ನನ್ನ ಕವನಕ್ಕೆ ಹಿನ್ನೆಲೆ: ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ
ವಿಪ್ರ ಸ್ನೇಹಿತರಿಗೆ: (ನಾನು "ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ" ಎಂಬ ಕವನವನ್ನು ಬರೆದದ್ದಕ್ಕೆ ಸಿಲಿಕಾನ್ ಕಣಿವೆಯ ವಿಪ್ರ ಮಹಾ ಸಭೆಯವರು ವಿವರಣೆಯನ್ನು, ಅಂತರಾರ್ಥವನ್ನು ಕೇಳಿದರು. ಅದಕ್ಕೆ ನನ್ನ ಉತ್ತರವಿದು)
ಕವನವು ಇಲ್ಲಿದೆ:
http://kannada.oneindia.in/nri/poem/
ನನ್ನ ಕವನಕ್ಕೆ ಹಿನ್ನೆಲೆ: ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ
ಎಲ್ಲರಿಗೂ ಗೊತ್ತಿರುವಂತೆ, ಅನೇಕ ಬ್ರಾಹ್ಮಣರನ್ನು ಬಲವಂತವಾಗಿ ಮುಸಲ್ಮಾನರು ತಾವು ಆಳುವಾಗ ತಮ್ಮ ಮತಕ್ಕೆ ಪರಿವರ್ತಿಸಿದರು. ಮತವು ಬದಲಾದರೂ ಮತಿಯಲ್ಲಿನ ಮಠವು ಪೂರ್ತಿಯಾಗಿ ಬದಲಾಗದೆ ಇರಬಹುದು. ರಕ್ತಗತವಾದ ಜಠರದ ಗುಟ್ಟು ಹಾಗೆಯೇ ಉಳಿದು ಕೊಂಡಿದ್ದು, ಮತಾಂತರಿಸಿದರೂ ಮಜ್ಜಿಗೆ ಹುಳಿ, ಅಂಬೊಡೆ. ಪಾಯಸ ಇತ್ಯಾದಿ ಸಂಪ್ರದಾಯಗಳೂ ಭದ್ರವಾಗಿ ಉಳಿದುಕೊಂಡಿರಬಹುದು. ಸಸ್ಯಾಹಾರ ಆಹಾರ ವ್ರತವೂ ಭದ್ರವಾಗಿಯೇ ನೆಲಸಿರಬಹುದು.
ಗೃಹಿಣಿಯು ಬುರುಕವನ್ನು ಹಾಕಿಕೊಂಡಿದ್ದರೂ, ಅವಳ ಬ್ರಾಹ್ಮಣಿಕೆಯ ಸೌಂದರ್ಯವು ಭದ್ರ; ಬಾಲಕನಿಗೂ ಶ್ಯಾವಿಗೆ ಪಾಯಸದ ರುಚಿ ಅಚ್ಚುಮೆಚ್ಚು. ಗೃಹಸ್ಥನಿಗಂತೂ ಬ್ರಾಹ್ಮಣರ ಬಗ್ಗೆ ಅಕ್ಕರೆಯಿಂದ ನಾವು ನಮ್ಮನ್ನೇ ಛೇಡಿಸಿಕೊಳ್ಳುವ ಹಾಗೆ, ಹಸಿವೆಯನ್ನು ತಡೆದುಕೊಳ್ಳಲು ಆಗದಿರಬಹುದು. ಏಕೆಂದರೆ, ಅವನು ರಕ್ತಗತವಾಗಿ ಬ್ರಾಹ್ಮಣನೆ! ಆದ್ದರಿಂದ ಅವನು, ಹಸಿದ ಬ್ರಾಹ್ಮಣನಂತೆ ಭಾರದ ಹೆಜ್ಜೆಯನ್ನು ಭರ ಭರದಿ ಹಾಕಿಕೊಂಡು ಬಂದು ಮಜ್ಜಿಗೆ ಹುಳಿ, ಅಂಬೊಡೆಗಳಿಗೆ ಹಾತೊರೆಯುತ್ತಿದ್ದಾನೆ.
ನೀವೆಲ್ಲರೂ ನಿಮ್ಮ ಬ್ರಾಹ್ಮಣಿಕೆಯನ್ನು ಊಟದಲ್ಲಾದರೂ ಉಳಿಸಿಕೊಂಡಿರಬಹುದು. ನಿಮ್ಮ ನಾಲಿಗೆಗಳು ಮಾಂಸಾಹಾರಕ್ಕೆ ಬಲಿ ಬಿದ್ದಿಲ್ಲವೆಂದೂ, ನಿಮ್ಮ ತುಟಿಗಳಿಗೆ ಬೀಡಿ, ಸಿಗರೇಟು ಸೊಂಕಿಲ್ಲವೆಂದು, ನಿಮ್ಮ ಬೆಳ್ಳಿ ಬಟ್ಟಲಿಗೆ ಮಾದಕ ಪಾನೀಯಗಳು ಸುರಿದಿಲ್ಲವೆಂದೂ, ನೀವೆಲ್ಲರೂ ಅತೀವ್ರ ಭಕ್ತಿ ಪೂರ್ವಕವಾಗಿ ಗಣ ಹೋಮವನ್ನು ನಡೆಸಿದಾಗಿನ ಛಾಯಾಚಿತ್ರ ಹಾಗೂ ಚಲನ ಚಿತ್ರಗಳನ್ನು ನೋಡಿ, ಪ್ರಧಾನವಾಗಿ ವಿಪ್ರತೆಯ ಅಲಂಕಾರವಾದ ಯಜ್ಞೋಪವೀತಗಳನ್ನೂ ನೋಡಿ, ನಿಮ್ಮ ಹಣೆಯನ್ನು ಅಲಂಕರಿಸಿದ ವಿವಿಧ ಪವಿತ್ರ ಪೂರ್ಣ ನಾಮ, ಮುದ್ರೆ, ವಿಭೂತಿ, ಚಂದನ ಇತ್ಯಾದಿಗಳನ್ನೂ ನೋಡಿ ನಂಬಿದ್ದೇನೆ.
ಅಕಸ್ಮಾತ್ ಆಗಿಯೂ ನನ್ನ ಅನಿಸಿಕೆಗಳು, ನಿಮ್ಮೆಲ್ಲರ ಬಗ್ಗೆ ನನ್ನ ಅತೀವ್ರ ಗೌರವವು ಛಿದ್ರವಾಗದೆಯೇ ಇರಲೆಂದು ಆಶಿಸುತ್ತೇನೆ. ನನ್ನ ಅಭಿಪ್ರಾಯಗಳು ತಪ್ಪಿದ್ದಲ್ಲಿ ವಿಪ್ರೋತ್ತಮರಾದ ತಾವೆಲ್ಲಾ ಆಶೀರ್ವದಿಸಿ ಕ್ಷಮಿಸಿ
ಗೌರವಿತ ಪುರೋಹಿತರಾದ ಮಕೋಡು ವೆಂಕಟೇಶ ಭಟ್ಟರು ನಿಮ್ಮ ವಿಪ್ರ ಸಂಪ್ರದಾಯವನ್ನು, ನಿಮ್ಮ ಮಕ್ಕಳ ಮಡಿ ವಿಪ್ರತೆಯನ್ನೂ ಉಳಿಸಿಕೊಡಲಿ ಎಂಬುದೇ ನನ್ನ ಆಶಯ.
ಮೂರ್ತಿ