Wednesday, August 8, 2012

ಆದರದ ಕರೆ, ಬಲು ದೂರದ ಕರೆ


ಆದರದ ಕರೆ, ಬಲು ದೂರದ ಕರೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಿಮ್ಮ ತಲೆ ಮೇಲೆ, 
ಬಲು ದೂರದಲಿ
ಎತ್ತಲೋ ಇರುವ ತಾರೆಯನು
ಸುತ್ತುತಿರುವ ಪೃಥ್ವಿಯಂತದೆಯೇ 
ಗುಂಡು ಗುಂಡಾಗಿ ಇದೆಯಂತೆ 
ಅಲ್ಲಿಂದ ಸಂಕೇತದಲಿ ಕರೆಯುತಿಹರು 
"ನಾವೂ, ನೀವೂ ಒಂದೇ ತರಹ"
"ನಾವೆಲ್ಲಾ ನಿಮ್ಮ ಗೊತ್ರದಲ್ಲಿಯೇ ಹುಟ್ಟಿ"
"ಸಂಕೆತಾಕ್ಷತೆ ಚುಮುಕಿಸುತಿಹೆವು"

"ಪನ್ನೀರ ದಾನಿ ಕಾದಿದೆ, ಗುಲಾಬಿ,
ಜಿಲೇಬಿ, ಲಾಡು, ಮೈಸೂರು ಪಾಕೂ
ನಿಮಗೆಂದೇ ಮಾಡಿಹೆವು"

"ಬರಬೇಕು, ಬರಲೇ ಬೇಕು ಬ್ರಾಹ್ಮಣರೆಲ್ಲಾ
ಸಂಸಾರ ಸಮೇತ, ಆತುರದಲಿ ಅತಿಥಿಗಳೆಲ್ಲ
ದಯ ಮಾಡಿಸ ಬೇಕು"

"ಗೊತ್ತಿರ ಬೇಕಲ್ಲವೇ ನಿಮಗೆಲ್ಲಾ
ನಾವು ಸಪ್ತರ್ಷಿ ಮಂಡಲದ ನಿಮ್ಮ ಪೂರ್ವಿಕರು"

ಮತ್ತೆ ಮತ್ತೆ ಹುಟ್ಟಿ ಬರುವ ನೀನೋ


ಮತ್ತೆ ಮತ್ತೆ ಹುಟ್ಟಿ ಬರುವ ನೀನೋ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಮುಗುಳು ನಗೆಯಲಿ, ಮುರಳೀಧರ ಬಾರೋ 
ಕಂಗಳಿಗೆ ಮಂಗಳ ಬೆಳಕಿನಾರತಿಯ ತಾರೋ

ಕಂದರೆಲ್ಲರೂ ಮನೋಹರ ಸುಂದರ ರೂಪ ತಾಳಿ
ಕಂಡವರ ಗುಂಡಿಗೆಯಲಿ ಬಿಂಬ ನಿನ್ನದೇ ಕಾಣಲಿ

ಹೊಟ್ಟೆಯಲಿ ನವಮಾಸ ಹೊತ್ತ ಎಲ್ಲಾ ದೇವಕಿಯರು
ಪುಟ್ಟ ಕೂಸನು ಸೊಂಟದಲಿ ಇಟ್ಟಾಗ ನೀನೇ ತೋರು

ನಿತ್ಯ ಅವತಾರನು ಸಂತರ ಮತಿಯಲಿ ಅಲ್ಲವೇನೋ?
ಮತ್ತೆ, ಮತ್ತೆ ಮನೆಮನೆಯಲೂ ಹುಟ್ಟಿ ಬರುವ ನೀನೋ

ನಮಗೇಕೆ ಬೇಕು ಚಿನ್ನ?

ನಮಗೇಕೆ ಬೇಕು ಚಿನ್ನ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಮೆರಿಕಾಗೆ ಹೋಗಲಿ, ಬ್ರಿಟಿಷರಿಗೆ ಕೊಡಲಿ
ಚೈನಾಗೆ ಎಲ್ಲರಿಗಿಂತಾ ಅತಿ ಹೆಚ್ಚು ಚಿನ್ನ

ನಮಗೆ ಸಾಕಷ್ಟು ಇದೆಯಲ್ಲಾ ತೆಂಗಿನ ಚಿಪ್ಪು
ನಮಗಿಂತಾ ಮೀರಿದವರು ಕೊಬ್ಬಿನಲಿ ಯಾರೂ

ಒಲಂಪಿಕ್ಸ್ ಪಂದ್ಯಗಳಲ್ಲಿ ಸರಿಯಾವುದೂ ಇಲ್ಲಪ್ಪ
ನಮಗೋಸ್ಕರವೇ ಬೇಕು ಇನ್ನೊಂದು ರೀತಿಯ ಪಂದ್ಯ  

ವೇದಾಂತದ ಹೆಸರಿನಲ್ಲಿ ಕಾಡು ಹರಟೆ; ಬೆಳಿಗ್ಗೆ, ರಾತ್ರಿ
ವೇದಾಂತ ಎಂದುಕೊಂಡು ಬರೀ ಬೊಕಳೆಯ ಟೊಳ್ಳು

ನಮ್ಮ ಪೋಲಿ ರಾಜಕೀಯರನು ಲಂಚದಲಿ ಮೀರಿಸುವರಿಲ್ಲ
ಜಾತಿ ಬೇಧಕ್ಕೆ, ಎಲ್ಲಾ ಜಾತಿಯವರ ದರಿದ್ರಕ್ಕೆ ಕಾರಣ ದಾರ

ಮಂತ್ರಿಯ ಕೆಲಸಕ್ಕೆ ನಮ್ಮ ಜಾತಿಯೇ ಆಗಬೇಕ್ಕು ಸ್ವಾಮಿ
ಬೇರೆಯವರು ಗೆದ್ದಾಗ ಅವರವರ ಜಾತಿಗೆ ಮಂತ್ರಿ ಆಸನ

ಲೂಟಿ ಮಾಡುವುದಕ್ಕೆ ಗಣಿಯ ಕನ್ನ ನಮ್ಮ ಅಮ್ಮನಿಗೆ ಹಾಕಿ
ಕೋಟಿ ಲೆಕ್ಕದಲಿ ನಮಗೆ, ನಮ್ಮ ಜಾತಿಯವರಿಗೆ ಹುಟ್ಟಿನ ಹಕ್ಕು 

ನಮ್ಮ ದೇಶದ ಎಲ್ಲಾ ಬಡತನಕ್ಕೆ ಲೋಕವನ್ನೇ ಬಯ್ಯುವ ಧಿಕ್ಕು; ಹೆಮ್ಮೆಗೇ ತ್ಯಾಗ
ಬಾರಿನ ತೀರ್ಥಕ್ಕೆ ಬಾಯಾರಿಕೆ; ಸೋಮಾರಿ ವೀರರು ನಾವು; ಯಾರಿಗೂ ಕಡಿಮೆಯಲ್ಲ

Tuesday, August 7, 2012

ನಾಲಿಗೆ ಮುಂದೋ? ತಲೆಯು ಮುಂದೋ?


ನಾಲಿಗೆ ಮುಂದೋ? ತಲೆಯು ಮುಂದೋ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಡೆ, ಈರುಳ್ಳಿ ದೋಸೆ, ಮಸಾಲೆ ದೋಸೆ
ರವೆ ದೋಸೆ, ಪೆಸರಟ್ಟು ನಿಧಾನದಿ ಬಂದುವೆ?

ರವೆ ಇಡ್ಲಿ, ಮಸಾಲೆ ಇಡ್ಲಿ, ಡೋಕಳಾ ಗಳು
ನುಚ್ಚಿನುಂಡೆ ನಾಲಿಗೆಗೆ ಬಿದ್ದ ಮೇಲೆ ಬಂದುವೋ?

ಸ್ವಲ್ಪ ಯೋಚನೆ ಮಾಡಿ; ಆಮೇಲೆ ನಾಲಿಗೆಗೆ ಸೇವೆ
ನಾಲಿಗೆ ಮುಂದು, ತಲೆಗೆ ಯಾಕೆ ರಜೆ ಕೊಡುತ್ತೀವಿ?

Saturday, August 4, 2012

ದಾಹವೊಂದಿದ್ದರೆ ಸಾಕು


ದಾಹವೊಂದಿದ್ದರೆ ಸಾಕು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ತುಂಬಿ, ತುಂಬಿ ಉಂಬುವ ದುಂಬಿಯು ಆನು
ಉಂಡು ಕಕ್ಕಿದ ಎಂಜಲು ಅತಿ ಮಧುರ ಜೇನು

ಅಂತರಾತ್ಮದಲಿದೆ ಹಸಿವು ಹಗಲೂ ಇರುಳೂ 
ಸಂತನಂತೂ ನಾನಲ್ಲ, ಚಿಂತನವಿಂತೂ ಬರದು

ದಾಹ ಮಾತ್ರ ಈ ದೇಹದಲಿ ಇಹಕ್ಕೆ ಬಂದಾಗಿತ್ತ್ತು
ಮಹಾ ಮಂತ್ರಗಳ ಅಂತರಾರ್ಥ ಅರಿವಾಗದ ಚಿತ್ತ 

ಭರ ಭರದಿ ಧುಮ್ಮಿಕ್ಕಿ ಸುರಿಯುತ್ತದೆ ಸುರ ಜೇನು 
ಹರ ಸಾರ ಧಾರಾಮೃತ ಉಣಿಸುವ ಕಾಮಧೇನು 

ಚಿತ್ತವ ಚಾಚುವ ಗೋಚಿಲ್ಲ, ಹುಚ್ಚು ಹಿಡಿದರೆ ಸಾಕು
ಮಿತದ ಮಾತೇಕೆ ಅಮೃತಕೆ ದಾಹವೊಂದಿರಬೇಕು 

ಮಡಿಯಲ್ಲಿ ಮ್ಯಾನುಫಾಕ್ಚರ್ರು!


ಮಡಿಯಲ್ಲಿ ಮ್ಯಾನುಫಾಕ್ಚರ್ರು!
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಮಸ್ಕಾರ! ಏನು ಸ್ವಾಮಿ ಬ್ರಾಹ್ಮಣ ಕಳೆ ನಿಮ್ಮ ಮುಖದ ಮೇಲೆ ಪ್ರಜ್ವಲಿಸುತ್ತಾ ಇದೆ?
ಹೋಮ, ಸಹಸ್ರ ನಾಮ, ಅಭಿಷೇಕ, ನೈವೇದ್ಯ ಎಲ್ಲಾ ಈಗ ತಾನೇ ಮಾಡಿರುವ ಹಾಗಿದೆ? 

ಮರೆತೇ ಹೋಯ್ತು! ನಿಮ್ಮ ಉಪಾಕರ್ಮ ಚೆನ್ನಾಗಾಯ್ತೇನು? ಋಗ್ವೇದವೋ ಯಜುರ್ವೆದವೋ?
ಸರಿಗಮ ಕೂಡ ನಿಮ್ಮ ಬಾಯಿಂದ ಹೊರಡಲ್ಲ! ಅದಕ್ಕೆ ನಾನು ಕೇಳಲಿಲ್ಲ ಸಾಮವೇದವೋ?

ಬೇಸರ ಮಾಡಿಕೊಳ್ಳಬೇಡಿ. ನಿಮಗೆ ಹ್ಯಾಗೂ ಯಾವ ವೇದಾನೂ ಬರಲ್ಲಾಂತ ನನಗೂ ಗೊತ್ತು
ಹೊಸ ಜನಿವಾರ ಹಾಕಿ ಕೊಂಡಿರಿ ತಾನೇ? ಮಡಿಯಲ್ಲಿ ಉಪಾಕರ್ಮ ಮಾಡಿದ್ರೀ ಅಂತ ಮಾತು 

ಉಪಾಕರ್ಮದ ಫೋಟೋನೂ, ವೀಡಿಯೋನೂ ಫೇಸ್ ಬುಕ್ಕಿನಲ್ಲಿ ನೋಡಿದೆ; ಚೆನ್ನಾಗಿ ಕಾಣ್ತೀರಿ
ಆಪೋಶನ ತೆಗೆದು ಕೊಳ್ಳುತ್ತಿರುವಾಗಲೂ ಕ್ಯಾಮರಾ ಕಡೆ ಫಿಲಂ ಸ್ಟಾರ್ ತರಹ ಪೋಸ್ ಕೊಟ್ರಿ

ಈ ವರ್ಷದ ಹೊಸತನ ಏನು ಗೊತ್ತಾ? ನಿಮ್ಮ ಯಜ್ಞೋಪವೀತ, ಎಲ್ಲಾ ಪೂಜಾ ಸಾಮಗ್ರಿನ
ಇಂಡಿಯಾಗೆಲ್ಲಾ ಉತ್ಪಾದನೆ ಮಾಡಿ, ರಫ್ತು ಮಾಡಿದ್ದು ಎಲ್ಲಿಂದಾಂತ ಗೊತ್ತಿರಬೇಕಲ್ಲಾ: ಚೈನಾ!

ಕಾಪಿ ಮಯಂ ಜಗತ್

ಕಾಪಿ ಮಯಂ ಜಗತ್
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಬರೀ ಕಾಪಿ: ಕರೀ ಕಾಪಿ, ಬಿಳೀ ಕಾಪಿ, ಕಂದು ಕಾಪಿ, ಹಳದಿ ಬಣ್ಣದ ಕಾಪಿ
ಸರಿಯಾಗಿ ಕುಡಿಸ್ತಾರೆ, ಕದ್ದೂ, ಕದ್ದೂ ಕುಡಿಸ್ತಾರೆ. ಅವರಲ್ಲ ನೀವೇ ಪಾಪಿ

ಬರೆಯುವಾಗ ಕಾಪೀನೆ ಬರೆಯೋದು; ಜರೆಯೋಕ್ಕೆ ಮಾತ್ರ ಚೂರೂ ಮಿತಿಯಿಲ್ಲ
ಮಾರುವಾಗ ಕಾಪಿ ಮಾಡಿದ್ದೆಲ್ಲಾ ಆರ್ಕಿಮಿಡೀಸನ್ನು ಕಾಪಿ ಮಾಡಿದ ಗತ್ತಿನಲ್ಲೇ 

ಬಚ್ಚಲ ಮನೆಯಿಂದ ಬೆತ್ತಲೆ ಓಡಿಬಂದು ಆರ್ಕಿಮಿಡೀಸಿನ ನಾಟಕ ಮಾಡುತ್ತಾ
ಕಚ್ಚೆ ಲಂಗೋಟಿ ಕೂಡ ಇಲ್ಲದೆ ಇವರ ಕಾಪಿಯ ಪಾಪಕರ್ಮದ ಬೆತ್ತಲು ಗೊತ್ತಾ?

ಸತ್ತು ಸ್ವರ್ಗಕ್ಕೋ, ನರಕಕ್ಕೋ ಹೋದಾಗ ಚಿತ್ರ ಗುಪ್ತರಿಗೂ ಬೊಕಳೆ ಕಲಾವಂತಿಕೆ
ಎತ್ತಿ ಇವರನ್ನು ಯಮ ದರ್ಮರಾಯ ಕುಡಿಯುವ ಎಣ್ಣೆಗೆ ಹಾಕಿದರೂ ನಿಜವಿಲ್ಲವೇಕೆ?

ಪಾಪಿಗಳು ಎಲ್ಲಾ ಬಣ್ಣದಲ್ಲೂ ಹುಟ್ಟುತ್ತಾರೆ: ಕಪ್ಪು, ಬಿಳುಪು, ಕಂದು, ಹಳದಿ, ಕೆಂಪು
ಕೋಪಿಸಿಕೊಂಡು ಅವರ ಮುಖದ ಮೇಲೆ ಉಗಿದರೆ, ರೆಡಿಯಾಗಿರುತ್ತೆ ಕಿಸೆಯಲ್ಲಿ ಕರ್ಚೀಪು  

ಯಾವಾಗಲಾದಾರೂ ನೀವು ಮಾಡಿದ್ದೀರೇನು ಕಾಪಿ? ನಿಜವೇನ್ರೀ ನೀವು ಸುಳ್ಳೇ ಹೇಳಲ್ವಾ?
ಯಾವತ್ತಾದರೂ ಅಪ್ಪಟ ಐಡಿಯಾ ಬಂದಿದೆಯೇನ್ರೀ ನಿಮ್ಮ ತಲೆಗೆ? ನೀವಂದಿದ್ದು ನಂಬಲಾ?

ಆಟಮ್ಮಿನಿಂದ ಆತ್ಮ


ಆಟಮ್ಮಿನಿಂದ ಆತ್ಮ
ಕೆ. ಆರ್. ಎಸ್. ಮೂರ್ತಿ

ಆಟಮ್ಮಿಗೂ ಆತ್ಮವುಂಟೇ?
ಆಟಮ್ಮಿಗೂ ಮತ್ತೊಂದಕ್ಕೂ ನಂಟು ಉಂಟೆ?
ಒಂದಕ್ಕಿನ್ನೊಂದರ ತಿಳಿವುಂಟೇ?
ಪ್ರತಿ ಆಟಮ್ಮಿಗೆ ಈ ತತ್ವದ ಅರಿವುಂಟೇ?

ಆಟಮ್ಮುಗಳು ಒಂದೊರ ಮೇಲೆ ಇನ್ನೊಂದು ಟೂ ಬಿಡುವುದುಂಟೆ?
ಬಿಟ್ಟ ಟೂವನ್ನು ಕೊಡವಿ ಮತ್ತೆ ನಂಟ ಕಟ್ಟುವುವುದೂ ಉಂಟೆ?
ಆಟಮ್ಮುಗಳಲ್ಲಿ ಕೆಟ್ಟ ಆಟಮ್ಮುಗಳೂ ಉಂಟೇನು?
ಆಟಮ್ಮುಗಳು ಚಟ್ಟವೇರಿ ತಮ್ಮಾತ್ಮಗಳಿಗೆ ಬೈ ಬೈ ಹೇಳುವುವೆ?

ಆಟಮ್ಮು ಒಂದಕೆ ಆತ್ಮ ಅರ್ಥವಿಲ್ಲದ ಮಾತು ಎಂದಿರೇನು ನೀವು?
ಎಷ್ಟು ಆಟಮ್ಮುಗಳು ಸೇರಿದರೆ ಒಂದು ಜೀವವಾದೀತು?
ಸರಿಯಪ್ಪಾ! ಈ ಆಟಮ್ಮುಗಳು ಸರಿ ರೀತಿಯಲಿ ಸೇರಿದರೆ?
ಜೀವವೆಲ್ಲಕೂ ಆತ್ಮ ಉಂಟೆ?
ಓಹೋ! ಮಾನವ ಜನ್ಮಕ್ಕೆ ಮಾತ್ರ ಆತ್ಮವುಂಟೇ?
ಮಾನವನ ಮುಂಚೆಯಿದ್ದ ಮಂಗಗಳಿಗೆ ಆತ್ಮವಿಲ್ಲ ಸರಿಯೇ?

Friday, August 3, 2012

ಬೃಹತ್ ದತ್ತ / ಬೃಹದ್ದತ್ತ / ಬ್ರಹ್ಮಾಂಡ ದತ್ತ

ಬೃಹತ್ ದತ್ತ / ಬೃಹದ್ದತ್ತ / ಬ್ರಹ್ಮಾಂಡ ದತ್ತ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಪ್ರತಿ ಗಳಿಗೆ, ಗಂಟೆಗಳು ಉರುಳುತಿರೆ, ಅನುದಿನ ಬೆಳಿಗ್ಗೆ
ನೆತ್ತಿಯ ಮೇಲೆ ಪ್ರಭಾಕರ ಏರಿ ಬಿಸಿಲು ಬೀರುತಿರುವಾಗ 

ಅಸ್ತಮ ಗತಿಯನು ಮಂದ ಭಾಸ್ಕರನು ಧಾವಿಸುತಿರುವಾಗ
ಸುಸ್ತಾಗಿ ಜಗವೆಲ್ಲಾ ಉಂಡು ಮಲಗಿದರೂ, ನಿಲ್ಲದ ಹಾಗೆ

ದತ್ತ ಮತ್ತೆ ಮತ್ತೆ, ಕೋಟಿಗಟ್ಟಲೆ ಬೈಟುಗಳು ಪೇರುತಿರುವಾಗ
ಸಪ್ತ ಬಿಲ್ಲಿಯನ್ನು ಜೀವಗಳು ಬಿಟ್ಟುಗಳನ್ನು ಹುಟ್ಟಿಸೆ ಬೃಹತ್ತಾಗಿ 

ನಿತ್ಯ ನೀವೆಲ್ಲ ವಟ ವಟ ಮೊಬೈಲಿನಲಿ ಹರಟೆ ಮೇಲೆ ಹರಟೆ
ಒತ್ತುವರಲ್ಲವೇ ಮೊಬೈಲಿನ ಲಿಪಿ ಮಾಲೆಗಳ ಬಿಡುವಿಲ್ಲದಹಾಗೆ

ಪತ್ರಗಳು ಹತ್ತು, ಇಪ್ಪತ್ತು ಒತ್ತಿ ಅಂತರ್ಜಾಲದಲಿ ತೂರಿಸಿದಾಗ
ಕತ್ತೆತ್ತದೆ ಬೆಟ್ಟು ಹತ್ತೂ ಕುಟ್ಟುವರಲ್ಲವೇ ಕಂಪ್ಯೂಟರಿನ ಭರವಾಗಿ

ರಸ್ತೆಯ ಮೇಲೆ ನಡೆದರೂ, ಪಾರ್ಕಿನಲ್ಲಿ ಧೌಡೆತ್ತಿ ಎದುಸಿರುವಾಗ 
ಮಸ್ತಿನಲಿ ಮರ್ಸಿಡೀಸು ಕಾರಿನಲ್ಲಿ ಝುಮ್ಮಗೆ ಹೋಗುತಿರುವಾಗ 

ಇತ್ತ ಮನೆಯಲ್ಲೇ ಇರಲಿ, ಅತ್ತ ಊರೆಲ್ಲಾ ಅಲೆಯುತಿರಲಿ ತಂತಾನಾಗಿ
ಹತ್ತಿ ವಿದ್ಯುತ್ ಉರಿಯುತಿರೆ ಮನೆಯೊಳಗೆ ಫ್ರಿಜ್ಜು ತಂಗಳಿನ ಆಗಾರವಾಗಿ

ಸುತ್ತಿ, ಸುತ್ತುತ್ತಾ ಇರುವ ಮನೆಯ ವಿದ್ಯುತ್ ಮೀಟರು ದತ್ತ ದಾತಾರವಾಗಿ 
ಎತ್ತೆತ್ತ ಓಡಿದರೂ ಕಾರು ನಿಮ್ಮ ಪತ್ತೆಯೆಲ್ಲವನ್ನೂ ದತ್ತ ರೂಪದಲಿ ಕೂಡಿದಾಗ

ಗೊತ್ತೇ ನಿಮಗೆ ಸಾವಿರಾರು ಕೋಟಿ ಬಿಟ್ಟು, ಬೈಟುಗಳ ಹುಟ್ಟಿಸಿದ್ದೆಲ್ಲಾ ಒಟ್ಟಾಗಿ
ಬರ್ತಿ ಮಾಡುವುದು ದತ್ತ ಕೇಂದ್ರದ ಬೃಹತ್ ಬಂಗಲೆಗಳನ್ನೇ ಆತುರಾತುರವಾಗಿ 

ದತ್ತ ಈ ಪಾಟಿ ಬೆಳೆಯಿತಿರೆ ಇಂತಹ ದತ್ತ ಸಾಮ್ರಾಜ್ಯಕ್ಕೆ ಹೆಸರು ಹೊಸದಾಗಿ 
ಇತ್ತಿಹೆವು 'ಬೃಹತ್ ದತ್ತ', 'ಬೃಹದ್ದತ್ತ'; ಬ್ರಹ್ಮಾಂಡ ದತ್ತ' ಅನ್ನಬೇಕೇನು ಸರಿಯಾಗಿ? 

Thursday, August 2, 2012

ಪ್ರಶ್ನೆಯೊಂದೇ ಸತ್ಯ, ನಿತ್ಯ


ಪ್ರಶ್ನೆಯೊಂದೇ ಸತ್ಯ, ನಿತ್ಯ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಸುತ್ತಿ, ಸುತ್ತಿ, ಸುತ್ತಿ, ಸುಸ್ತಿಲ್ಲವೇನೆ ಪುಟಾಣಿ ಎಲಕ್ಟ್ರಾಣಿ?
ಸುತ್ತುವಾಗ ಉರುಳು ಸೇವೆ, ಒಮ್ಮೊಮ್ಮೆ ಪಲ್ಟಿ ಸುತ್ರಾಣಿ

ಹತ್ತಿರ ಬಾರೋ ಪ್ರೋಟಾಣಯ್ಯ; ವಿದ್ಯುತ್ ಗುಣ ಪೂರ್ಣ
ಹತ್ತಕ್ಕೂ ಹೆಚ್ಚು ಬಿಲಿಯನ್ನು ನನ್ನಾ ನಿನ್ನಾ ವಿದ್ಯುತ್ ಪ್ರಾಣ

ಸತ್ತವಿದ್ಯುತ್ ಗುಣ ಷಂಡ ನ್ಯೂತ್ರಾನಯ್ಯ ಅತೀ ನಿತ್ರಾಣ
ಇತ್ತ ಅತೀ ಬೇಸರದ ಪ್ರಸಂಗ ಕಣೇ ಚಿನ್ನಾರಿ ಬರೀ ಭಣಭಣ

ನ್ಯೂತ್ರಿಣೋ ಹಾವಳಿ ಬಲು ಆಗಿದೆ; ತೂಕವೂ ಇಲ್ಲ ವಿದ್ಯುತ್ತಿhಲ್ಲ
ಕತ್ತೆತ್ತಿ, ಕಣ್ಬಿಟ್ಟು ನೋಡುವುದರೊಳಗೆಯೇ ಪರಾರಿ ಮಾಡ್ತಾನಲ್ಲ

ಮತ್ತೆ, ಮತ್ತೆ ಈ ಮಾನವರೂ ತಮಗೆ ಎಲ್ಲಾ ಗೊತ್ತು ಅಂತಾರಲ್ಲ 
ಸತ್ಯ ಏನು? ಜಗತ್ತೆಲ್ಲಾ ಹೆತ್ತದ್ದು 'ದೇವರು' ಅಂದ್ರೆ ಅರ್ಥ ಆಗಿಲ್ಲ

ಎಂಥದೋ ಭ್ರಮೆಯ ಲೋಕದಲ್ಲಿ ಇದ್ದಾರೆ ಕಣೆ; ಅಂಥಾ ದೇವರಿಲ್ಲ
ಚಿಂತೆ ಮಾಡುವ ವರ ಚೂರು ಮಾತ್ರ ಸಿಕ್ಕಿದೆ ಅವರಿಗೆ ಬೇರೆಯೇನಿಲ್ಲ

ಇತ್ತ ನಾನೂ, ನೀನು ಹತ್ತಿರದಲ್ಲೇ ವಿದ್ಯುತ್ ಪ್ರಣಯದಲ್ಲಿ ಇದ್ದೀವಲ್ಲಾ 
ಇಂಥಾ ಬಂಧನ ನನಗೆ - ನಿನಗೆ ಒಬ್ಬರಿಗೊಬ್ಬರು ಗೊತ್ತು ತಿಳೀತಲ್ಲ?

ಸತ್ತ ವಿದ್ಯುತ್ ನಿತ್ರಾಣಿ ನ್ಯೂಟ್ರಾಣಯ್ಯನಿಗೆ ನೀನೂ ಗೊತ್ತಿರಲಿಕ್ಕಿಲ್ಲ
ಎತ್ತೆತ್ತಲೂ ಅಲೆಯುವ ನ್ಯೂತ್ರಿನೋಗಂತೂ ಯಾರ ಆಸ್ಥೆಯೂ ಇರಲಿಕ್ಕಿಲ್ಲ

ಕತ್ತಲಲ್ಲಿ ಮಿನುಗುವ ಮಿಣುಕು ಹುಳ ಫೋಟಾನ್ ನಮಾಚಾರ ತರ್ತಾನಲ್ಲ
ತರ್ತಾನೇನು ಜಗತ್ತೆಲ್ಲಾ ಹೆತ್ತದ್ದರ ಬಗ್ಗೆ? ಮಿಲಿಯನ್ನು ಮೈಲಿಗೆ ಸುಸ್ತಾಗ್ತನಲ್ಲ

ಕತ್ತಲು ಭೂತ ರಾಯ ಕಬಳಿಸುವ ಫೋಟಾನ್ ಗುಳಿಗೆ ಗುಳುಕ್ ಮಾಡ್ತಾನಲ್ಲ
ಎತ್ತಲೆತ್ತಲೋ ಜಗತ್ತಿನ ಮೂಲೆ ಮೂಲೆಯೆಲ್ಲ ಒಂದಕ್ಕೊಂದು ಗೊತ್ತೇ ಇಲ್ಲಾ!

ಇತ್ತದಕ್ಕೆ ಅತ್ತದು ಇದೆಯೆಂದೂ ಪತ್ತೆ ಇಲ್ಲ; ಎಲ್ಲಕ್ಕೂ ಎಲ್ಲವೂ ಸಂಬಂಧವಿಲ್ಲ
ಇಂಥದು ಹೇಗೆ ಯಾವಾಗ ಬಂತು? ಇದೇಕೆ ಬಂತು? "ಅಂತ್ಯ"ಕ್ಕೂ ಅರ್ಥವೇ ಇಲ್ಲ

Wednesday, August 1, 2012

ಇಲ್ಲ ಅಂದರೆ: ಖಡಾ ಖಂಡಿತವಾಗಿ "ಇಲ್ಲಾ"


ಇಲ್ಲ ಅಂದರೆ: ಖಡಾ ಖಂಡಿತವಾಗಿ "ಇಲ್ಲಾ"
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನಾನಿಲ್ಲ; ಇಲ್ಲೂ, ಅಲ್ಲೂ, ನಿನ್ನ ಮನಕೆ ಎಟುಕುವ ಎಲ್ಲೆಲ್ಲೂ ಇಲ್ಲವೇ ಇಲ್ಲ
ನಾನಲ್ಲ; ಮುನಿಜನ ಮಂಡಿಸಿದವ ಅಲ್ಲ; ಬರೀ ತಪ್ಪು ಋಷಿಗಳು ಬರೆದದ್ದೆಲ್ಲಾ

ಸಿಂಹದ ತಲೆಯಂತೂ ನನಗಿಲ್ಲ; ಬಾಲವಿಲ್ಲ, ಇಲಿಯಲ್ಲ, ಆನೆಯ ಸೊಂಡಿಲಿಲ್ಲ
ಅಹಂ ಬ್ರಹ್ಮ ಅಂದ ಬ್ರಾಹ್ಮಣ ವಟುವಿಗೇನೂ, ಕಿಂಚಿತ್ತೂ ನನ್ನ ಬಗ್ಗೆ ಗೊತ್ತಿಲ್ಲ

ನಾಲ್ಕು ತಲೆ ನನಗಿಲ್ಲ; ತಿಳಿದುಕೋ ಇದು ನನ್ನ ಗುಟ್ಟು: ನನಗೆ ತಲೆಯೇ ಇಲ್ಲ
ಕಾಲೂ, ಕೈಯೂ, ಹೊಟ್ಟೆಯೂ, ನಯನಗಳೂ, ಕಿವಿ, ಮೂಗುಗಳೂ ನನಗಿಲ್ಲ

ನನಗೆ ಕನ್ನಡ ಬರುವುದಿಲ್ಲ; ಸಂಸ್ಕೃತದ ಗಂಧವಂತೂ ಇಲ್ಲ; ನನಗೆ ಹೆಸರಿಲ್ಲ
ಕೊನೆಗಾಲದಲ್ಲಿ ಸುಮ್ಮನೆ ನನ್ನ ಕೂಗಿ ಕರೆಯಲೇ ಬೇಡ; ಸತ್ತ ಮೇಲೆ ನೀನಿಲ್ಲ

ಅತ್ಮವೆಂಬುದಿಲ್ಲ; ಯೋಗ, ಯಾಗ, ತ್ಯಾಗ ಇದಕೆಲ್ಲಾ ನಾನಿನಗೆ ದೊರಕುವುದಿಲ್ಲ
ಔತಣ, ಸಮಾರಾಧನೆ, ದಾನ, ಭಿಕ್ಷೆ ಮಾಡಿದರೆ ಮಾಡಿದರೂ ನನಗೆ ಸೇರುವುದಿಲ್ಲ

ಭಜನೆ, ಪಾರಾಯಣ, ಮಣಮಣ ಮಂತ್ರ ಇವೆಲ್ಲಾ ನನಗೆ ಕೇಳಲು ಕಿವಿಗಳೇ ಇಲ್ಲ
ಕಾಂಚನ, ಮಿಣ ಮಿಣ ಮಣಿಗಳೂ, ವಜ್ರ ವೈಡೂರ್ಯದ ಕಿರೀಟಕೆ ಶಿರವೇ ಇಲ್ಲ

ಇದೆಲ್ಲಾ ನಿನ್ನ ತಲೆಗೆ ತಟ್ಟದಿದ್ದರೆ, ತಿಳಿದುಕೋ ನಿನಗೆ ಅಲ್ಪ, ಸ್ವಲ್ಪವೂ ತಲೆಯೇ ಇಲ್ಲ
ಬಿಡಲ್ಲಾ ಇನ್ನು ಮೇಲಾದರೂ ಮೂಢ ನಂಬಿಕೆಯೆಂದರೆ ಈ ಕವಿತೆಗೆ ಪ್ರಯೋಜನವಿಲ್ಲ

Tuesday, July 31, 2012

ಪೀಚು ಭರದಲಿ ಹಣ್ಣಾದರೆ?


ಪೀಚು ಭರದಲಿ ಹಣ್ಣಾದರೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಎಲೆಲೆ! ಎಲೆ ಮರೆಯ ಪೀಚು ಕಾಯಿ
ಏನಾಯಿತು ನಿನಗೆ? 

ಪೀಚಾದರೆ ಕಾಣದೆಯೇ ಇರುವುದೇ ಅಲ್ಲ;
ಹಣ್ಣಿನ ಘಮವಿರದೆ ಮಂಗವೂ ಮುಟ್ಟದು

ಬೇಗ ಬೇಗ ಬೆಳೆಯುವ ಗಮನ ಇರಲಿ
ಎಲೆಗಿಂತಾ ದೊಡ್ಡದಾಗಿ ಬೆಳೆಯ ಬೇಕು

ಎಲೆ ಹಸಿರಾದರೆ, ನೀ ಕೆಂಪು ಹಣ್ಣು
ಎಲ್ಲೆಲ್ಲೂ ಬೀರಬೇಕು ಕಂಪು ಪಸರಿಸಿ

ಎಲೆಲೆ ಹೆಣ್ಣೇ! ನಾ ತಿನ್ನ ಬೇಕಾದರೆ,
ದೊಡ್ಡ, ಕಂಪು ಬೀರುವ, ಕೆಂಪು ಹಣ್ಣು

ಕೇಳು! ಹೀಗಾಗ ಬೇಕು; ನಾವಿಬ್ಬರೂ ಹೀಗಾಡುತಿರಬೇಕು:

ತುಟಿ ಇಟ್ಟ ಒಡನೆಯೇ ಭರಸದಿ ರಸವನ್ನು ಸೂಸಬೇಕು
ಕಟಿಯನು ಕೈಲಿ ಹಿಡಿದರೆ ಬಿಗಿಯಲಿ, ಸೆಟೆದ ಬಿಲ್ಲಾಗಬೇಕು
ಮುಟ್ಟಿದೊಡೆ ಜಿಂಕೆಯಂತೆ ಚಕ್ಕನೆ ಚಿಮ್ಮಿ ಎಗರುತಿರಬೇಕು
ಮುತ್ತಿಟ್ಟ ಒಡನೆಯೇ ಬಿಸಿ ರಕ್ತ ಮೈಯೆಲ್ಲಾ ಹರಿಯಲೇ ಬೇಕು 
ಒತ್ತಿ, ಒತ್ತಿದ ಎಡೆಯಲೆಲ್ಲಾ ಎದೆಯ ಡವಡವ ಕೇಳುತಿರಬೇಕು

ಹೊತ್ತು ಮೂಡಿದರೂ,
ನೆತ್ತಿಗೇರಿದರೂ,
ಎತ್ತೆತ್ತಲೂ ಕತ್ತಲಾದರೂ,
ಹತ್ತಿರ - ಹತ್ತಿರ ಒತ್ತುತಾ ಇರಬೇಕು

ದೊಡ್ಡ
ಗುಂಡನೆಯ
ಹಣ್ಣಾದ ಹೆಣ್ಣೇ
ಉಣ್ಣುತಿರಬೇಕು
ಗೇಣು ಮೊಳವಾಗಿ
ಅಲೆಯುತಿರಬೇಕು, ಅಳೆಯುತಿರಬೇಕು, ಸುಳಿಯುತಿರಬೇಕು,
ಗೇಲಿ ಮಾಡುತ್ತಾ, ಧಾಳಿ ಮಾಡುತ್ತಾ,ಹೇರಳ ಹಾವಳಿ ಮಾಡುತ್ತಾ
ಗೂಳಿಯಾ ಅಬ್ಬರದಲಿ ತಬ್ಬುತಿರಬೇಕು; ಕೇಳಿಯಾಡುತಿರಬೇಕು
ಸಿಡಿಲು ಬಡಿಯುತಿರಬೇಕು;
ಇಳೆಯೆಲ್ಲಾ ಥರ ಥರ ನಡುಗಿ ಕಂಪಿಸುತಿರಬೇಕು.

Monday, July 30, 2012

ನಾವು ಬೇರೆ; ನಮ್ಮ ಇರುವಿಕೆಯೇ ಬೇರೆ.


ನಾವು ಬೇರೆ; ನಮ್ಮ ಇರುವಿಕೆಯೇ ಬೇರೆ.
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಹೊಸತು ಹೊಸೆಯುವ ಅತೀವ್ರ ಆಸೆ. ಇದು ನನ್ನ ವ್ರತ: ವ್ರತದ ಕಂಕಣ ಕೂಡ ಹೊಸದಿರಬೇಕು. ಹೊಸ ಕಂಕಣವನ್ನು ಉಷೆ ಮೂಡಿದಾಗ ಹೊಸಾದಾಗಿಯೇ ಹೊಸೆಯಬೇಕು. ಹೊಸ ಹೊಸ ಆಸೆ ಹೊತ್ತು, ಹೊತ್ತು ಬೆಳಗ ತಂದಾಗ, ಶ್ವಾಸದ ಪ್ರತಿ ಉಸುರಿಗೆ ಇಂದೇ ಅರಳಿದ ಕುಸುಮದ ಸುವಾಸನೆಯೇ ಬಡಿಯಬೇಕು. ದುಂಬಿಗಳ ಹಿಂಡು ರಭಸದಿ ಬರುವುದಕ್ಕೂ ತುಸು ಮುಂಚೆಯೇ ವನದ ಕುಸುಮಗಳೆಲ್ಲಾ ನನಗೇ ಕಾದಿರುತ್ತವೆ.

ಭೂತದ ಕಸದ ನಾತ ಎಸೆಯದೆಯೇ ಅದರ ಮಲವನ್ನೇ ವರುಷಗಳೆಲ್ಲಾ ಸೇವಿಸುವರ ಸಹವಾಸವೇ ಬೇಡ. ಅವರಿಗೆ ನಿನ್ನೆಯೂ, ಇಂದೂ, ನಾಳೆಯೂ ಒಂದೇ! ಹೊಸತಿಗೆ ಹಸಿವಿಲ್ಲ; ಹೊಸತರ ಘಾಸಿಯಂತೂ ಇಲ್ಲವೇ ಇಲ್ಲ; ಮೀಸೆ ನರೆತರೂ ಮಾಸಿದ ಮನಸು. 

ನನ್ನ, ನನ್ನಂತಹವರ ವರ್ಣವೆ ಬೇರೆ; ನಾವು, ನೀವೂ ಅಂತಹವರೇ ಅಹುದಲ್ಲವೇ? ಬೆಸ ಹೇಳಬೇಡಿ. ನಮಗೆ ವಿಶ್ರಾಂತಿ ಬೇಡ. ವಿಕ್ರಾಂತ ನಾಕ ನಮ್ಮ ನಾಡಿನ ಸಿರಿ ನಾಮ. 

Sunday, July 29, 2012

ಮೂರ್ತಿಯ ಅಮೆರಿಕಾನುಭವ


ಮೂರ್ತಿಯ ಅಮೆರಿಕಾನುಭವ

ನಾ ಬೇರೆ; ನನ್ನ ಕಥೆಯೇರಿದ ರಥದ ಪಥವೇ ಬೇರೆ. ಪುಸ್ತಕ ಹಿಡಿಯಲು ಬಂದವರೇ ಎಲ್ಲರೂ. ಅಂದಿನ ಕನ್ನಡಿಗರು, dಮಿಕ್ಕೆಲ್ಲಾ ಭಾರತೀಯರೂ, ಅಮೇರಿಕಾದಲ್ಲಿ ಓದಲು ಬರುವುದೆಂದರೆ ದೊಡ್ಡಸ್ತಿಕೆ! ಅತ್ಯುನ್ನತ ದರ್ಜೆಯಲ್ಲಿ ಕಾಲೇಜಿಗೆ ಉತ್ತೀರ್ಣತೆಯಲ್ಲಿ ಮೊದಲಿಗರು ಮಾತ್ರ ಬರಿವಂತಿತ್ತು. 

ನನಗೆ ನೇರವಾಗಿ ಪ್ರಾಧ್ಯಾಪಕ ವೃತ್ತಿಯ ಹಿರಿಮೆಯಲ್ಲಿ ಅಮೇರಿಕಾದ ನೆಲದಲ್ಲಿ ಕಾಲಿಡುವ ಲಭ್ಯವೆಂದರೆ ಕೇಳಿದವರು ಬಾಯಿ ಬಿಡುತ್ತಿದ್ದರು. ಹಲವರು ನಂಬಲೇ ಇಲ್ಲ. 

ಬಂದದ್ದಾಯಿತು. ವಿಮಾನದಿಂದ ಇಳಿದ ಮಾರನೆಯ ದಿನವೇ ಪರದೇಶದ ಪ್ರಸಿಧ್ಧ ವಿಶ್ವ ವಿದ್ಯಾಲಯದಲ್ಲಿ ರಂಗ ಪ್ರವೇಶವೂ ಆಗಿಹೋಯಿತು. ನಾನು ಇತರ ಪ್ರಾಧ್ಯಾಪಕರಂತೆ ಕಾಣುತ್ತಿರಲಿಲ್ಲ. ಯಾರೋ ವಿದ್ಯಾರ್ಥಿಯೇ ಎಂದೇ ತಿಳಿದು ಕೊಂಡಿದ್ದವರೇ ಎಲ್ಲರೂ. 

ಕಾಗದದ ಮೇಲೆ ಬರೆಯುವುದಕ್ಕಿಂತ, ತಲೆಯಲ್ಲಿ ಬರೆದುಕೊಳ್ಳುವುದೂ, ವಿಜ್ಞಾನ ಮತ್ತು ತಂತ್ರ ಜ್ಞಾನದ ಕ್ಲಿಷ್ಟ ಗಣಿತಗಳನ್ನೂ, ವಿದ್ಯುತ್ ಮಂಡಲಗಳನ್ನೂ ಮಿದುಳಿನಲ್ಲಿಯೇ ಗುಣುಗುಣಿಸುವುದು ಅತಿಶಯದ ಹವ್ಯಾಸ. ಪಾಠ ಮಾಡುವಾಗ ಇತರ ಪ್ರಾಧ್ಯಾಪಕರೆಲ್ಲಾ ಪುಸ್ತಕದ ಮೊರೆಹೋಗಿ, ಕೈಬರಹದಲ್ಲಿ ಬರೆದುಕೊಂಡು ಬಂದದ್ದನ್ನು ಶಿಸ್ತಿನಲ್ಲಿ ವೈಟ್ ಬೋರ್ಡಿನ ಮೇಲೆ ಕಾಪಿ ಮಾಡಿಕೊಂಡು ಮಾತನಾಡುವುದು ಸಾಮಾನ್ಯವಾದ ಮತ್ತು ಒಪ್ಪಿಗೆಯ ಸಂಪ್ರದಾಯ. ನಾನು ಬರಿಯ ಕೈಯಲ್ಲಿ ರಂಗ ಪ್ರವೇಶವನ್ನು ಮಾಡಿ, ಗಂಟೆಗಟ್ಟಲೆ ಕ್ಲಿಷ್ಟ ತಂತ್ರಜ್ಞಾನ ಮಂಡನೆ ಮಾಡುತ್ತಿದ್ದೆ. ನನಗೆ ಇದೇನೂ ವಿಶೇಷ ವ್ರತವೆನ್ನಿಸುತ್ತಿರಲಿಲ್ಲ. ಜೊತೆಗೆ, ವಿಜ್ಞಾನ ಮತ್ತು ತಂತ್ರ ಜ್ಞಾನದ ಮೂಲ ತತ್ವಗಳನ್ನೂ, ಆಳವಾದ ವಾದಗಳನ್ನೂ ಬಾಳೆಯ ಹಣ್ಣು ಸುಲಿಯುವಂತೆ ವಿದ್ಯಾರ್ಥಿಗಳ ತಲೆಗೆ ತಿನ್ನಿಸುತ್ತಿದ್ದೆ. 

ಸುಮಾರು ಒಂದು ತಿಂಗಳು ಕಳೆದಿರಬಹುದು. ಒಂದು ದಿನ ಯಥಾ ಪ್ರಕಾರದಲ್ಲಿ ಪಾಠ ಮಾಡುತ್ತಿದ್ದೆ. ವೈಟ್ ಬೋರ್ಡಿನ ಕಡೆಗೆ ತಿರುಗಿ ಕೆಲವು ಸಾಲುಗಳನ್ನು ಬರೆದ ಮೇಲೆ, ತಿರುಗಿ ನೋಡಿದಾಗ ವಿದ್ಯಾರ್ಥಿಗಳ ಜೊತೆಗೆ ಹಲವು ಪ್ರಾಧ್ಯಾಪಕರೂ ಕುಳಿತಿರುವುದು ಕಂಡಿತು.    

ಬಾಲ್ಯದಲ್ಲೇ ಮತ್ತು ಹದಿಹರೆಯದಲ್ಲೇ ಕನ್ನಡ ಸಾಹಿತ್ಯದ ದಿಗ್ಗಜಗಳ ಜೊತೆ ಜೊತೆಯೇ ಪ್ರೌಢ ವಿಷಯಗಳಲ್ಲಿ ಭಾಷಣಗಳನ್ನು ಮಾಡಿ ಪಳಗಿದ ನನಗೆ ದಳು ಸಭೆಯಲ್ಲಿ ಯಾರು ಯಾರು ಕುಳಿತಿದ್ದಾರೆ ಎನ್ನುವುದು ಕಣ್ಣು ಒಂದೇ ಸಾರಿ ಮಿಟುಕುವುದರಲ್ಲೇ ಗೊತ್ತಾಗಿ ಬಿಡುತ್ತಿತ್ತು. 

ನನಗೆ ಅರಿವಿಲ್ಲದಂತೆಯೇ ನನ್ನ ಬಹಳ ಹಿರಿಯ ಪ್ರಾಧ್ಯಾಪಕ ಸಹಪಾಟಿಗಳೆಲ್ಲಾ ನನ್ನ ಸಭೆಯಲ್ಲಿ ಕೂತು ನನ್ನ ಬಗ್ಗೆ ನನ್ನೆಲ್ಲಾ ವಿದ್ಯಾರ್ಥಿಗಳೂ ಹೇಳಿದ್ದು ನಿಜವೇ ಎಂದು ತಾವೇ ಪರೀಕ್ಷಿಸಿ ನಮ್ಮ ಡೀನ್ಗೆ ವರದಿ ಒಪ್ಪಿಸಲು ಬಂದಿದ್ದರೆಂದು ಪಾಠವೆಲ್ಲಾ ಮುಗಿದ ಮೇಲೆ ನನಗೆ ಹೇಳಿದರು. 

ಮುಂದೆ ನನ್ನ ವಿದ್ಯಾರ್ಥಿಗಳ ಜೊತೆ ಹಲವು ಸಹಪಾಟಿ ಪ್ರಾಧ್ಯಾಪಕರೂ ಪಾಠ ಕೇಳುವುದು ಸಾಮಾನ್ಯವಾಗಿ ಬಿಟ್ಟಿತು. ನನಗೆ ವಿದ್ಯುತ್ ತಂತ್ರಜ್ಞಾನವೇ ಅಲ್ಲದೆ, ಉದ್ಯಮ ಜ್ಞಾನ, ಕಂಪ್ಯೂಟರ್, ಖಗೋಳ ಶಾಸ್ತ್ರ, ಮತ್ತಿದರ ಜೊತೆಗೆ ಅಂತರ ರಾಷ್ಟ್ರೀಯ ಸಂಗೀತ ತುಲನವನ್ನೂ ಪಾಠ ಮಾಡಲು ಕರೆ ಬಂದಿತು. 

ಮುಂದುವರಿಯುತ್ತದೆ. 

ಸರಿಯೆಂದರೇನು?


ಸರಿಯೆಂದರೇನು?
ಡಾಕ್ಟರ್ ಕೆ. ಆರ್. ಎಸ. ಮೂರ್ತಿ

ಸರಿ ಇರಬೇಕೇನೋ ಸರಿಯೇ; ಯಾರಿಗೆ ಸರಿ, ಯಾರಿಗಿಲ್ಲ
ಇರುವುದೊಂದೇ ಸರಿ ಇರಬಹುದೇ? ಇಲ್ಲಪ್ಪ ಇಲ್ಲವೇ ಇಲ್ಲ

ಬರೀ ಒಂದೇ ತರಹದ ಸರಿ ಮಾತ್ರ ಹುಟ್ಟಲೇ ಇಲ್ಲ, ಗೊತ್ತೇ?
ಪರಿಪರಿ ಸರಿಗಳು ಬೇರೆ ಬೇರೆಯೇ ಕಡೆ ಧಿಡೀರನೆ ಹುಟ್ಟಿತೆ?

ಇದಕ್ಕೆ, ಅದು ಯಾರೆಂದು ಗೊತ್ತಿಲ್ಲ; ಇದು ಇರುವುದೂ ಪತ್ತೆಯಿಲ್ಲ
ಅದಾಗೇ ಆ ಸರಿಯು, ಈ ಸರಿಯನ್ನು "ಅಪ್ಪಣೆಯೇ ಸಾರ್" ಎಂದಿಲ್ಲ

ನಾನೇ ಸರಿ, ಅವರೇ ಸರಿ, ಒಬ್ಬರು ಮಾತ್ರವೇ ಸರಿ ಖರೆ ಎಂದರೆ
ಅನ್ನಿ ನೀವು: ಎಲ್ಲರೂ ಸರಿಯೇ; ಯಾರೂ ಸರಿಯಂತೂ ಆಗಿಹೋದರೆ

ಮಿಕ್ಕವರೂ ತಾವೇ ಸರಿಯೆಂದಾರು; ಅದಕ್ಕೆಯೇ ಸುಮ್ಮನೆ ತಲೆಯಾಡಿಸಿ
ರೊಕ್ಕ ಕೊಟ್ಟರೆ ಸರಿಯಲ್ಲದ್ದೂ ಸರಿಯೇ ಖರೆ; ಕಾಸು ಕೈಗೆ ಬಿಸಿಮಾಡಿಸಿ

ಮಿಕ್ಕ ಬೇರೆ ಬೇರೆ ಸರಿಯಲ್ಲದ್ದು ಸರಿ ಮಾಡುವ ತಂತ್ರ ಸರೀ ಅರಿತುಕೊಳ್ಳಿ
ಹಕ್ಕು ಯಾರಿಗಿದೆ ಗೊತ್ತೇ? ಚೂರಿ, ಪಿಸ್ತೂಲು, ದೊಡ್ಡ ಬಾಂಬು ಪಡೆದುಕೊಳ್ಳಿ

ಲಂಚ, ಮಂಚ ಇವೆಲ್ಲಾ ಗೊತ್ತಿರಬೇಕು; ಗುರೂ, ಬಾಬಾಗಳ ಕಾಲು ಹಿಡಿದು
ಕಾಂಚನ ಸೇವೆ ಮಾಡಲು ಕಲಿಯಬೇಕು; ಸರಿಯೇ ಬಾಯಿಯಿಂದ ಬಂದದ್ದು

ಸರಿಯ ಸೂತ್ರವಿದು; ಖರೆಯ ಸ್ವಾರಸ್ಸ್ಯವಿದು; ದಿಟದ ಗುಟ್ಟಿದು; ಮರೆಯದಿರಿ
ಹರೆಸುವೆ, ಹಾರೈಸುವೆ ನಿಜ ಬೀಜ ಮಂತ್ರ ನಿಮ್ಮ ವಶ; ಮುಂದೆ ಮೆರೆಯುತಿರಿ 

ಕವಿಗೆ ಕವನ ಸಂತಾನ ಮತ್ತೆ ಮತ್ತೆ


ಕವಿಗೆ ಕವನ ಸಂತಾನ ಮತ್ತೆ ಮತ್ತೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಚಿತ್ತದಲಿ ಬಿತ್ತಿದ ಹೊಸತು ಒಂದು, ಮಿದುಳಿನಲ್ಲಿ ಮೊಳಕೆ ಬಿಟ್ಟಿತು
ತಲೆಯ ಮೂಲೆ, ಮೂಲೆಗಳಲಿ ಹಗಲೂ, ಇರುಳೂ ಆವರಿಸಿತ್ತು

ಬೆಳೆಯುತ್ತಾ ಅಬಲೆಯ ಅಂಡದಲಿ ಉಬ್ಬುವಂತೆ ಮಸ್ತಿಷ್ಕವಾಗಿತ್ತು
ಬಸುರಿಯು ತಿಂಗಳುಗಳು ಹೊತ್ತವಳು ಒಂಬತ್ತಕ್ಕೆ ಸುಸ್ತಾದಂತಾಗಿತ್ತು

ಹೊರುವುದು ಭಾರಿಯೇ ಭಾರವೇನೋ ಎಂಬಂತೆ ಹೆರುವಾತುರತೆಯಿತ್ತು
ಬರೆದೇ ತೀರಬೇಕು, ಭರದಲ್ಲಿ ಭಾರವನು ಬರಹದಲಿ ಇಳಿಸಿ ಬಿಡದಹೊರತು

ಕವಿಗೆ ಒಂದೇ? ಎರಡೇ? ಕವನ ಸಂತಾನ ನೂರು, ಸಾವಿರವೇ ಆದೀತು
ಕಾವ್ಯ ಸುಂದರಿಯು ಮತ್ತೆ, ಮತ್ತೆ ಬರುವಂತಹವಳಿಗೆ ತಂತಾನೇ ಮನಸೋತು

Wednesday, July 25, 2012

ನೀವೇನು ಬೇರೆ ಕಂಡಿರಿ?


ನೀವೇನು ಬೇರೆ ಕಂಡಿರಿ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ 

ಇಷ್ಟ ದೇವರಿಗೆ ಈಡುಗಾಯಿ ನೂರೆಂಟು ಒಡೆದಾಯಿತು
ಕಷ್ಟ ಬಂದಾಗ ವೆಂಕಟರಮಣಾ ಎನುತ್ತಾ ಕೂಗಾಯಿತು

ಮಂಗಳಾಂಗನ ಮೂತಿಗೆ ಮಂಗಳಾರತಿ ಬೆಳಗಾಯಿತು
ಗಂಗಾ ನದಿಯಲ್ಲಿ ಮುಳುಗಿ ಲಿಂಗಾರ್ಚನೆ ಸಾಂಗವಾಯಿತು

ಇನ್ನೂ ಏಕೋ ನನ್ನ ಆಸೆಗಳೆಲ್ಲಾ ಈಡೇರಿಲ್ಲಾ ಗೊತ್ತಾಗಿಲ್ಲ
ಏನು ದೇವರೇ ಕಾಕ-ತಾಳೀಯ ವಾದವು ನಿನಗರಿವಾಗಿಲ್ಲವಲ್ಲ

ಜಾತಕದಲ್ಲಿ ಏನೆಲ್ಲಾ ವೈಭವಗಳು ನನಗೆ ಲಭ್ಯವೆಂದು ಬರೆದಿದೆ
ಚಾತಕ ಪಕ್ಷಿಗಿಂತಾ ಆತಂಕ ಅತಿರೇಕ ನನ್ನದೆಂದು ಗೊತ್ತೇ ಇದೆ

ವಿಭೂತಿ, ನಾಮಗಳು ಮೂರು, ಮೈಯೆಲ್ಲಾ ಮುದ್ರೆ, ಲಿಂಗಧಾರಣೆ
ಅಭೂತ ಪೂರ್ವವೋ ಎಂಬಂತೆ ಎಲ್ಲಾ ದೇವರಿಗೂ ಆಯಿತು ಪಾರಣೆ

'ಅಲ್ಲಾ' ಎಂದು ಊರಿಗೆಲ್ಲಾ ಕೇಳುವ ಹಾಗೆ ಕೂಗಿಲ್ಲ; ಕುರಿ ಕಡಿಯಲಿಲ್ಲ
ಸಲ್ಲದ ಗುರುವೆಂದು ಶಿಲುಬೆಗೆ ಕಾಲೂರಿ ಎಸುವನು ತುಸೂ ನೆನಸಿಲ್ಲ

ಯಾರಿರ ಬಹುದು ಅತಿ ಮೂಢರು: ನಂಬಿದವರು ನಾನೂ ಮತ್ತು ನೀವೂ?
ಸರಿಯಾದ ಉತ್ತರ, ಪರಿಹಾರಗಳ ಬೇರೆ ಏನಾದರೂ ಕಂಡಿರಾ ತಾವೂ?

Monday, July 23, 2012

ನಿಮಗೆ ಎಷ್ಟು ನಾಲಿಗೆಗಳು?


ನಿಮಗೆ ಎಷ್ಟು ನಾಲಿಗೆಗಳು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಚಕ್ಕಲಿ ಹಿಟ್ಟೂ, ಉದ್ದಿನ ಹಿಟ್ಟು, ಕೋಡುಬಳೆಯಾ ಮಿಶ್ರಣವೂ
ಚಕ್ಕನೆ ಕುದಿಯುವ ಎಣ್ಣೆಯಲಿ ಬಿದ್ದರೆ ತಾನೇ ರುಚಿ ಗರಿ, ಗರಿಯು

ನಯವಾಗಿ ಬೆಣ್ಣೆ, ತುಪ್ಪಗಳ ಹಾಕಿ ನೀವಿದ ಹೋಳಿಗೆಯಾ ಕಣಕವೆ
ಚೋಯ್ಯನೆ ಬಿಸಿ ಕಾವಲಿಯ ಮೇಲೆ ಅದು ಬಿದ್ದ ಮೇಲೆಯೇ ಅಲ್ಲವೇ

ಬಾಳೆಯೆಲೆಯ ಮೇಲೆ ರಾರಾಜಿಸಿ ನಿಮ್ಮ ನಾಲಿಗೆಗೆ ಕಾಯುವುದು
"ತಾಳು ತುಸು ನಾಲಿಗೆಯೇ" ಎಂದರೆ ಕೇಳದೆ ಜೊಲ್ಲು ಸುರಿಯುವುದು

ಈ ಕೆಲ ಸಾಲುಗಳ ಓದುವಾಗಲೇ ನಿಮ್ಮ ನಾಲಿಗೆ ಒದ್ದೆಯಾಗಿದೆಯಲ್ಲವೇ
ಇದೆಯೇ ಮಜಾ; ಮಿದುಳಿನಲ್ಲೂ ಒಂದು ಬಹು ದೊಡ್ಡ ನಾಲಿಗೆಯಿದೆಯಲ್ಲವೇ!

ನಾಲಿಗೆ ಮೇಲೆ ಕುಣಿಯುವ ಸೂಳೆಯಂತಹ ಸುಳ್ಳು


ನಾಲಿಗೆ ಮೇಲೆ ಕುಣಿಯುವ ಸೂಳೆಯಂತಹ ಸುಳ್ಳು
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಸುಳ್ಳು ಅಮೃತಕ್ಕಿಂತ ಸಿಹಿ; ಸುಳ್ಳೇ ಸ್ನೇಹ ಬಂಧಿಸುವ ಸಾಧನ
ಅಳುಕದೆಯೇ ಸುಳ್ಳು ಕಜ್ಜಾಯ ಹಂಚುವುದನ್ನು ಕಲಿಯೋ ಮನ

ಕುರೂಪಿಗಳನ್ನೆಲ್ಲಾ ಸುರ ರೂಪಿಗಳೋ ಎಂಬಂತೆ ನಂಬಿಸುವಾ
ಭಾರತ ಯುಧ್ಧವನ್ನೇ ಗೆದ್ದು ಕೊಟ್ಟ ಶ್ರೀ ಕೃಷ್ಣನ ಸುಳ್ಳ ಪೂಜಿಸುವಾ

ನಂಬುವರಯ್ಯಾ ನಯವಾಗಿ ನೀವಿದ ಸುಳ್ಳು ತೈಲಾಂಜನವನ್ನೇ
ಉಂಬುವರಯ್ಯಾ ಪರವಾಗಿಲ್ಲ ಸಕ್ಕರೆ ಹೇರಿದ ವಿಷದ ಬಟ್ಟಲನ್ನೇ 

ಊರು ಕೇರಿಗಳಲ್ಲಿ, ರಾಜನರಮನೆಯಲ್ಲಿ ನಿಜಕೆ ಮುಚ್ಚುವರು ಬಾಗಿಲು
ಹಾರುವರಾದರೂ, ಕುರುಬರಾದರೂ, ಸೂಳೆಯೂ, ವ್ಯಾಪಾರಿಗಳೂ 

ದಿನಕ್ಕೊಂದೋ, ಎರಡು, ಮೂರೋ, ನೂರೋ ಎಲ್ಲಾ ಎಣಿಸುವರಾರು
ದೈನ್ಯದಲಿ ಇಷ್ಟ ದೇವರ ಬೇಡುವಾಗಲೇ ಬೊಕಳೆಯನ್ನು ಹೊಡೆಯುವರು

Friday, July 20, 2012

ಕಲೆಯೆಲ್ಲಾ ನಿನಗಿತ್ತ ಸಾಲ


ಕಲೆಯೆಲ್ಲಾ ನಿನಗಿತ್ತ ಸಾಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ನುಡಿಯಿಲ್ಲದಾ, ಅಕ್ಷರಗಳೇ ಇದ್ದಿಲದಾ ಕಾಲವಿತ್ತಲ್ಲವೇ?
ಬಿಡಿಸಿ ಕವಿತೆಯ ಹಾಡುವಾ ಕವಿಗಳೇ ಇರಲಿಲ್ಲವಲ್ಲವೇ?

ಕಡೆದು ಕಲ್ಲಲಿ ಚಿತ್ತಿರವೇ ಬಿತ್ತರಿಸುವಂತೆ ಸಾರಿದರಲ್ಲವೇ
ನಡೆದ, ಓಡಿದ, ಜಿಗಿದಾ ಜಂತು ಮ್ರುಗಗಳನು ಕೆತ್ತಿದರಲ್ಲವೇ?

ಮಂಡೆ ಬಲಿತು ಮಂಗ ಮಾನವನಾಗುವ ಮೊದಲು ಹೇಗಿತ್ತು
ಚಂಡೆ, ಮದ್ದಳೆ ಬದಲು ಕೋತಿ ಕೇಕೆ ಹಾಕಿ ಕುಪ್ಪಳಿಸಿ ಕುಣಿದಿತ್ತು

ನಾಡಿಗನು ನೀನಿರಬಹುದು ಇಂದು; ಕಲೆ ತಲೆಮಾರಿನ ಆಸ್ತಿಯಷ್ಟೆ
ಹಡೆದವಳು ಇಳೆಯಲಿ ಕಲೆಯ ಸಂಪತ್ತೂ ಬದಲಿಸಿದಳು ಅವಳಷ್ಟೇ!