Tuesday, May 29, 2012

ನಾನೊಬ್ಬನೇ ಮಹಾ ವ್ಯಾಸ


ನಾನೊಬ್ಬನೇ ಮಹಾ ವ್ಯಾಸ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಭಿಮನ್ಯುವೂ ನಾನೇ, ಕಥೆಯ ಹೇಳಿದ ಕಿಲಾಡಿ ಕೃಷ್ಣನೂ 
ವ್ಯಭಿಚಾರಿ ದ್ರೌಪದಿಯೂ, ಸುಂದರಿಯ ಕಾಮಿಸಿದವನೂ 

ಜರೆಯುತ ಕೃಷ್ಣನನು ಓಲಗದಿ ಮೆರೆದ ಸುಯೋಧನನೂ
ಜರಾಸಂಧನನು ಸೀಳಿ ದಿಕ್ಕುಗಳಿಗೆಸೆದ ಬಲ ಭೀಮನೂ

ಉತ್ತರೆಗೆ ಹೆಣ್ಣು ವೇಷದಿ ಕುಣಿತವ ಕಲಿಸಿದ ಅರ್ಜುನನೂ
ಬತ್ತಳಿಕೆ, ಬಿಲ್ಲು ಬಾಣಗಳ ಬನ್ನೀ ಮರದ ಮೇಲೆ ಇಟ್ಟವನೂ

ಸುಂದರಿಯ ಸೀರೆಯ ಎಳೆಯುತ ಅಟ್ಟಹಾಸದಿ ನಕ್ಕವನೂ
ಮಂದ ಗಮನೆಯ ಮಾನವನು ಮಾಯದಲಿ ಉಳಿಸಿದವನೂ

ಮಹಾಭಾರತವೆಲ್ಲಾ ಹುಟ್ಟಿದುದು, ವಿಚಿತ್ರ ಪಾತ್ರಗಳ ಚಿತ್ರಣೆಯೂ
ಮೋಹ, ಮೋಸ, ಸಾಹಸ, ಸಕಲರ ಸಾವಿನಲಿ ಕೊನೆ ಗನಿಸಿದವನೂ

ನವಸರಂಗಳ ಕಾವ್ಯದ ಔತಣವ ನಿಮ್ಮಗೆಲ್ಲಾ ಬಡಿಸಿದವನೂ
ಸಾವಿರಾರು ಪಾತ್ರಗಳ ಕಲ್ಪಿಸಿದ ಓರ್ವನೇ ಮಹಾ ವ್ಯಾಸನೂ

ಅನೇಕ ಪಾತ್ರಧಾರಿ, ಏಕಮೇವ ಮಾಹಾ ಕವಿಯೂ, ಲೇಖಕನೂ
ಗಣೇಶನಿಗೆ ಲೇಖನಿಯ ಕೊಟ್ಟು ಬರೆಸಿದಂತೆ ನಿಜದಿ ಬರೆದವನೂ  

Sunday, May 13, 2012

Murthy's Words of Experience


Murthy's Words of Experience

Beauty is in the eye of the beholder; 
Beautiful lady is in the embracing arms of the bold holder; 
If the holder knows where exactly the beauty is in the cutie, he can hold it lightly or tightly; 
The pleasure tightens, tighter it gets.

ಮೂರ್ತಿಯ ಮತಿ ಮಂಥನದ ಮಧು


ಮೂರ್ತಿಯ ಮತಿ ಮಂಥನದ ಮಧು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅರವತ್ತ ನಾಲ್ಕಕ್ಕಿಂತ ಅರವತ್ತ ಐದು ಹೆಚ್ಚು; ಗಣಿತಕ್ಕಿಂತ ಗುಣ ಉತ್ತಮ

ಲೋಕ ವಿದ್ಯೆಗಳನ್ನೆಲ್ಲಾ ಕಲಿಯುವುದಕ್ಕಿಂತ, ಲೋಪವೇನೆನ್ನುವುದನ್ನು ಅರಿ

ಎಲ್ಲಾ ವಿದ್ಯೆಗಳನ್ನು ಕಲಿತರೆ ಒಳ್ಳಿತೇ; ಇಲ್ಲದ ವಿದ್ಯೆಗಳ ವಿಶ್ವಾಮಿತ್ರ ಸೃಷ್ಟಿಗೆ ಸಮವಿಲ್ಲ

ಏನೆಲ್ಲಾ ಗೊತ್ತು ಎಂಬುದು ಗೊತ್ತಿರ ಬೇಕು; ಏನು ಗೊತ್ತಿಲ್ಲವೆಂಬುದು ಮಾತ್ರ ಗೊತ್ತಿರಲೇ ಬೇಕು

ಕೇಳಿದ ಪ್ರಶ್ನೆಗಳಿಗೆಲ್ಲಾ  ಉತ್ತರಿಸುವ ಮಸ್ತಿಷ್ಕ ಉತ್ಕೃಷ್ಟ; ಕೇಳದ ಪ್ರಶ್ನೆಗಳನ್ನು ಮತಿಯಲ್ಲಿ ಮಿಂಚಿಸಿ ಕೊಳ್ಳುವುದಕ್ಕಿಂತ ಮಿಂಚಿದುದಿಲ್ಲ

ಚೆನ್ನಾಗಿ ಕೈ ಬಿಡುವುದನ್ನು ಚೊಕ್ಕವಾಗಿ ಕಲಿ; ಚೆಂಡಿನ ಆಟಕ್ಕಿಂತ ಚೆನ್ನೆಯ ಮನವನ್ನು ಚಕ್ಕಂದದಲಿ ಕದಿಯುವುದರಲ್ಲಿ ಕಲಿಯಾಗು

Saturday, May 12, 2012

ಹಿರಿತನದ ತಾಯಿತನಕೆ ಸಾಷ್ಟಾಂಗ ನಮಸ್ಕಾರ


ಹಿರಿತನದ ತಾಯಿತನಕೆ ಸಾಷ್ಟಾಂಗ ನಮಸ್ಕಾರ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಿನಗಿಂದು ನಮಸ್ಕಾರ; ನಿನಗೆಂದೂ ನಮಸ್ಕಾರ, ಅಂಬೆ
ನಿನ್ನಿಂದ ಬಂದೆ; ನಿನ್ನಿಂದ ಉಂಡೆ; ನೀನೆಂದದೇ ಅಂದೆ

ಕಣ್ಣಲ್ಲಿ ಕಾಣುವ ಮುಂಚೆಯೇ ಎದೆಯಲ್ಲಿ ಮುದವ ಹೊತ್ತೆ
ಭ್ರೂಣವನು ಅಂದದಲಿ ಅಂಡದಲಿ ಪೋಷಿಸಿ ಆಶ್ರಯವಿತ್ತೆ 

ಹೊಟ್ಟೆಯಲಿ ಒಂಬತ್ತು ಮಾಸ ಹೊತ್ತು ಏದುಸುರು ಬಿಟ್ಟವಳು
ಹೆತ್ತಾಗ ಉಂಬು ಇತ್ತು, ಮುತ್ತು ಇಟ್ಟು, ಸೊಂಟದಲಿ ಹೊತ್ತವಳು

ಅಂಬೆಗಾಲಿಟ್ಟು ತುಂಟತನ ಮಾಡುವಾಗ, ಕಿಲಕಿಲ ನಕ್ಕಾಗಲೆಲ್ಲಾ
ತುಂಬು ಹೃದಯದಿ ಆನಂದವನು ಸೂಸಿದವಳು ದಿನ ರಾತ್ರಿಯೆಲ್ಲಾ

ಅದೆಷ್ಟು ಭರದಲಿ ಬೆಳೆದೆನೋ! ಬಲಿಷ್ಠ ದೇಹದಿ ಏನೆಲ್ಲಾ ಮಾಡಿದೆನೋ
ಅದಷ್ಟೂ ನಿನಗೆ ಪಾದಾರ್ಪಣೆ; ಮನದಲ್ಲಿಯೇ ಸಾಷ್ಟಾಂಗ ನಮಿಸುವೆನು

ತಾಯಿತನವ ಮೀರುವುದು ಇಳೆಯಲ್ಲೇ ಅಳೆದು ಜಾಲಾಡಿದರೂ ಸಿಗಬಹುದೇ!
ತಾಯಿತನದ ಒಲವಿನ ಸಾಲವದು ಎಷ್ಟು ಸವೆಸಿದರೂ ಉಳಿಯುವಂತಹದೇ

Friday, May 11, 2012

ಮೂರ್ತಿಯ ಬೆಸವಾದದ ತರ್ಕ


ಮೂರ್ತಿಯ ಬೆಸವಾದದ ತರ್ಕ

ಹಣ್ಣು ಸಿಹಿ, ಕಹಿ ಕಾಯಿ, ಹುಳಿ ಲೊಟ್ಟೆ, ನಾಲಗೆಯ ಹಿಂಡುವ ಕ್ಷಾರ
ತಿನ್ನು ಹದದಲ್ಲಿ ಬೆರೆಸಿ, ಕಲಸಿ, ಬೇರೆ, ಬೇರೆ, ಹೇಗೆ ಬೇಕಾದರೂ 

ಸತ್ಯವನು ನುಡಿ ಒಮ್ಮೊಮ್ಮೆ ಮಾತ್ರ, ವಾರಕೋ, ವರುಷಕೋ ಸಾಕು
ವ್ರತವನ್ನು ಮಾತ್ರ ಹಿಡಿದಿಯದೆಯೇ, ಮಿತಿಯಿರಲಿ ನಿಜಕೆ ಬಲು ಜೋಕೆ

ಹರಿಶ್ಚಂದ್ರನದು ಒಂದು ತರಹದ ಶಾಪ, ವಿಧಿ ಸುಡುಗಾಡು ಕಾಯುವುದು
ಸರಿ, ಸಮಗಳ ಅರಿಯದಾ ಮೂಢ, ಗೊಡ್ಡು ಸತ್ಯವಾಡಿದನವನು ಸತ್ಯವಾದಿ

ಸಿಹಿಯಾದರೂ ಒಮ್ಮೊಮ್ಮೆ, ಕಹಿಯಾದೀತು ಅದೇ ಸತ್ಯ ಮತ್ತೊಮ್ಮೆ ತಿಳಿ
ಕಹಿಗೆ ಸಿಹಿ ಬೆರೆಸಿ ಸುಳ್ಳಿನ ಲಾಡು ಉಂಡೆಗಳನು ಹಂಚಿದರೆ ತಪ್ಪೇನಿಲ್ಲ

ಕಳ್ಳನವ ಕಿಲಾಡಿ ಕಿಟ್ಟ, ಆಡಿಸಿದಾತ ದೊಡ್ಡಣ್ಣ ಬಾಯಲ್ಲಿ ಕೂಡ ಸುಳ್ಳು ಕಂತೆ
ಮಲ್ಲಯುಧ್ಧ, ಗಧೆಯಿಂದ ಹೊಡೆದಾಡುವಾಗಲೂ ಮೋಸವನು ಕಲಿಸಿದಾತ

ವನವಾಸದ ಅತಿ ಆಸೆಯಿದ್ದರೆ, ಸತಿಯ ಕಳೆದು ಅಳು ಅಪ್ಪನ ಮಾತು ಪಾಲಿಸಲು
ಬೆಸ ಕಾರಣಕೆ ಅಟ್ಟು ಸತಿ ಸೀತೆಯ ಮತ್ತೊಮ್ಮೆ ಕಾಡಿಗೆ ಅಗಸನೋರ್ವ ಬೊಗಳಲು

ವ್ಯಾಸ, ವಾಲ್ಮೀಕಿಯರ ಕತೆಗಳನು ವ್ಯಥಾ ತಥಾ ಅಳವಡಿಸದೆಯೇ ತಿಳುವಳಿಕೆಯಲಿ
ಬೆಸದ ಬತ್ತಳಿಕೆಯ ಬೆನ್ನ ಮೇಲೆ ಹೊತ್ತು, ಬಿಲ್ಲಿಗೆ ಸಮಯೋಚಿತ ಹೂಡು ಮರ್ಮದಲಿ

Thursday, May 10, 2012

ಮೂರ್ತಿಯ ಅನುಭವದ ಕಿವಿಮಾತು


ಮೂರ್ತಿಯ ಅನುಭವದ ಕಿವಿಗುಟ್ಟು

ಹುಟ್ಟಿನಿಂದ ಪೆಟ್ಟು ತಿಂದಷ್ಟೂ ನೆಟ್ಟಗಾದೀತು ನೆತ್ತಿ
ಬಿಟ್ಟಿ ಕೊಟ್ಟರೆ ತಟ್ಟದು, ಅಟ್ಟು, ಹಿಟ್ಟಿಗೆ ಬೆಲೆಯಿಲ್ಲ

ಕಟ್ಟು ನಿಟ್ಟು ಇದ್ದರೇನೇಯೇ ಗಟ್ಟಿ ರಟ್ಟೆ, ಸೊಂಟ, 
ಬೆಟ್ಟದಂತಹ ದೇಹ ನೆಲ ಮೆಟ್ಟಿ ಗತ್ತಿನಲ್ಲಿ ನಿಂತೀತು

ತಂಟೆ ಮಾಡದೆ ಮೈ ಮನ ಮುರಿದು ನೀಗಿದರೆ ಮಾತ್ರ
ಚಟ್ಟ ಹತ್ತಿ ಸುಮ್ಮನೆ ಮಲಗುವ ಮುನ್ನ ನಿನಗೆ ನೆಮ್ಮದಿ

Saturday, May 5, 2012

ಮಹಾ ಮಡಿ ತುರುಕರ ರುಚಿರುಚಿಯ ಊಟ


ಮಹಾ ಮಡಿ ತುರುಕರ ರುಚಿರುಚಿಯ ಊಟ
ಡಾಕ್ಟರ್ ಕೆ. ಆರ್. ಎಸ. ಮೂರ್ತಿ

ಒಂಟೆಯ ಹಾಲಿನ ಬಿಸಿ ಬಿಸಿ ಶ್ಯಾವಿಗೆ ಪಾಯಸವನು
ಗಟ ಗಟ ಕುಡಿದ ಹಸೀ ಸಾಬರ ಪುಟಾಣಿ ಬಾಲಕನು

ಬುರುಕದ ಒಳಗೆ ಬಚ್ಚಿದ ತುರುಕಿಯ ಸೌಂದರ್ಯ ಭದ್ರ ಕಣೆ
ಸೌಟಲಿ ತೊಳಸಿದಳು ಒಂಟೆಯ ಮಜ್ಜಿಗೆ ಹುಳಿಗೆ ಒಗ್ಗರಣೆ

ಭರ ಭರ ಭಾರದ ಹೆಜ್ಜೆಯ ಹಾಕಿ ಧಾವಿಸಿ ಬಂದನು ಮುಸಲ್ಮಾನ
ಕರಿದು ಆಯಿತೇ ಗರಿಗರಿಯ ಅಂಬೊಡೆ ತಟ್ಟೆ ತುಂಬಾ ತಿನ್ನೋಣ