Tuesday, February 7, 2012

ಸಾರ್, ಸಾರ್

ಸಾರ್, ಸಾರ್
ಕೆ. ಆರ್. ಎಸ್. ಮೂರ್ತಿ
 
ಸಾರ್, ಸಾರ್
ಬನ್ನಿ ಒಳ್ಗೆ ಸಾರ್
 
ಏನ್ರೀ ಇವತ್ತಿನ ಮೆನ್ಯು?
 
ಸಾರ್ ಸಾರ್
 
ಏನ್ರೀ, ಆಗ್ಲೆ ಹೇಳಿದ್ರಲ್ಲ ಸಾರ್, ಸಾರ್ ಅಂತ
 
ಇಲ್ಲ ಸಾರ್. ಇವತ್ತಿನ ಮೆನ್ಯು ಸಾರ್ ಸಾರ್
 
ಹಾಗಂದ್ರೆ ಏನ್ರೀ? ನೀವು ಹೇಳೋದು ಅರ್ಥ ಆಗ್ತಾ ಇಲ್ಲ!
 
ನಮ್ದು ಸಾರ್ ಹೋಟ್ಲು ಸಾರ್.
ನಾವು ಮಾಡೊದು ಬರೀ ಸಾರ್
 
ಬರೀ ಸಾರ್ ಒಂದೇ ಮಾಡಿದ್ರೆ, ಹೇಗ್ರೀ ಆಗತ್ತೆ?
 
ಇಲ್ಲ ಸಾರ್. ನಾವು ಎಲ್ಲಾ ತರಹ ಸಾರ್ ಮಾಡ್ತೀವಿ ಸಾರ್.
 
ಎಲ್ಲಾ ತರಹ ಅಂದ್ರೆ ಏನ್ರೀ? ಪ್ರಪಂಚದಲ್ಲಿ ಇರೋದು ಒಂದೇ ತರಹ ಸಾರ್ ಅಲ್ವೇನ್ರೀ?
 
ಅಲ್ಲ, ಅಲ್ಲ ಸಾರ್
 
ಹಾಗೆ ತುಂಬ ಸತಿ "ಅಲ್ಲ ಅಲ್ಲ" ಅನ್ನಬೇಡ್ರಿ. ನಾವು ಕಟ್ಟು ನಿಟ್ಟು ಹಿಂದುಗಳು
ನಿಮ್ಮನ್ನ ನೋಡಿದ್ರೆ ಮಾಧ್ವರ ತರಹ ಕಾಣ್ತೀರಿ, ಮುದ್ರೆ ಮೈಮೇಲೆಲ್ಲ ಹಾಕ್ಕೊಂಡು!
"ಅಲ್ಲ ಅಲ್ಲ" ಅನ್ನೋದು ನಿಲ್ಲಿಸ್ರಿ ಸಾಕು
 
ಆಯ್ತು ಮಾರಾಯ್ರೆ! ನಿಮ್ಮನ್ನ ನೋಡಿದ್ರೆ ನೀವು ಅಯ್ಯಂಗಾರ್ ತರಹ ಕಾಣಿಸ್ತೀರಿ
ನಿಮ್ಮ ನಾಮ ತುಂಬ ಚೆನ್ನಾಗಿದೆ, ಸಾರ್.
 
ನಿಮ್ಮ ಸಾರಿನ ಮೆನ್ಯು ಪೂರ್ತಿ ಹೇಳ್ರಿ
 
ಈ ಕಡೆ, ನಿಮ್ಮಂಥವ್ರಿಗೆ, ನಮ್ಮಂಥವ್ರಿಗೆ. ಅಂದ್ರೆ ನಾಮ, ಮುದ್ರೆ, ವಿಭೂತಿ ಹಾಕ್ಕೊಳೋರಿಗೆ
 
ಸರಿ ಅರ್ಥವಾಯ್ತು. ಮುಂದೆ ಹೇಳಿ.
 
ಇವತ್ತಿನ ಮೆನ್ಯು, ಯಾವತ್ತಿನ ಮೆನ್ಯು ಎಲ್ಲಾ ಒಂದೇ ಸಾರ್.
ಬೇರೆ ಬೇರೆ ತರಹ ಸಾರ್ ಸಾರ್.
ತಿಳಿ ಸಾರ್, ಮೈಸೂರ್ ಸಾರ್,
ಮದ್ರಾಸ್ ಸಾರ್, ಹೂರಣದ ಸಾರ್,
ತರಕಾರಿ ಸಾರ್, ಬೇರೆ ಬೇರೆ ತರಕಾರಿ ಸಾರ್
ಬರೀ ಟೊಮೋಟ ಸಾರ್
ಹುಣಿಸೇ ಸಾರ್, ಮೆಣಸಿನ ಸಾರ್, ಸಾರ್.
 
ನೀವು ತರ, ತರ ಸಾರ್ ಹೇಳೋದು ನೋಡಿದ್ರೆ,
ಬಾಯಲ್ಲಿ ನೀರೂರತ್ತೆ ಮಾರಾಯ್ರೆ!
 
ಇನ್ನೇನು ತರಹ ತರಕಾರಿ ಹಾಕಬಹುದು ಸಾರಿಗೆ?
 
ನಿಮ್ಗೇನು ತರಕಾರಿ ಬೇಕೋ ಕೇಳಿ ಸಾರಿನಲ್ಲಿ, ಸಾರ್
ನಿಮಗೆ ಸ್ಪೆಶಲ್ ಮಾಡಿ ಹಾಕ್ತೀನಿ
 
ಏನ್ರೀ, ಟೊಮೋಟ ಹಾಕದ್ರೆ ಪರವಾಗಿಲ್ಲ.
ಬೇರೆ ತರಕಾರಿ ಹಾಕಿದ್ರೆ ಹುಳಿ, ಸಾಂಬಾರುಗಳು ಆಗತ್ವೆ ಅಲ್ವೇನ್ರೀ?
 
ನೀವು ಹೇಳಿದ್ದು ಸರಿ ಸಾರ್. ಬೇರೆ ಅವರು, ಹುಳೀಗೂ, ಸಾಂಬಾರಿಗೂ "ಸಾರ್" ಅಂತಾನೇ ಅಂತಾರೆ ಸಾರ್.
 
ಈಗ ಗೊತ್ತಾಯ್ತು!
 
ಯಾರಿಗೂ ಬೇಜಾರು ಮಾಡಿಸಬಾರದು ಅಂತ ಎಲ್ಲದಕ್ಕೂ ನಾವುಗಳೂ "ಸಾರ್" ಅಂತನೇ ಅಂತೀವಿ
 
ಸರಿ. ಅಷ್ಟೇ ತಾನೇ ನಿಮ್ಮ ಮೆನ್ಯು?
 
ಇನ್ನೂ ಇದೆ ಸಾರ್. ಇವೆಲ್ಲ ನಮಗಾಯ್ತು, ನಿಮಗಾಯ್ತು
ನೀವು ಹಿಂದಗಡೆ ಬಾಗಿಲಿನಿಂದ ಬಂದರೆ, ಇನ್ನೊಂದು ಸೆಕ್ಷನ್ ಇದೆ, ಸಾರ್.
 
ಅದ್ಯಾವುದು ರೀ? ಬೇರೆ ಹೋಟಲ್ಲೇ?
 
ಅಲ್ಲ, ಸಾರ್. ಸಾರಿ ಸಾರ್: "ಅಲ್ಲ" ಅಂತ ಮರೆತು ಅಂದುಬಿಟ್ಟೆ ಸಾರ್, ಕ್ಷಮಿಸಿ ಸಾರ್.
ಇಲ್ಲೀ ಅಡಿಗೆ ನಮ್ಗೆ, ನಿಮ್ಗೆ ಆದ್ರೆ, ಅಲ್ಲಿ ಅಡಿಗೆ ಬೇರೇವ್ರಿಗೆ ಸಾರ್.
 
ಅರ್ಥ ಆಯ್ತು. ಆ ಹೋಟಲ್ಲಿನ ಸೆಕ್ಷನ್ನಲ್ಲಿ ಬೇರೆ ತರಹದ್ದು ಹಾಕತೀವಿ
ಅಲ್ಲಿ ಕೋಳಿ ಸಾರ್, ಮೀನ್ ಸಾರ್..... ಹಾಗೆ ಬೇರೆ ತರಹದ್ದೆಲ್ಲ ಹಾಕಿ ಸಾರ್ ಮಾಡ್ತೀವಿ ಸಾರ್.
 
ನೀವೇ ಮಾಡ್ತೀರೆನ್ರಿ ಅದೂ ಕೂಡ?
 
ಇಲ್ಲ ಸಾರ್. ಸುಮ್ಮನೆ ತಮಾಷೆ ಮಾಡಬೇಡಿ ಸಾರ್.
ಅದಕ್ಕೇ ಬೇರೆ ಅಡುಗೆ ಮನೆ ಇದೆ ಸಾರ್.
ಬೇರೆ ಅಡಿಗೆಯವ್ರೂ ಇದಾರೆ ಸಾರ್.
 
ಇನ್ನು ಮುಂದೆ ವರ್ಣನೆಯೆಲ್ಲಾ ಮಾಡಬೇಡಿ.
ಆಗಿರೋ ಹಸಿವೂ ಹೋಗಿ ಬಿಡತ್ತೆ.
 
ನನಗೆ ಮೈಸೂರ್ ಸಾರೇ ಸಾಕು
ಬೇಗ ತಂದು ಕೊಡಿ

ನೀವೆಲ್ಲರಿರುವೆ

ನೀವೆಲ್ಲರಿರುವೆ
ಕೆ. ಆರ್. ಎಸ್. ಮೂರ್ತಿ

 
ನಾನಿರುವೆ, ನೀನಿರುವೆ,
ಅವನಿರುವೆ, ಅವಳಿರುವೆ,
ಇವರೆಲ್ಲರಿರುವೆ, ಅವರೆಲ್ಲರಿರುವೆ,
ಅಲ್ಲೂ ಇರುವೆ, ಇಲ್ಲೂ ಇರುವೆ, ಎಲ್ಲೆಲ್ಲೂ ಇರುವೆ
ಹಿಂದೂ ಇರುವೆ, ಮುಂದೂ ಇರುವೆ, ಎಂದೆಂದೂ ಇರುವೆ.
 
ಇರುವೆ ಲೋಕದಲಿ ಬರೀ ಇರುವೆ.
ಇರುವೆ ಪರ ಲೋಕ ಸೇರಿದ ಮೇಲೆ,
ಇರುವೆಯ ಮರು ಇರುವು;
ಸರಿಯಾದ ಇರುವೆಗೆ ಮರು ಇರುವೆಯ ಇರುವಿಲ್ಲ
ಬೇರೆಯಾದ ಇರುವೆಗೆ ಮರು ಇರುವೆಯ ಇರುವು ಖರೆ.
 
ಸಾರಿದನು ಸಾವಿರ ಸಾರಿ ಈ
ಸರಿ ಅರಿವನ್ನು ಗುರು ಇರುವೆಯು
ಮರಿ ಇರುವೆಗೂ, ಸಪೂರ ಇರುವೆಗೂ,
ತೋರ ಇರುವೆಗೂ, ಅಸುರ ಇರುವೆಗೂ
"ಮರೆಯ ಬೇಡಿರಿ ಇರುವೆಯ ಇರುವಿನ ಸಾರ
’ಇರುವೆಯ ದೇವರೂ ಇರುವೆ’".
 
ನೆರೆಹೊರೆಯ ಬಿಲದ, ಇತರ ಮರದ
ಇರುವೆ ಕೂಟದ ಸಾಲು ನೆರೆದರು ಸೇರಿ, ಸೇರಿ;
ನೂರಾಯ್ತು, ಸಾವಿರ ಸಾವಿರವಾಯ್ತು.
 
ಇರುವೆ ಸಂಸಾರಗಳೆಲ್ಲ ಎರಗಿದವು
ಗುರು ಇರುವೆಗೆ ಅಪಾರ ನಮ್ರತೆಯಲಿ.
ಇರುವೆಗಳು ಪಂಕ್ತಿ, ಪಂಕ್ತಿಯಲಿ
ಸಕ್ಕರೆಯ ಅರ್ಪಣವ ಸೇರುಗಟ್ಟಲೆ ಸುರಿದು
ಗುರುವರನಿಗೆ ಇರುವೆಯ ಸುಂದರಿಯರು ನೀರೆಯರು
ಸುರಿಸಿದರು ತರತರದ ಒಲವನ್ನು
ಬಾರಿ, ಬಾರಿ ಗುರುವಿನ ಮೈಮೇಲೇರಿ.
 
ಏರಿತು ಗುರುಗಳ ಮದವು
ಮರೆತು ಮೈಮನ ಜೋರಾಗಿ ಒರಲಿದರು
"ಆರೂ ಅಲ್ಲ ಆ ದೇವರು ಇರುವೆ,
ಇರುವೆನು ನಿಮ್ಮೆದುರು ಸುರರೆಲ್ಲರಿಗೆ
ಅರಸು ನಾನು, ಅರಸ ಬಾರದು ಬೇರೆಲ್ಲೂ
ಅರಿಯಿರಿ ಇರುವೆ ಪೌರರೇ
ಅರಿಯಿರಿ ಈ ಪರತತ್ವವನು",
ಒರಲಿದರು ಧೈರ್ಯದಲಿ
"ನೆರೆ ನಂಬಿ ನಾನೇ ಸಕಲವರಿದ ಗುರು’,
ಸರಿಯಾದ ಇರುವೆ ದೇವರು"

ನಾನೇ?


ನಾನೇ?
ಕೆ. ಆರ್.ಎಸ್ ಮೂರ್ತಿ

ನನ್ನ ನಾನೇ ಹೊಗಳಿ,
ಸುತ್ತು ನಮಸ್ಕಾರ ಸಾವಿರ ಹೊಡೆದು,
ಮಣಿದು ನನ್ನ ಕಾಲಿಗೆ,
ಮಿಂದಾಯಿತು ನನ್ನ ನದಿಯಲ್ಲಿ,
ಶಂಖ ವಿನ್ಯಾಸದಿ ಹರಿದ ಶುಭ್ರ ಗಂಗೆ.
ಮಂಗಳಾರತಿ, ಧೂಪ, ದೀಪಾರತಿ,
ಫಲ, ಪುಷ್ಪ, ಗರಿಕೆ, ಹಸಿರು ಎಲೆ,
ನೈವೇದ್ಯ ನನಗೆ ಪರಿಪರಿ ಭೋಜನ.

ನನಗೆ ಕಟ್ಟುವೆ ತಾಳಿ ನಾನೇ
ಸಪ್ತ ಪದಿ ನನ್ನ ಕೈಹಿಡಿದು
ನಾನೇ ಸುತ್ತಿದ ಅಗ್ನಿಯೂ ನಾನೆ
ಹವ್ಯ, ಹವನ, ಸಮಿತ್ತು, ನನ್ನೊಳಗೇ.
ಹತ್ತಿಸಿದೆ ಹಸಿವೆಯಲಿ, ಹಾತೊರೆದು ಭಗ್ಗನೆ,
ಉದ್ದ ನಾಲಿಗೆ ಚಾಚಿದ ಅನಲನೂ ನಾನೇ ಆಗಿ.
ಹವ್ಯಕನು ನಾನು, ಹವ್ಯಾರ್ಪಿತವು ನನಗೇ ತಾನೇ!

ಶಯನ ಶಾಸ್ತ್ರವೂ ಎನಗೇ;
ನನ್ನ ಶಯ್ಯೆಯಲಿ, ಹಂಸ ರೂಪದ ನಾನು ತೂಲಿಕಾ ಕಲ್ಪದಲಿ,
ಮೋಹಿಸಿದ ರತಿ ಮದನರೂ ನಾನೇ.
ದಿನ, ರಾತ್ರಿ ಸ್ವರ್ಗವನು ಕಲ್ಪಿಸಿದೆ;

ಪೇಳಮ್ಮಯ್ಯ ನಮ್ಮ ಕಾಡುವ ಶಾಪ



ಪೇಳಮ್ಮಯ್ಯ ನಮ್ಮ ಕಾಡುವ ಶಾಪ
ಕೆ.ಆರ್.ಎಸ್. ಮೂರ್ತಿ

ಒಂದೇ ಹೊಕ್ಕಳ ಬಳ್ಳಿಗಳು
ಉಂಡದ್ದು ಒಂದೇ ಎಲೆಯಲ್ಲಿ,
        ನಾವು ನಿನ್ನ ಮಕ್ಕಳು

ಅದೇ ಮೊಲೆಗಳ ಅಪ್ಪಿಕೊಂಡು ಹೀರಿದ್ದು
ಅದೇ ಕೈಯಿನ ತುತ್ತು, ಮೊಸರನ್ನ, ಉಪ್ಪಿನಕಾಯಿ
ಅದೇ ಅಮ್ಮನ ತೊಡೆಯ ಮೆತ್ತನೆಯ ಹಾಸಿಗೆ

ಅಂದು ಅಂದದ್ದು ಅದೇ ಅಮ್ಮನ ಹೆಸರು
ಮಿಂದದ್ದು ಮುಂಜಾನೆ ಒಂದೇ ಕೊಳದಲ್ಲಿ

ನುಡಿದ ಸ್ವರಗಳು ಒಂದೇ
ಆಡಿದ, ಕುಣಿದು ಕುಪ್ಪಳಿಸಿದ
        ಅಂಗಳವೂ ಒಂದೇ
ಮುಡಿದ ಹೂಮಾಲೆ ಒಂದೇ
ಹಾಡಿದ ರಾಗ ಒಂದೇ
ಕಡಿದ ಗುಂಡು ಕೋಡುಬಳೆಯ
       ಹಿತಖಾರವೊಂದೇ
       ಗರಿಗರಿ ಚಕ್ಕುಲಿಯ
       ಘಮಘಮ ರುಚಿಯೂ ಒಂದೇ
ಕಡೆದ ಗಟ್ಟಿ ಮೊಸರಿನಲಿ ತೇಲಿಬಂದ
       ಅಪ್ಪಟ ಬೆಣ್ಣೆಯನು ಮೆದ್ದಾಗ
       ನಾಲಿಗೆಗೆ ಆದ ಆನಂದವೂ ಒಂದೇ

ಹಿಡಿದು ಮುಡಿಯಲ್ಲಿ, ಕೊಬ್ಬರಿ-ಕಲ್ಲು ಸಕ್ಕರೆ
       ಸವಿಯ ಚೆಂದವೊಂದೇ


ಮಣ, ಮಣ ಮಾಂತ್ರಿಕನು ನಾನು

ಮಣ, ಮಣ ಮಾಂತ್ರಿಕನು ನಾನು
ಕೆ. ಆರ್. ಎಸ್. ಮೂರ್ತಿ


ನಾನೊಬ್ಬ ಮಾಂತ್ರಿಕ.
ಕೈಚಳಕ, ಬಾಯಿ ಚಳಕ ತೋರಿಸ್ತೀನಿ
ನಿಮ್ಮ ಮನಸ್ಸಿಗೆ ಮೋಡಿ ಮಾಡಿಬಿಡ್ತೀನಿ.
ಇದ್ದದ್ದನ್ನ, ಇಲ್ಲದ್ದನ್ನ ಬೆರಕೆ ಮಾಡ್ತೀನಿ.
ನನ್ನದು ಕಣ್ಣು ಕಟ್, ಮಾತ್ರ ಅಲ್ಲ ಸ್ವಾಮಿ.
ಕಿವಿ ಕಟ್ ಮಾಯಾ, ಮಾಟದ ಬಗ್ಗೆ ಕೇಳಿದೀರಾ?
ನಿಮ್ಮ ಬುದ್ದಿ ಕಟ್ ಕೂಡ ಮಾಡಿಬೇಡ್ತೀನಿ.
ನಿಮ್ಮ ತಲೆ ಹೇರ್ ಕಟ್ ಮಾಡುವ ಹಜಾಮ ನಾನಲ್ಲ
ಹೆದರಿಕೋ ಬೇಡಿ, ಇದು ಮಾತ್ರ ಗ್ಯಾರಂಟಿ:
ನಿಮ್ಮ ಜೇಬ್ ಕಟ್ ಮಾಡಲ್ಲ.
ನಿಮ್ಮ ಜೇಬ್ ಕಟ್ ಮಾಡಕ್ಕೆ ಕಂದಾಯದೋರು ಇದಾರಲ್ಲ!

ಈಗ ಕೇಳಿ ನನ್ನ ಮಾಯಾ ಮಂತ್ರ ಮಾಟದ ಶಕ್ತಿ.
ಹದಿನಾರು ಒಂದು ತರಹ,
ಜೊತೆಗೆ ಇಪ್ಪತ್ತೈದು ಇನ್ನೊಂದು ತರಹ,
ಮತ್ತೊಂದು ತರಹದ್ದು ಒಂಬತ್ತು
ಎಲ್ಲಾ ಬೆರೆಸುತ್ತೀನಿ, ಕುಲುಕುತ್ತೀನಿ.
ಜೊತೆಗೆ ಮಣ, ಮಣ ಮಂತ್ರ ಹೇಳ್ತೀನಿ
ಕಣ್ಣು ಮುಚ್ಚಿ ಕೊಂಡು ಸ್ವಲ್ಪ ಧ್ಯಾನ ಕೂಡ ಮಾಡ್ತೀನಿ.
ಕೆಲವು ಸಾರಿ ತೂಕಡಿಕೆ ಬಂದು ನಿದ್ದೆ ಕೂಡ ಬಂದು ಬಿಡತ್ತೆ!
ನಿಮ್ಮ ಬಗ್ಗೆ ಹೇಳ್ತಾ ಇಲ್ಲ! ನನ್ನ ಬಗ್ಗೆ ಮಾತ್ರ ಹೇಳ್ತಿದೀನಿ ಸ್ವಾಮಿ.

ನಿದ್ದೆ ಬಂದಾಗ ಏನೇನೋ ಕನಸ್ಸು ಕೂಡ ಬಂದು ಬಿಡತ್ತೆ.
ಕನಸ್ಸಿನಲ್ಲಿ ವಿಚಿತ್ರ ಕತೆಗಳು ಬಂದು ಬಿಡತ್ವೆ!
ಪ್ರೀತಿ, ಪ್ರೇಮ, ಪ್ರಣಯ ಹುಡುಗಿಯರು;
ಪ್ರೀತಿ ಜೊತೆಗೆ, ಕೆಲವು ಸಾರಿ ವಿರಹ.
ಸುಂದರ ವನಗಳು, ಆ ವನದಲ್ಲಿ ನಾನು, ನನ್ನ ಹುಡುಗಿ.
ನಿಮಗೆ ಎಷ್ಟು ರಸ ಬೇಕು? ನವರಸಕ್ಕಿಂತ ಬಹಳ ರಸಗಳು
ಸುರಿದೂ, ಸುರಿದೂ ಹರಿದು ಹೋಗುತ್ತೆ ಸ್ವಾಮಿ.

ಆ ಕನಸಿನ ರಸಗಳೆಲ್ಲಾ ಕುದಿಯುತ್ತಾ ಇರುವಾಗ,
ಮುಂಚೆಯೇ ಹೇಳಿದ್ನಲ್ಲ, ಸರಿಯಾಗಿ ಜ್ಞಾಪಕ ಇದೆಯಾ?
ಹದಿನಾರು, ಇಪ್ಪತ್ತೈದು, ಒಂಬತ್ತು ಕೂಡಿದರೆ ಎಷ್ಟಾಯ್ತು?
ನೀವೇ ಹೇಳಿ ನೋಡೋಣ? ಒಟ್ಟು ಐವತ್ತಾಯ್ತು. ಸರಿ ತಾನೇ?
ಅದನ್ನೆಲ್ಲಾ ಬೆರೆಸಿ, ಚೆನ್ನಾಗಿ ತೊಳೆಸಿ, ಮತ್ತೆ ಮತ್ತೆ ತೊಳೆಸಿ,
ಒಂದೆರಡು ಕುಡಿ ಬಂದು, ಎಲ್ಲಾ ಚೆನ್ನಾಗಿ ಹದವಾಗಿ ಬೆಂದ ಮೇಲೆ,
ಘಮ, ಘಮಾ ಅಂತ ಮಸಾಲೆ ಬೆರೆಸುತ್ತೀನಿ. ಕೊನೆಗೆ ಒಗ್ಗರಣೆ.
ನಿಮಗೆ ಗೊತ್ತಲ್ಲ: ಮಸಾಲೆ ಇಲ್ಲದಿದ್ದರೆ ಯಾರೂ ತಿನ್ನಲ್ಲ.
ಮೈಗೆ ಒಳ್ಳೇದು ಅಂತ ಗೊತ್ತಿದ್ರೂ, ಸಪ್ಪೆ ಯಾರೂ ತಿನ್ನಲ್ಲ.

ಏನಂದ್ರೀ? ಇನ್ನೊಂದು ಸಾರಿ ಕೂಡಿ ಲೆಕ್ಕ ಮಾಡಬೇಕಾ?
ಓ! ಇದುವರೆಗೂ ನಾನು ಹೇಳಿದ್ದು ಮಣ, ಮಣ ಆಗಿಬಿಡ್ತಾ?

ನಿಮಗೆ ಒಗಟು ಹೇಳಿದರೆ ಅರ್ಥ ಆಗಲ್ವ? ಕ್ಷಮಿಸಿ ಹಾಗಾದರೆ.
ಈಗ ಕೇಳಿ: ಪೂರ್ತಿ ಒಗಟು ಬಿಡಿಸಿ ಹೇಳೋಲ್ಲ, ಸರಿಯಾ?
ಅ, ಆ, ಇ, ಈ.............ಅಂ, ಅಃ  ಸ್ವರಗಳು ಹದಿನಾರಲ್ವೆ!
ವ್ಯಂಜನಗಳು ಇಪ್ಪಥ್ಥೈದು? ಯರಲವ ಶಷ ಸಹಳ ಒಂಬತ್ತಲ್ವೆ?

ಈಗ ನೀವೇ ಹೇಳಿ: ನವರಸ, ಕನಸು, ಹದವಾಗಿ ಬೇಯಿಸುವುದು,
ಮಸಾಲೆ, ಒಗ್ಗರಣೆ.......................................................
'ಮಧ್ಯೇ, ಮಧ್ಯೇ....... ಆಚಮನೀಯಂ ಸಮರ್ಪಯಾಮಿ'
ಅಂತ ದೇವರ ಪೂಜೆ, ವ್ರತಗಳನ್ನು ಮಾಡುವಾಗ ಹೇಳುವ ಹಾಗೆ,
"ಮಧ್ಯೇ, ಮಧ್ಯೇ ....... ಜೋಕುಗಳನ್ನೂ ಸಮರ್ಪಯಾಮಿ" ಮಾಡಿಬಿಟ್ಟಿದ್ದೇನೆ.

ಈಗ ಮತ್ತೆ ಇನ್ನೊಂದು ಸಾರಿ ಎಲ್ಲವನ್ನೂ ಓದಿ ಬಿಡಿ.
ಈ ಮಾಂತ್ರಿಕನ ಮಣ, ಮಣ ಸರಿಯಾಗಿ ತಿಳಿದೀತು!

ತುಪ್ಪ ಸವರಿದ ಮೂಗು

Dear Kannada Short Story Lover:

I am attaching my new short story "tuppa savarida moogu" in PDF form. I have also appended it to this email in Google Kannada transliteration format.Most people can read it.  If you can view this appended format, you may set the right view option in your computer.

ತುಪ್ಪ ಸವರಿದ ಮೂಗು
ಕೆ. ಆರ್. ಎಸ್. ಮೂರ್ತಿ

ಮಸಾಲೆ ದೋಸೆಗೆ ಎಣ್ಣೆಯನ್ನೇ ಮುಟ್ಟಿಸುವುದಿಲ್ಲ; ತುಪ್ಪ ಹಾಕಿ ದೋಸೆ ಕಾವಲಿಯಮೇಲೆ ಹರಿಯುವುದು ದಿನ ನಿತ್ಯದ ವ್ರತ ಅವರ ಮನೆಯಲ್ಲಿ.  ರೊಟ್ಟಿಗೆ, ಇಡ್ಲಿಗೆ ಕೊಬ್ಬರಿ ಚಟ್ನಿ, ಗೋಡಂಬಿ, ಬಾದಾಮಿ ಹಾಕಿ ಚಟ್ನಿ. ಅನ್ನ ಬೇಯಿಸಿವುದೇ ಹಸುವಿನ ಹಾಲಿನಲ್ಲಿ. ಕೇಸರಿ, ಏಲಕ್ಕಿ ಇದಕ್ಕೆ ಬರಿಯ ಅಲಂಕಾರಕ್ಕಲ್ಲ, ಸೌಟಿನಲ್ಲಿ ಹಾಕಿ ಬೆರೆಸುವುದು ಸ್ವಾಮಿ. ನೀರು ಅನ್ನದ ಹತ್ತಿರವೇ ತರುವುದಿಲ್ಲ, ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಇವರ ಸೌಧದಲ್ಲಿ ಠಿಕಾಣಿ ಹಾಕಿದ್ದಳು. ಇವರೆಲ್ಲ ಕುಬೇರನ ಮಕ್ಕಳು. ಊಟ ಮಾಡುವುದು ಸುವರ್ಣದ ತಟ್ಟೆಯಲ್ಲಿ. ನಾನೊಂದು ಸಾರಿ "ಎಷ್ಟೊಂದು ಚಿನ್ನದ ತಟ್ಟೆ ಇದೆ ನಿಮ್ಮನೇಲ್ಲಿ!" ಎಂದದ್ದಕ್ಕೆ, "ಅದು ಚಿನ್ನ ಅಲ್ಲ ಕಣೋ. 'ಸುವರ್ಣ' ಅನ್ನಬೇಕು" ಎಂದು ನನಗೆ ಸಂಸ್ಕೃತದ ಪಾಠವನ್ನೇ ಹೇಳಿಕೊಟ್ಟರು. ಇವರ ಮನೆಯ ಹುಡುಗರು ನನ್ನ ಬಾಲ್ಯ ಸ್ನೇಹಿತರು.

ನೀವು ಬೇಜಾರು ಮಾಡ್ಕಳಲ್ಲ ಅಂದರೆ ಮಾತ್ರ ನಮ್ಮ ಮನೆ ದುಸ್ಥಿತಿ ಹೇಳ್ತೀನಿ. ತಗೊಳ್ಳಿ ನನ್ನ ಕರ್ಚೀಫು ಮೊದಲು. ನನ್ನ ಕಥೆ ಕೇಳಿದರೆ ನಿಮ್ಮ ಕಣ್ಣಿನಲ್ಲಿ ಧಾರಾಕಾರವಾಗಿ ಗಂಗೆ ಹರಿದರೆ ನನ್ನ ಭಗೀರಥ ಬ್ರಾಂಡ್ ಕರ್ಚೀಫು ಬೇಕೇ ಬೇಕಾಗತ್ತೆ.

ಬೆಳೆಯುವಾಗ, ನಮ್ಮ ಮನೆಯಲ್ಲಿ 'ತುಪ್ಪ' ಅಂದರೇನು, ಅದು ಹೇಗಿರುತ್ತೆ ಎನ್ನುವುದೇ ನಮಗೆ ಗೊತ್ತಿರಲಿಲ್ಲ. ನಾನು ನಮಗಿಂತ ಸ್ವಲ್ಪ ಮೇಲೆ ಇದ್ದವರ ಮನೆ ಹುಡುಗರ ಜತೆ ಆಟ ಆಡೋಣ ಅಂತ ಹೋಗಿದ್ದೆ. ನಾನು ಹೋಗುವ ಹೊತ್ತಿಗೆ, ಅವತ್ತಿನ ದಿನ ಹಬ್ಬ ಆದ್ದರಿಂದ, ಏನೇನೋ ಅಡಿಗೆ ಮಾಡಿದ್ದರು. "ನೀನೂ ಬಾರೋ ಊಟ ಮಾಡುವಿಯಂತೆ" ಅಂತ ಅವರ ತಾಯಿ ಕರೆದರು. ಅದಕ್ಕೆ ನಾನು, "ನನ್ನದು ಈಗ ತಾನೇ ಊಟ ಆಗಿದೆ" ಎಂದು ಸುಳ್ಳು ಹೇಳಿ ಹೊರಟು ಎದ್ದೆ. ಅದಕ್ಕೆ, ನನ್ನ ಸ್ನೇಹಿತ, "ಇಲ್ಲೇ ಕೂತುಕೊಳ್ಳೋ . ನಾನು ಬೇಗ ಊಟ ಮಾಡಿಕೊಂಡು ಬಂದು ಬಿಡ್ತೀನಿ" ಅಂದದ್ದಕ್ಕೆ ಸ್ವಲ್ಪ ದೂರದಲ್ಲಿ ಕುಳಿತುಕೊಂಡೆ.

ಇನ್ನೂ ತಟ್ಟೆ ಹಾಕುವ ಮುಂಚೆ, ಅವರ ತಾಯಿ ಮನೆಯ ಹುಡುಗರಿಗೆಲ್ಲ ಕರೆದು ಅದೇನೋ ಮೂಗಿನ ಮೇಲೆ ಹಚ್ಚಿದರು. ಅವರು
ಹಚ್ಚಿದ್ದು ಅದೇನೋ ಘಂ ಅಂತ ನಾನು ಕುಳಿತ ದೂರಕ್ಕೂ ಸುವಾಸನೆ ಬರುತ್ತಿತ್ತು. ಊಟ ಪ್ರಾರಂಭವಾಯಿತು. ಹುಡುಗರೆಲ್ಲ ಬಹಳ ಸಂತೋಷವಾಗಿ ಊಟ ಮಾಡಿ ಮುಗಿಸಿದರು. ನಾನು ಅವರ ತಾಯಿಯನ್ನು ಕೇಳಿದೆ, "ಅದೇನು ನೀವು ನಿಮ್ಮ ಹುಡುಗರಿಗೆಲ್ಲ ಏನೋ ಮೂಗಿಗೆ ಹಚ್ಚಿದ್ದು ನನಗೆ ಅರ್ಥವಾಗಲಿಲ್ಲ. ಅದೇನು ಶಾಸ್ತ್ರ? ನಮ್ಮಮ್ಮ ಆ ಶಾಸ್ತ್ರ ಮಾಡುವುದಿಲ್ಲ. ದಯವಿಟ್ಟು ಹೇಳಿ".

"ನೋಡಪ್ಪ, ನೀನು ಬಹಳ ಚಿಕ್ಕ ಹುಡುಗ. ನೀನು ಆಸಕ್ತಿಯಿಂದ ಕೇಳಿದ್ದಕ್ಕೆ ಹೇಳ್ತಾಯಿದ್ದೀನಿ. ಇದು ಮಾತ್ರ ನೀನೇ ಗುಟ್ಟಾಗಿ ಇಟ್ಟುಕೋ. ಯಾರ ಮನೆಯವರಿಗೂ ಬಾಯಿಬೇಡಬೇಡ, ಬಹಳ ಜೋಕೆ" ಅಂದರು. ತಕ್ಷಣ, ನಾನು ಎಂದಿನಂತೆ, "ಇಲ್ಲಾರೀ, ನಾನು ಯಾರಿಗೂ ಬಾಯಿಬಿಡುವುದಿಲ್ಲ, ನನ್ನ ತಾಯಿ ಆಣೆ" ಅಂದೆ. ಅವರು, "ಆಣೆ ಗೀಣೆ ಎಲ್ಲ ಇಡಬಾರದು ಮಗು" ಎಂದು ಹೇಳಿ ಮುಂದುವರಿಸಿದರು. "ನಮ್ಮ ಯಜಮಾನರಿಗೆ ಬಹಳ ಸಂಬಳ ಬರುವುದಿಲ್ಲ. ಮನೆ ತುಂಬಾ ಮಕ್ಕಳಿರುವುದರಿಂದ, ಹಬ್ಬ, ಹರಿದಿನಗಳಲ್ಲಿ, ಸ್ವಲ್ಪವೇ ಬೆಣ್ಣೆ ತಂದು, ಕಾಯಿಸಿ ತುಪ್ಪ ಮಾಡುತ್ತೇನೆ. ಹಬ್ಬದೂಟದ ಮೊದಲು, ಹುಡುಗರಿಗೆ ಸ್ವಲ್ಪ, ಸ್ವಲ್ಪ ತುಪ್ಪವನ್ನು ಅವರ ಮೂಗಿಗೆ ಹಚ್ಚುತ್ತೇನೆ. ಮಕ್ಕಳು ಮಾಡಿದ ಊಟಕ್ಕೆಲ್ಲ ಮೂಗಿನ ತುಪ್ಪದ ಸುವಾಸನೆ ಬರುವುದರಿಂದ, ಮಾಡಿದ ಊಟವೆಲ್ಲ ತುಪ್ಪದಲ್ಲೇ ಮಾಡಿದ ಹಬ್ಬದಡಿಗೆ ತಿಂದ ಹಾಗೆ ಅನ್ನಿಸುತ್ತದೆ". ಇದನ್ನು ಇವರಿಗೆ ಚಿಕ್ಕ ವಯಸ್ಸಿನಿಂದಲೇ ಮಾಡಿಸಿರುವುದರಿಂದ ಅವರಿಗೆ ಇದು ಅಭ್ಯಾಸವಾಗಿ ಮಾಡಿದ ಹಬ್ಬದ ಊಟವೆಲ್ಲ ಬಹಳ ರುಚಿಯಾಗಿದೆ ಅನ್ನಿಸುತ್ತದೆ."

ಒಟ್ಟಿಗೆ ಆಡಿ ಬೆಳೆದ ಹುಡುಗರು ನಾವು ಈಗ ಸಾವಿರಾರು ಮೈಲುಗಳು ದೂರ ಆಗಿ, ನಮ್ಮದೇ ಆದ ಜೀವನ ನಡೆಸಿಕೊಂಡು ಬಂದಿದ್ದೇವೆ.

ಕಡು ಬಡತನ, ನೀಗದ ದುಸ್ಥಿತಿ, ದಿನ ನಿತ್ಯ ಉಪವಾಸ. ಇದೆಲ್ಲ ನಿಮಗೆ ಅರ್ಥವಾಗಲಾರದು. ನಿಮ್ಮ ಮುಖದಲ್ಲಿ ಶ್ರೀಮಂತ ತನ ತುಂಬಿ ತುಳುಕುತ್ತಿದೆ. ಈಗಲೂ ತುಪ್ಪ ನನಗೆ ಒಪ್ಪುವುದೇ ಇಲ್ಲ. ತಿಳಿ ಸಾರು, ಯಾವುದಾದರೇನು ಒಂದು ತರಕಾರಿಯ ಜೊತೆಗೆ ಬೇಳೆ ಹುಳಿ. ತಿಂಗಳಿಗೊಂದು ಸಲ ಯಾವುದಾದರೂ ಪಲ್ಯ. ಅನ್ನ ಮಾತ್ರ ರೇಶನ್ ಅಕ್ಕಿ ಅಮೇರಿಕೆಯಲ್ಲಿ ಬೇಕೆಂದರೂ ಸಿಗುವುದಿಲ್ಲ. ಕರಿದ ತಿಂಡಿ ಚಿಕ್ಕ ವಯಸ್ಸಿನಿಂದಲೂ ತಿನ್ನುವ ಅಭ್ಯಾಸವಿಲ್ಲ. ಆಗ ಬಡತನ. ಈಗ ಹಣದ ಪ್ರಶ್ನೆಯಿಲ್ಲದಿದ್ದರೂ, ಚಿಕ್ಕ ವಯಸ್ಸಿನಲ್ಲಿ ಇದ್ದ ನಾಲಿಗೆ ಕಿಂಚಿತ್ತೋ ಬದಲಾಗಿಲ್ಲ. ದೇಹ ಬೆಳೆದರೂ, ಜಿಹ್ವೆಗೆ ಮಾತ್ರ ಬದಲಾಗುವುದಿಲ್ಲ ಎಂಬ ಹಠ. ನಾನು ಮೊದಲಿನಂತೆ ಗುಂಡು ಗೋವಿ. ನನ್ನ ಮಾತೋಶ್ರೀಯವರು ನನಗೆ ದಾನ ಮಾಡಿರುವ ಜೀನ್ಸ್ ಜೊತೆಗೆ ಅವರು ಕಲಿಸಿಕೊಟ್ಟಿರುವ ಆಹಾರಾಭ್ಯಾಸ. ಬಡತನ ನಮಗೆ ಆಶೀರ್ವಾದವಾಗಿ ಹೋಯಿತು.

ತುಪ್ಪದ ಮೂಗಿನ ಗೆಳೆಯ ಕೂಡ ಚೆನ್ನಾಗಿದ್ದಾನೆ. ಅವರ ತಾಯಿ ಕೂಡ ಈ ವಯಸ್ಸಿನಲ್ಲೂ ಗಟ್ಟಿಮುಟ್ಟಾಗಿ ಮೊಮ್ಮಕ್ಕಳನ್ನು ಆಡಿಸಿ ಕೊಂಡಿದ್ದಾರೆ. ಈಗಲೂ ಮೊಮೊಮ್ಮಕ್ಕಳ ಮೂಗಿಗೆ ಆರೋಗ್ಯದ ಆಶೀರ್ವಾದ ಲೇಪನ ಹಚ್ಚುತ್ತಾರಂತೆ.

ಚಿನ್ನದ ತಟ್ಟೆಯಲ್ಲಿ ಹಾಲನ್ನದ ಗೋಪುರ ಮಾಡಿ, ಅದರೊಳಗೆ ದೊಡ್ಡ ಪಾತಿ ಮಾಡಿ ತುಪ್ಪದ ಸಾಗರವನ್ನು ಹರಿಸಿ ಕಬಳಿಸುತ್ತಿದ್ದ ನನ್ನ ಬಾಲ್ಯ ಸೇಹಿತನಿಗೆ ತಲೆಯೆಲ್ಲ ಬೋಳು. ದಿನ ಬೆಳಿಗ್ಗೆ ಇನ್ನಿಲ್ಲದ ಬಗೆ ಬಗೆಯ ಖಾಯಿಲೆ, ಗೂರಲು ಧ್ವನಿ. ನೋಡಿದರೆ ನನ್ನ ಅಜ್ಜನ ಹಾಗೆ ಕಾಣುತ್ತಾನಂತೆ.  ನನಗೆ ಅದು ಹೇಗೆ ಇನ್ನೂ ಗುಂಗರು ಕೂದಲು ದಟ್ಟವಾಗಿ ಬೆಳೆಯಿತ್ತಿದೆ ಎಂದು ಅವನಿಗೆ ಅರ್ಥವಾಗುತ್ತಿಲ್ಲ. ಅವನ ಅಣ್ಣ ತಮ್ಮಂದಿರೆಲ್ಲಾ,  ಅಕ್ಕ ತಂಗಿಯರೆಲ್ಲಾ ಯಮರಾಜನ ಹಿಂದೆ ಹೋಗಿಯಾಯಿತಂತೆ.

ಅಲ್ಲ ಅಲ್ಲ


ಅಲ್ಲ ಅಲ್ಲ
ಕೆ. ಆರ್. ಎಸ್. ಮೂರ್ತಿ


   ಅಲ್ಲ ಅಲ್ಲ;
ಅಲ್ಲಮನಲ್ಲ, ಕಲ್ಲೇಶನಲ್ಲ;
ಏಸು ಈಸೂ ಜೈಸಲಿಲ್ಲ;
ಹರಿ ಸರಿಯಲ್ಲ;
ಹರನೂ ತರವಲ್ಲ;
ಜಿನನು ಜಿತನಲ್ಲ;
ಬುಧ್ಧನೇನೂ ಗೆದ್ದವನಲ್ಲ.

ಎಲ್ಲ ಬಲ್ಲವ ಗೊಲ್ಲನಿರಲೇ ಇಲ್ಲ;
ರಾಮ, ರಾವಣರು ಮಹಾ ಬೇಡ ಕವಿಯ ಕಾವ್ಯ ಪ್ರಲಾಪ;
ಹಿರಣ್ಯ ಕಶುಪುವು ಇರಲಿಲ್ಲ;
ಬಾಲಕನ ಕರೆಗೆ ಹರಿಯು ಸಿಂಹವಾಗಿ ಧರೆಗೆ ಇಳಿಯಲಿಲ್ಲ;
ಬಲಿಯು ಎಲ್ಲೂ ಇರಲಿಲ್ಲ;
ಕುಳ್ಳ ವಾಮನನು ಜಗವೆಲ್ಲ ಪಡೆಯಲಿಲ್ಲ.

ಗಡ್ಡದ ಗುರುಗಳು ಬರಿಗೊಡ್ಡು;
ನುಣ್ಣ ತಲೆಯ ಬಣ್ಣದ ಬಟ್ಟೆಯ ಬಾಲಕನ
ವೇದಾಂತದಲಿ ನಂಬಿಕೆಯಿಲ್ಲ;
ಬಣ್ಣ ಬಣ್ಣದ ಲೇಪನವ,
ಚಿತ್ರ, ವಿಚಿತ್ರ ನಾಮವನೂ,
ಹಾಕಿ, ಹಾಡಿ, ಬೇಡಿ
ಚಿಟಿಕೆ ಚಪ್ಪಾಳೆ, ತಾಳವ
ಹೊಡೆಯುತ, ಕುಣಿಯುತ
ಜನ ಜಂಗುಳಿಯ ಮರಳುಮಾಡಿ,
ಕೊನೆಗೆ ನನ್ನಂತೆ, ನಿಮ್ಮಂತೆ, ಮಿಕ್ಕೆಲ್ಲರಂತೆ,
ಕೊನೆಯ ಉಸಿರನು ಬಿಟ್ಟು,
ಧರೆಯ ಬಸುರಿಗೆ ತಿರುಗಿದವರೆಲ್ಲ,
ಏನೂ ತಿಳಿದಿರಲಿಲ್ಲ.

ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲಿಯೂ ಇಲ್ಲ;
ಎಲ್ಲ ಬಲ್ಲವ ನಾನೊಬ್ಬನೆ ನಾಸ್ತಿಕ.

.
ಇಲ್ಲಿ, ಅಲ್ಲಿ
ಒಳಗಡೆಯಲ್ಲಿ, ಹೊರಗಡೆಯಲ್ಲಿ,
ಎಲ್ಲ ಅಣುವಿನಲ್ಲಿ, ಕಣ್ಣಿಗೆ ಎಟುಕದ ತಾಣದಲ್ಲಿ,
ಇರುವ, ಪೊರೆವ, ಕರೆದರೆ ಬರುವ,
ಹಾಡಿದರೆ ಓಡಿ ಓಡಿ ಬಂದು ಬಿಡುವ,
ಕಾಲಡಿಯಲಿ ತಲೆಯಿಟ್ಟರೆ, ಕೈ ನೀಡಿ ಕೊಡುವ,
ಮನತುಂಬಿದ ಗಾನಕ್ಕೆ ತಲೆತೂಗಿಸಿ ನಲಿವ,
ನಂಬಿದರೆ ಇಲ್ಲೂ, ಅಲ್ಲೂ ತಪ್ಪದೆಯೆ ಪೊರೆವ,
ನಮ್ಮ ದೇವರ ನೆರೆ ನಂಬಿದವ ನಾನೇ ಆಸ್ತಿಕ.

.
ಅದೂ ಅಲ್ಲ, ಇದೂ ಅಲ್ಲ, ಇನ್ನೊಂದೂ ಅಲ್ಲ
ಒಂದು, ಎರಡು, ಮೂರು....
ನೂರು, ಸಾವಿರ, ಲಕ್ಷ, ಕೋಟಿ, ಕೋಟಿ ಅನೇಕ;
ನೋಡಾಯ್ತು, ಕಂಡಾಯ್ತು, ಹುಡುಕಾಯ್ತು, ತಡಕಾಯ್ತು;
ಮಂಡಿಸಿದೆಲ್ಲವ ಖಂಡಿಸಿಯಾಯ್ತು;
ಮತ್ತೆ, ಮತ್ತೆ ಮನಬಿಚ್ಚಿ ಯೋಚಿಸಿಯಾಯ್ತು.

ಕೊನೆಗೆ ಅಲ್ಲ, ಅಲ್ಲ ನನ್ನ ಮಂತ್ರವಾಯ್ತು ನಾನಾರು?
ನಾನಾರು ಕೂಡ ಗೊತ್ತಿಲ್ಲವಾಯ್ತು.
ಅದೇನು? ಇದೇನು? ಎನಂದರೆ ಏನು?
ತಲೆಯನು ಕೆಡೆಸಿಕೊಳ್ಳುವ,
ಒಳ್ಳೆಯ ಕೆಲಸ ನನ್ನ ಬಲು ದೊಡ್ಡ ಆಸ್ತಿ.
ನಾನು ಆಸ್ತಿಕನಲ್ಲ; ನಾಸ್ತಿಕನಂತೂ ಅಲ್ಲವೇ ಅಲ್ಲ;
ಪ್ರಶ್ನಾಸ್ತಿಕನನ್ನಿ, ಅಗ್ನಾಸ್ತಿಕನನ್ನಿ.
ಸ್ಮಶಾನದಲ್ಲಿ ತಣ್ಣಗೆ, ಮಣ್ಣಾಗುವ ತನಕ,
ಹಣ್ಣಾಗದ, ಬಲು ಹೆಮ್ಮೆಯ, ಕಸಕಟ್ಟೆ ಕಾಯಿ ನಾನು.




PÉ. Dgï. J¸ï. ªÀÄÆwð

ªÀÄÆwðAiÀÄÄ ¹°PÁ£ï PÀtªÉAiÀİè zÉñÀzÁzÀåAvÀ CxÀðdAiÀÄ®Që÷äAiÀÄ£ÀÄß ªÀj¹gÀĪÀ PÀA¥É¤AiÉÆAzÀgÀ°è CzsÀåPÀë. ªÀÈwÛAiÀÄ°è «eÁߤ ªÀÄvÀÄÛ vÀAvÉÆæÃzÀåªÀÄzÀ ¥ÀæªÀÄÄSÁ¢üPÁjAiÀiÁzÀgÀÆ, ªÀÄÆwðAiÀÄ ¸ÀȶֲîvÉAiÀÄ ªÁå¥ÀPÀvÉ fêÀ£ÀzÀ J®è ªÀÄÄRUÀ¼À®Æè ¹¢üÞ¥ÀǪÀðPÀªÁV GzÀ㫹ªÉ. ¸Á»vÀå, ¸ÀAVÃvÀ, £ÁlPÀ, avÀæPÀ¯É, QæPÉmï ªÀÄvÀÄÛ ¨sÁµÀtPÀ¯ÉUÀ¼À°è C£ÉÃPÀ «zsÀUÀ¼À°è £ÀªÀå ¢PÀÄÌUÀ¼À£Éßà (¥ÁågÀqÉÊA ²¥sóïÖ) ¤«Äð¹gÀĪÀ «±Áé«ÄvÀæ ¸ÁzsÀ£É FUÁUÀ¯É ªÀÄÆwðAiÀÄ ªÀ±ÀzÀ°èzÀÝgÀÆ  E£ÀÆß C£ÉÃPÀ ¸ÁzsÀ£ÉUÀ¼À PÀAPÀt vÉÆnÖzÁÝgÉ. ªÀÄÆwðAiÀÄÄ ¸ÀĪÀiÁgÀÄ 5000 ¸ÀAVÃvÀ gÀZÀ£ÉUÀ¼À£ÀÄß MlÄÖ 15000 PÀÆÌ ºÉZÀÄÑ UÀAmÉUÀ¼ÁUÀĪÀ gÀZÀ£ÉUÀ¼À£ÀÄß ªÀiÁrzÁÝgÉ. EzÉ®èPÀÆÌ ¸ÀgÀ¸ÀéwzÉëAiÀÄ M®ªÉà PÁgÀt J£ÀÄߪÀÅzÀÄ EªÀgÀ PÀ¼ÀPÀ½.