವಾಲ್ಮೀಕಿ ಮಹಾ ಕವಿಯೂ
ಬೇಡಿಕೋ ಧ್ಯಾನ ಮಗ್ನನಾಗಿ ಹುತ್ತಕ್ಕೆ ಕಾರಣನಾಗುವ ಲಭ್ಯ ಋಷಿಯಾಗುವ ಸಾಧನೆಯೂ

No comments:

Post a Comment