ವೀಕು ಹಾರ್ಟು ರೀ ನನಗೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ಚೆಂದವಾಗಿರೋ ಹುಡ್ಗೀರ್ನ ನೋಡಿದ್ರೆ ಗುಂಡಿಗೆ ಹೊಡಕೊಳ್ಳುತ್ತೆ
ಡಬ ಡಬಾ ಅಂತ ತಾಳವಾಗಿ ತಾಳವಾದ್ಯ ಕಛೇರಿ ನಡೆಸುತ್ತೆ
ಅಬಲೆ ಅನ್ನೋ ಪದ ಅನ್ನುವುದರ ಬದಲು ತಬಲೇ ಅನ್ನುತ್ತೆ
ಯಾರು ಯಾರೋ ಡಾಕ್ಟ್ರುಗಳನ್ನೂ ಕೇಳೋಣ ಅಂತ ಹೋಗಿದ್ದೆ
ಅವರು ನನ್ನ ಹತ್ತಿರ ಬಂದು ನನ್ನ ಎದೆಯ ಮೇಲೆ ಕೈಯಿಟ್ಟಿದ್ದೇ
ತಕ್ಷಣ ಮತ್ತೆ ಸಂಗೀತ ಕಛೇರಿ ಪ್ರಾರಂಭ ಆಗಿ ಮೈಯೆಲ್ಲಾ ಝುಂ
ಸೂಕ್ಹ್ಮವಾಗಿ ಹೇಳಿದರು: ಹೆಂಗಸರು ಡಾಕ್ಟ್ರು ನಾನಲ್ವಾಂತ ಮೇಡಂ
ಒಬ್ಬರಿಂದ ಶುರೂ ಆಗಿ, ಊರಲ್ಲಿರೋ ಸುಂದರ ವೈದರನ್ನೆಲ್ಲ ನೋಡಿ
ಹಬ್ಬ ನನ್ನ ಎದೆಗೆ; ಅಬ್ಬಬ್ಬ! ಈಗಾಗ್ಲೇ ಎಲ್ಲಾ ತಾಳಗಳಲ್ಲೂ ಕುಣಿದಾಡಿ
ತುಂಬಾ ವೀಕಾಗಿ ಬಿಟ್ಟಿದೆ; ಬಹಳಾ ಸೂಕ್ಷ್ಮವಾಗಿ ಬಿಟ್ಟಿದೆ; ಗುಡಗುಟ್ಟುತ್ತೆ
ನಂಬಿದರೆ ನಂಬಿ, ಬಿಟ್ಟರೆ ಬಿಡಿ; ವೀಕು ಹಾರ್ಟು ಭಾಳ ಒಳ್ಳೇದು ಅನ್ನಿಸುತ್ತೆ