Saturday, May 5, 2012

ನನ್ನ ಕವನಕ್ಕೆ ಹಿನ್ನೆಲೆ: ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ


ನನ್ನ ಕವನಕ್ಕೆ ಹಿನ್ನೆಲೆ: ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ

ವಿಪ್ರ ಸ್ನೇಹಿತರಿಗೆ: (ನಾನು  "ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ" ಎಂಬ ಕವನವನ್ನು ಬರೆದದ್ದಕ್ಕೆ ಸಿಲಿಕಾನ್ ಕಣಿವೆಯ ವಿಪ್ರ ಮಹಾ ಸಭೆಯವರು ವಿವರಣೆಯನ್ನು, ಅಂತರಾರ್ಥವನ್ನು ಕೇಳಿದರು. ಅದಕ್ಕೆ ನನ್ನ ಉತ್ತರವಿದು)

ಕವನವು ಇಲ್ಲಿದೆ:
http://kannada.oneindia.in/nri/poem/

ನನ್ನ ಕವನಕ್ಕೆ ಹಿನ್ನೆಲೆ: ಒಂಟೆಯ ಹಾಲಿನ ಮಜ್ಜಿಗೆ ಹುಳಿ, ಜೊತೆಗೆ ಅಂಬೊಡೆ. ಪಾಯಸ

ಎಲ್ಲರಿಗೂ ಗೊತ್ತಿರುವಂತೆ, ಅನೇಕ ಬ್ರಾಹ್ಮಣರನ್ನು ಬಲವಂತವಾಗಿ ಮುಸಲ್ಮಾನರು ತಾವು ಆಳುವಾಗ ತಮ್ಮ ಮತಕ್ಕೆ ಪರಿವರ್ತಿಸಿದರು. ಮತವು ಬದಲಾದರೂ ಮತಿಯಲ್ಲಿನ ಮಠವು ಪೂರ್ತಿಯಾಗಿ ಬದಲಾಗದೆ ಇರಬಹುದು. ರಕ್ತಗತವಾದ ಜಠರದ ಗುಟ್ಟು ಹಾಗೆಯೇ ಉಳಿದು ಕೊಂಡಿದ್ದು, ಮತಾಂತರಿಸಿದರೂ ಮಜ್ಜಿಗೆ ಹುಳಿ, ಅಂಬೊಡೆ. ಪಾಯಸ ಇತ್ಯಾದಿ ಸಂಪ್ರದಾಯಗಳೂ ಭದ್ರವಾಗಿ ಉಳಿದುಕೊಂಡಿರಬಹುದು. ಸಸ್ಯಾಹಾರ ಆಹಾರ ವ್ರತವೂ ಭದ್ರವಾಗಿಯೇ ನೆಲಸಿರಬಹುದು.

ಗೃಹಿಣಿಯು ಬುರುಕವನ್ನು ಹಾಕಿಕೊಂಡಿದ್ದರೂ, ಅವಳ ಬ್ರಾಹ್ಮಣಿಕೆಯ ಸೌಂದರ್ಯವು ಭದ್ರ; ಬಾಲಕನಿಗೂ ಶ್ಯಾವಿಗೆ ಪಾಯಸದ ರುಚಿ ಅಚ್ಚುಮೆಚ್ಚು. ಗೃಹಸ್ಥನಿಗಂತೂ ಬ್ರಾಹ್ಮಣರ ಬಗ್ಗೆ ಅಕ್ಕರೆಯಿಂದ ನಾವು ನಮ್ಮನ್ನೇ ಛೇಡಿಸಿಕೊಳ್ಳುವ ಹಾಗೆ, ಹಸಿವೆಯನ್ನು ತಡೆದುಕೊಳ್ಳಲು ಆಗದಿರಬಹುದು. ಏಕೆಂದರೆ, ಅವನು ರಕ್ತಗತವಾಗಿ ಬ್ರಾಹ್ಮಣನೆ! ಆದ್ದರಿಂದ ಅವನು, ಹಸಿದ ಬ್ರಾಹ್ಮಣನಂತೆ ಭಾರದ ಹೆಜ್ಜೆಯನ್ನು ಭರ ಭರದಿ ಹಾಕಿಕೊಂಡು ಬಂದು ಮಜ್ಜಿಗೆ ಹುಳಿ, ಅಂಬೊಡೆಗಳಿಗೆ ಹಾತೊರೆಯುತ್ತಿದ್ದಾನೆ.

ನೀವೆಲ್ಲರೂ ನಿಮ್ಮ ಬ್ರಾಹ್ಮಣಿಕೆಯನ್ನು ಊಟದಲ್ಲಾದರೂ ಉಳಿಸಿಕೊಂಡಿರಬಹುದು. ನಿಮ್ಮ ನಾಲಿಗೆಗಳು ಮಾಂಸಾಹಾರಕ್ಕೆ ಬಲಿ ಬಿದ್ದಿಲ್ಲವೆಂದೂ, ನಿಮ್ಮ ತುಟಿಗಳಿಗೆ ಬೀಡಿ, ಸಿಗರೇಟು ಸೊಂಕಿಲ್ಲವೆಂದು, ನಿಮ್ಮ ಬೆಳ್ಳಿ ಬಟ್ಟಲಿಗೆ ಮಾದಕ ಪಾನೀಯಗಳು ಸುರಿದಿಲ್ಲವೆಂದೂ, ನೀವೆಲ್ಲರೂ ಅತೀವ್ರ ಭಕ್ತಿ ಪೂರ್ವಕವಾಗಿ ಗಣ ಹೋಮವನ್ನು ನಡೆಸಿದಾಗಿನ ಛಾಯಾಚಿತ್ರ ಹಾಗೂ ಚಲನ ಚಿತ್ರಗಳನ್ನು ನೋಡಿ, ಪ್ರಧಾನವಾಗಿ ವಿಪ್ರತೆಯ ಅಲಂಕಾರವಾದ ಯಜ್ಞೋಪವೀತಗಳನ್ನೂ ನೋಡಿ, ನಿಮ್ಮ ಹಣೆಯನ್ನು ಅಲಂಕರಿಸಿದ ವಿವಿಧ ಪವಿತ್ರ ಪೂರ್ಣ ನಾಮ, ಮುದ್ರೆ, ವಿಭೂತಿ, ಚಂದನ ಇತ್ಯಾದಿಗಳನ್ನೂ ನೋಡಿ ನಂಬಿದ್ದೇನೆ.

ಅಕಸ್ಮಾತ್ ಆಗಿಯೂ ನನ್ನ ಅನಿಸಿಕೆಗಳು, ನಿಮ್ಮೆಲ್ಲರ ಬಗ್ಗೆ ನನ್ನ ಅತೀವ್ರ ಗೌರವವು ಛಿದ್ರವಾಗದೆಯೇ ಇರಲೆಂದು ಆಶಿಸುತ್ತೇನೆ. ನನ್ನ ಅಭಿಪ್ರಾಯಗಳು ತಪ್ಪಿದ್ದಲ್ಲಿ ವಿಪ್ರೋತ್ತಮರಾದ ತಾವೆಲ್ಲಾ ಆಶೀರ್ವದಿಸಿ ಕ್ಷಮಿಸಿ

ಗೌರವಿತ ಪುರೋಹಿತರಾದ ಮಕೋಡು  ವೆಂಕಟೇಶ ಭಟ್ಟರು ನಿಮ್ಮ ವಿಪ್ರ ಸಂಪ್ರದಾಯವನ್ನು, ನಿಮ್ಮ ಮಕ್ಕಳ ಮಡಿ ವಿಪ್ರತೆಯನ್ನೂ ಉಳಿಸಿಕೊಡಲಿ ಎಂಬುದೇ ನನ್ನ ಆಶಯ.

ಮೂರ್ತಿ

Friday, April 13, 2012

ಶಾಪ ಗ್ರಸ್ತನು ನಾನು


ಶಾಪ ಗ್ರಸ್ತನು ನಾನು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬುಧ್ಧಿಯಿಲ್ಲದ ಜೀವಿ
ಗುದ್ದಿ, ಗುದ್ದಿ ಹೊಡೆದರೆ,
ಬುರುಡೆ ಟೊಳ್, ಟೊಳ್ ಎಂದು
ನನ್ನ ಪೆದ್ದತನ ಡಂಗುರ ಮಾಡಿ ಬಿಟ್ಟೀತು

ನಾನು ಅತಿ ಸಾಮಾನ್ಯ ಮಾನವ

ಬಾಯಿ ಬಿಟ್ಟರೆ ಸಾಕು,
ಕಾಗೆಗಳೆಲ್ಲಾ ದನಿ ಕೂಡಿಸಿ
ಕರ್ಕಶ ಕಛೇರಿ ಆರಂಬಿಸಿ
ನಿಮ್ಮಂತಹ ಕೋಗಿಲೆಗಳಿಗೆ 
ಕಿವಿ ನೋವು ಕೊಟ್ಟಿ ಬಿಟ್ಟೀತು

ಆಗಲೇ ಹೇಳಿದ ಶ್ರೀಮದ್ ಸಾಮಾನ್ಯ ನಾನು

ಕನ್ನಡಿಯ ಮುಂದೆ ಹಿಗ್ಗಿ ನಿಂತರೆ
ಗೂಬೆಗಳೂ ಅಣಗಿಸಿ ಛೀಮಾರಿ
ಮಾರಮ್ಮನ ಕೆತ್ತಿದ ಅಲ್ಪ ಶಿಲ್ಪಿಗೆ
ನಾನೇ ಸ್ಫೂರ್ತಿಯಂತೆ ನನ್ನ ನಂಬಿ

ಕುರೂಪ ರಾಜ್ಯ ಚಕ್ರಾಧಿಪತಿಯು ನಾನು

ಅದೇಕೆ ಎಂತೆಂಥಾ ರೂಪಸಿಯರೆಲ್ಲಾ
ತದೇಕ ಚಿತ್ತದಿಂದ ನನ್ನ ಹಿಂಬಾಲಿಸಿ
ನನ್ನ ಬಾಲದ ಮೇಲೆ ಅತಿ ಆಸೆಯಿಂದ
ಕೈಹಾಕುವರು ಎನ್ನುವುದು ನಿಮಗೆ ಗೊತ್ತೇ?

ಕಾಮ ಕೋಟಿಗೆ ಹೆಸರಾದವ ನಾನು ಎಂದೇ ಇರಬೇಕು


Monday, April 9, 2012

ಸಾವಿರ ಅವತಾರದ ಭಾರ ನನ್ನ ತಲೆಯ ಮೇಲೆ

ಸಾವಿರ ಅವತಾರದ ಭಾರ ನನ್ನ ತಲೆಯ ಮೇಲೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಎಲೆಲೆ ಚಿಲ್ಲರೆಯೋ ನಾರಾಯಣ! ನೀನೆತ್ತಿದ್ದು ಹತ್ತೇ ಅವತಾರ 
ಸಾಕು ಮಾಡೆಲೋ ಮಹಾವಿಷ್ಣು ನಿನ್ನ ಅವತಾರದ ಕಟಾ ರೋಪು

ಹತ್ತು ಸಾವಿರ ತಲೆಯ ಕಲಿಯೋ ನಾನು ಹೆಮ್ಮೆಯ     ಕನ್ನಡ  ಕವಿ
ಹೊತ್ತಿಗೊಂದು ಎತ್ತುವುದು ಅವತಾರವೋ ನನ್ನದೊಂದು ಟೀವಿ

ಹೊತ್ತಾರೆ ಒಂದು ಭಾವ; ಹತ್ತು ನಿಮಿಷದ ಮೇಲೆ ಬೇರೆ
ಕತ್ತಲಾಗುವುದರೊಳಗೆ ನಾಟಕ ಬದಲಾಗಿ ಬದಲು ನುಡಿಯೇ

ಇಂದಿನದು ಒಂದಾದರೆ, ಮುಂದೆ ಏನು ಆಗುವೇನೋ ಹೇಳಬಲ್ಲ
ಬೊಮ್ಮನು ಇನ್ನೂ ಹುಟ್ಟಿ ಬಂದೇ ಇಲ್ಲವೋ; ಬಲ್ಲವನೋಬ್ಬನೇ ಕಾಲ.

ಬರೆಯುವನು ನಾನಲ್ಲ; ಬರೆಸುವನೂ ನಾನಲ್ಲ; ಬೆರೆಸಿ ಬರೆಯುವುದಿಲ್ಲ
ಖರೆ ಮಾತ್ರವಿದು ಲೇಖನಿಯೂ ನನದಲ್ಲ; ಕವನಕ್ಕೆ ಅಪ್ಪ, ಅಮ್ಮನಿಲ್ಲ 

ಆಗಿದ್ದಿದ್ದರೆ........


ಆಗಿದ್ದಿದ್ದರೆ........
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ 

ಪುಟ್ಟಪ್ಪನಂತಹ ರಸ ಋಷಿ ನನ್ನ ಅಪ್ಪನಿದಿದ್ದಿದ್ದರೆ, ನಾನೂ ಮಹಾ ತೇಜಸ್ವಿಯಾಗಿರುತ್ತಿದ್ದೆ
ಬೇಂದ್ರೆಯ ಗುರುಕುಲದ  ಗರಡಿ ಮನೆಯಲ್ಲಿ ಬೆವರು ಸುರಿಸಿದ್ದಿದ್ದರೆ ವೇದಾಂತಿ ಕವಿಯಾಗುತ್ತಿದ್ದೆ

ಕಾರಂತರಂತಹ ವಿಶಾಲ ಕಡಲಿನ ತೀರದಲ್ಲಿ ಅವರ ಧೀಮಂತತೆಯ ಅಲೆಗಳು ರಪ್ಪನೆ ಬಡಿದಿದ್ದರೆ 
ಕಾರ್ನಾಡ, ಕಂಬಾರರ ಒಡನಾಡಿ ರಂಗದ ಮೇಲೆ ಕುಣಿದಿದ್ದರೆ, ಸಾಹಸಿ ಸಾಹಿತಿಯೇ ಆಗುತ್ತಿದೆ ಖರೆ

ಬೇಡನಾಗಿ ಕಾಡಿನಲ್ಲಿ ಹುಟ್ಟಿದ್ದರೂ, ತಪಸ್ಸಿನ ಫಲದಿಂದ ಹುತ್ತದಿಂದ ಮತ್ತೆ ಹುಟ್ಟಿಬಂದು ಕವಿಯಾಗುತ್ತಿದ್ದೆ 
ಖಯಾಲಿ ಋಷಿಯೊಬ್ಬ ಅಪ್ಪನಾಗಿ, ಮೀನುಗಾರ್ತಿ ಸುಂದರಿ ಅಮ್ಮನಾಗಿದ್ದಿದ್ದರೆ ವೇದ ವ್ಯಾಸನ ಮೀರುತ್ತಿದ್ದೆ

Sunday, April 8, 2012

Dr. KRS Murthy's Secrets to Invention, Innovation and Paradigm Shifts

Dr. KRS Murthy's Secrets to Invention, Innovation and Paradigm Shifts

Here are my secrets to Discoveries, Inventions, Innovation and
Paradigm Shifts (DIIPS)

If there are any policies, processes and procedures (The 3Ps) for
DIIPS in your organization, ignore, and destroy.

If there is any type of organizational culture and methods for DIIPS,
disregard it, untie everyone from all of it.

Write down every idea for DIIPS that come to your mind, very
diligently and with dedication, then burn all your notes, do not
repent, and most importantly never think of those ideas again. if it
is on a computer, erase it mercilessly. Before you destroy or erase,
let everyone know of your idea. Watch and do not be surprised if
everyone copies your idea or slightly modify them and call them their
one. People copy or steal, as they are not inventive, rarely have
their own ideas and love to call your babies as theirs as most around
you are creativity starved and innovation impotent. Learn to love all
those who copy, steal, covet and publicly discredit you, as they are
your BEST FRIENDS.

If the same or similar ideas that you already generated, creep into
your subconscious and behave like a new "avatar", ignore them again.
Make sure to publicize all those new avatars and do not be surprised
if people around you copy it again and call them their own.

Finally, if you come up with an idea, that none around you copy, and
may even challenge as a stupid idea that will never work, you may have
hit on a potential breakthrough.

Ignore all assumptions, axioms, fundamentals and what most people call
as "ultimate truth", to enter into the beautiful pasture of paradigm
shifts!

You are welcome to read about me in the links below my signature line.
--
Dr. KRS Murthy - You may read about me in the links below:
drkrsmurthy@yahoo.comicubed.murthy@gmail.com
My Skype ID is drkrsmurthy             (408)-464-3333       
CEO, I Cubed
http://www.icainstitute.org/webinar/krs_webinar.html
http://about.me/srimurthy
http://www.icainstitute.org/webinar.html
http://about.me/drkrsmurthy
http://blogs.forbes.com/people/drkrsmurthy/

Tuesday, March 27, 2012

ಸಾಹಿತ್ಯ ಪ್ರಕಾರಗಳ ಬಗ್ಗೆ - ಕಿರು ಹರಟೆ

ಸಾಹಿತ್ಯ ಪ್ರಕಾರಗಳ ಬಗ್ಗೆ - ಕಿರು ಹರಟೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಕಥೆಯನ್ನೋ, ಕವನವನ್ನೋ, ಕಾದಂಬರಿಯನ್ನೋ, ನಾಟಕವನ್ನೋ ಸುಮ್ಮನೆ ಓದುವ ಸದ್ಪ್ರವ್ರುತ್ತಿಯೇ ನನಗೆ ಇಲ್ಲ. ನನ್ನ ಅಜ್ಜಿ ಆಗಿನ ಕಾಲದಲ್ಲಿ ದಿನಸಿ ಅಂಗಡಿಯಿಂದ ತಂದ  ಅಕ್ಕಿಯನ್ನು ಒಂದು ಮೊರದೊಳಗೆ ಹಾಕಿಕೊಂಡು, ಮತ್ತೆ, ಮತ್ತೆ ಕೇರುತ್ತಾ, ಕಣ್ಣಲ್ಲಿ ಕಣ್ಣಿಟ್ಟು ಕಲ್ಲು, ಮಣ್ಣು ಹೆಂಟೆ, ಹುಲ್ಲು ಬೀಜಗಳನ್ನು ಹುಡುಕಿ, ಹೆಕ್ಕಿ, ಬಿಸಾಡುತ್ತಿದ್ದರ ಸ್ವಭಾವ ನನಗೂ ಸಾಹಿತ್ಯ ಕ್ಷೇತ್ರದಲ್ಲಿ ಬಂದು ಬಿಟ್ಟಿರಬೇಕು. ಅದು ನನ್ನ ತಪ್ಪಲ್ಲ; ಜನ್ಮ ಬುಧ್ಧಿಯೇ ಇರಬೇಕು.

ಯಾವುದೇ ಸಾಹಿತ್ಯ ಪ್ರಕಾರವನ್ನು ರಚಿಸ ಬೇಕಾದರೂ, ಅದರಲ್ಲಿ ಕಲೆಯಿರಬೇಕು; ಕಲೆಯಿದ್ದರೆ ಮಾತ್ರ ಅದಕ್ಕೆ ಕಳೆಯು ತುಂಬಿಕೊಳ್ಳುತ್ತದೆ; ಇಲ್ಲದಿದ್ದರೆ, ಜೀವಾಳವೇ ಇಲ್ಲವೇನೋ ಎಂಬಂತೆ ಸತ್ತ ಹೆಣವಾಗಿ ಬಿಟ್ಟಿರುತ್ತದೆ. ಓ ! ನಾನೇಕೆ "ಸತ್ತ"  ಹೆಣ ಎಂದು ಬಿಟ್ಟೆ? ಅಂತಹ  ಸಾಹಿತ್ಯಕ್ಕೆ ಏನು ಮಾಡಿದರೂ ಜೀವವನ್ನು ತುಂಬಲಾಗದು ಎಂದು ಹೇಳಿ ತಪ್ಪಿಸಿಕೊಳ್ಳುತ್ತೇನೆ!

ಮಾತ್ರೆ, ಗುಣ, ಅನೇಕ ತರಹದ  ಪ್ರಾಸದ ತ್ರಾಸ  ಇತ್ಯಾದಿಗಳನ್ನು ತುರುಕೀ, ತುರುಕೀ ಕವನ ಬರೆಯುವವರು ನಿಮಗೆ ಗೊತ್ತಿರಬೇಕು. ಅವರ ಕವನಗಳು ಸುಲಭವಾಗಿ ಹರಿಯುವುದಿಲ್ಲ. ಅಂತಹವರ  ಕವನಗಳನ್ನು ಓದ ಬೇಕಾದರೆ, ಹೊಸಗನ್ನಡ, ಹಳೆಗನ್ನಡ, ಹಳೆಸಿ ವಾಸನೆ ಸೂಸುತ್ತಿರುವ ಕನ್ನಡಗಳ  ಶಬ್ದಕೋಶವನ್ನು ನಿಮ್ಮ ಪಕ್ಕದಲ್ಲಿಟ್ಟು ಕೊಳ್ಳಬೇಕು. ಯಾಕೆ ಗೊತ್ತೇ? ಇಂತಹ ಕವಿಗಳು ತಮ್ಮ  ಕವನವನ್ನು ರಚಿಸುವಾಗ (ಅಥವಾ "ಬರೆಯುವಾಗ" ಎನ್ನೋಣವೇ?) ತಮ್ಮ ಪಕ್ಕದಲ್ಲಿ ಒಂದು ಶಬ್ದಕೋಶವನ್ನು ಇಟ್ಟುಕೊಂಡೇ ಬರೆದಿರಬೇಕು. ಇವರು ಬರೆಯುವಾಗ, ಇವರು ಬಲವಂತವಾಗಿ ಹಿಡಿದು ಆ ಪದಗಳನ್ನು ತಮ್ಮ ಪದ್ಯಗಳಲ್ಲಿ ತುರುಕುವಾಗ, ಆ ಪದಗಳು ಗೊಳೋ ಎಂದು ಕಣ್ಣೀರು ಬಿಟ್ಟಿರಬೇಕು.  ಆ ಕಣ್ಣೀರಿನ ಕರೆಯು ಕಾಗದದ ಮೇಲೆಲ್ಲಾ ನಿಮಗೆ ಕಂಡು ಬಂದೇ ಬರುತ್ತದೆ. ಕೆಲವರ ಪದ್ಯಗಳಲ್ಲಿ ಅರ್ಥವಿಲ್ಲ  - ಪರ್ಥವಿಲ್ಲ. ಮತ್ತೆ ಕೆಲವರು, ಬೇರೆಯವರ ಕವನವನ್ನು ಕಾಪಿ ಹೊಡೆದು, ತಮ್ಮ ಹೆಸರಿನಲ್ಲಿ ಪ್ರಕಟಿಸಿ ಬಿಡುತ್ತಾರೆ. 

ಸಣ್ಣ ಕಥೆಗಾರರೂ ಅಂತೆಯೇ. ಕೆಲವರ ಕಥೆಗಳು ಎಲ್ಲೋ, ಹೇಗೋ, ಪ್ರಾರಂಭವಾಗಿ, ಎಲ್ಲೆಲ್ಲಿಯೋ ಗೊತ್ತು ಗುರಿಯಿಲ್ಲದ ಅಲೆಮಾರಿಯಂತೆ ಕೆಲವೊಮ್ಮೆ ಕುಂಟಿ, ಇದ್ದಕ್ಕಿದಂತೆ ದೌಡಾಯಿಸಿ, ಎಲ್ಲೆಲ್ಲೋ ಡಿಕ್ಕಿ ಹೊಡೆದು, ಗಬಕ್ಕನೆ ಮುಗಿದು ಬಿಡುತ್ತದೆ. ಪಾತ್ರಗಳೆಲ್ಲಾ ಅನಾಥರಾಗಿ, ಓದುಗರನ್ನು ಸೇರಿದಾಗ ಭಿಕ್ಷೆ ಬೇಡಬೇಕು. ಲಂಚವನ್ನು ಕೊಟ್ಟರೂ ಓದುಗರು ಓದಲು ಆಗುವುದಿಲ್ಲ. 

ಕಾದಂಬರಿಯನ್ನು ಸಣ್ಣ ಕಥೆಗಳ ದೊಡ್ಡ ಅಕ್ಕ ಎಂದೇ ತಿಳಿದಿರುವವರು ಅನೇಕ ಸಾಹಿತಿಗಳು, ವಿಮರ್ಷಕಾರರು ನನಗೇ ಗೊತ್ತು. ಕಥೆಯನ್ನು ಬೆಳೆಸಿಕೊಂಡು ಹೋದರೆ ಅದೇ ಕಾದಂಬರಿಯಾಗುತ್ತದೆ ಎಂಬ ಕುರುಡು ನಂಬಿಕೆ ಹಲವರದು. ಪತ್ತೇದಾರಿ ಕಾದಂಬರಿಗಳನ್ನು ನೀವೂ ಓದಿರಬೇಕು. ಪೋಲಿ ಕಾದಂಬರಿಗಳನ್ನು ನಿಮ್ಮಂತಹ ಸಭ್ಯಸ್ತರು ಓದಿದ್ದೀರಿ ಎಂದು ಯಾರಿಗೂ ಹೇಳಬೇಡಿ; ಅದು, ನನ್ನ - ನಿಮ್ಮ ಗುಟ್ಟು. ಪೋಲಿ ಕಾದಂಬರಿಗಳಲ್ಲಿ ಆಗಾಗ, ಅಂದರೆ ಹತ್ತು ಪುಟದೊಳಗೆ ಐದಾದರೂ "ಸ್ವಾರಸ್ಯ ಪ್ರಸಂಗಗಳು" ಇಲ್ಲದಿದ್ದರೆ, ಅಂತಹ ಕಾದಂಬರಿಗಳನ್ನು ಯಾರೂ ಓದುವುದಿಲ್ಲ. ಪೋಲಿಯ ವಿವರಗಳು ಇಲ್ಲದ ಪುಟಗಳನ್ನು ಅತಿ ಬೇಗ ತಿರುವು ಹಾಕಿಬಿಡುತ್ತಾರೆ.

ನಾಟಕಗಳನ್ನು ನೀವು ನೋಡಿರಬೇಕು. ಅವನ್ನು ಓದುವವರು ಬಹಳ ಕಡಿಮೆ. ನಾಟಕವನ್ನು ಬರೆಯುವುದೇ ಅವನ್ನು ಆಡಿದಾಗ ನೋಡಲಿಕ್ಕೆಂದೇ ಬರೆಯುವುದು ಎಂಬ ಗಟ್ಟಿ ನಂಬಿಕೆ ಬಹಳ ಜನಗಳಿಗೆ ಅಲ್ಲವೇ? ನಾಟಕವನ್ನು ಓದಿದರೆ ನಿಮ್ಮ ಕಲ್ಪನಾ ಶಕ್ತಿಗೆ ತಕ್ಕಂತೆ ನಿಮ್ಮ ತಲೆಯ ರಂಗದಲ್ಲಿ ಪಾತ್ರಗಳೂ, ಸಂದರ್ಭಗಳೂ ಆಡುತ್ತವೆ. ಆದರೆ, ರಂಗದ ಮೇಲೆ ಆಡಿದ ನಾಟಕದಲ್ಲಿ, ನಾಟಕ ತಂಡದವರು ನಿಮಗೆ ತೋರಿಸಿದಂತೆಯೇ ಕಾಣುವುದು ಸಹಜ. ನಾಟಕಗಳ ಬಗ್ಗೆಯೇ ಒಂದು ಪ್ರತ್ಯೇಕ ಲೇಖನವನ್ನು ಬರೆಯೋಣ ಎಂದು ಕೊಂಡಿದ್ದೇನೆ.

ಸಾಹಿತ್ಯ ಪ್ರಕಾರಗಳು ಅನೇಕವಾದ್ದರಿಂದ, ಒಂದೊದ್ದಕ್ಕೂ ಪ್ರತ್ಯೇಕವಾಗಿ ಬರೆಯುವ ಆಸೆಯಿದೆ. ಆದರೆ, ವಿಮರ್ಶೆಯನ್ನು ಮಾಡುವವರು ಎಲ್ಲಾ ಓದುಗರೂ ಅಲ್ಲವೇ!

Wednesday, March 21, 2012

ಯುಗಾದಿಯ ಹಂಸ ಸಂದೇಶ


ಯುಗಾದಿಯ ಹಂಸ ಸಂದೇಶ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಹೊಸ ನಿಮಿಷಕೆ ರಸ ನಿಮಿಷಕೆ ಕಾತುರದಿ ಕಾಯುವೆವು
ರಭಸದಲಿ ಬಂದು ಆತುರದಿ ಜಾರಿ ಮಾಯವಾಗುವುವು

ಬೆಳಗು ಇಳೆಯ ದಿಗಂತದಿ ಪ್ರತಿ ನಿಮಿಷ ಹರಿವುದು
ಬೆಳಕು ಹರಿಯುವ ದಿನ ನಿತ್ಯದ ವ್ರತಕೆ ಬೆರಗುವೆವು

ಹೊಸತು ಹಳೆಯದಾದ ಮೇಲೂ ಹಳಸಿ ಹೋಗದು
ಬೆಸೆದು ಮಾಸಿ ಹೋಗದಂತೆ ಬುರುಡೆಯಲಿ ಅಡಗಿದ್ದು

ಹೊಸತೆಂದರೇನು? ವರುಷ ಮತ್ತೆ ಮತ್ತೆ ಬರುವುದೇನು?
ಹೊಸತೆಲ್ಲಾ ನವ ಹರುಷ ಮಾತ್ರವೇ ಅಲ್ಲದೆ ಬೇರೇನು?

ಈಗ ತಾನೇ ಹುಟ್ಟಿದ ಕಂದನ ಸಂತಸದಂತೆಯೇ ಚೇತನವು
ಯುಗಾದಿ ಮತ್ತೊಮ್ಮೆ ಬಂದರೂ ಅಲ್ಲವೇನು ನವ ಹರುಷವು

ಹುರುಪು ಚಿಗುರುವ ಮೊಳಕೆಯಲ್ಲಿದೆ; ಆಗಸದ ಮೋಡದಲ್ಲಿದೆ 
ಮಾರುತನು ಬೀಸುವಾಗ ತರುವ ಮಲ್ಲಿಗೆಯ ಸುವಾಸನೆಯಲ್ಲಿದೆ

ಹೋದ ವರುಷದ ಯುಗಾದಿಯು ತಂದ ಆಶಯಗಳೆಲ್ಲ ನಿಜವಾಗಿದೆ
ಇದೋ ಹೊಸ ವರುಷವು ಇನ್ನೊಂದು ಹಂಸ ಸಂದೇಶವ ತಂದಿದೆ